ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌: ಕೊನೆಗೂ ಲೋಕಾಯುಕ್ತರ ನೇಮಕ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಗಾಂಧಿನಗರ (ಪಿಟಿಐ): ಕಳೆದೊಂದು ದಶಕದಿಂದ ಖಾಲಿ ಇದ್ದ ಗುಜರಾತ್‌ ಲೋಕಾಯುಕ್ತ ಸ್ಥಾನಕ್ಕೆ ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ಪಿ. ಬೂಚ್‌ ಅವರನ್ನು ನೇಮಕಮಾಡಿ ರಾಜ್ಯಪಾಲರಾದ ಕಮಲಾ ಬೇನಿವಾಲ್‌ ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ವಿಧಾನ­ಸಭೆ ಸ್ಪೀಕರ್‌ ವಾಜು ವಾಲಾ ಸಮ್ಮುಖ ರಾಜಭವನ­ದಲ್ಲಿ ನಡೆದ ಸಮಾರಂಭದಲ್ಲಿ ನ್ಯಾ. ಬೂಚ್‌ ಅಧಿಕಾರ ಸ್ವೀಕರಿಸಿದರು.

ಈ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಆರ್‌.ಎಂ.ಸೋನಿ ಅವರ ಅಧಿಕಾರಾವಧಿ 2003ರ ಡಿಸೆಂಬರ್‌ಗೆ ಕೊನೆಗೊಂಡಿದ್ದು ನಂತರ ಈ ಸ್ಥಾನ ಖಾಲಿ ಉಳಿದಿತ್ತು. ಲೋಕಾಯುಕ್ತರ ಹುದ್ದೆಗೆ ನೇಮಕ­ಮಾಡುವ ಸಂಬಂಧ ರಾಜ್ಯಪಾಲರ ಜತೆ ಮೋದಿ ಸರ್ಕಾರ 2011ರಿಂದಲೇ ಸಂಘರ್ಷ ನಡೆಸು­ತ್ತಿತ್ತು.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಪದೇ ಪದೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ತಮ್ಮದೇ ರಾಜ್ಯದಲ್ಲಿ ಹತ್ತು ವರ್ಷಗಳಿಂದ ಲೋಕಾಯುಕ್ತರನ್ನು ನೇಮಕಮಾಡುವಲ್ಲಿ ವಿಫಲ­ರಾಗಿದ್ದಾರೆ ಎಂದು ವಿರೋಧಪಕ್ಷ ಕಾಂಗ್ರೆಸ್‌ನಿಂದ ಹಲವು ಬಾರಿ ವಾಗ್ದಾಳಿಗೆ ಒಳಗಾಗಿದ್ದರು.

ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ­ದೆಯೇ ನಿವೃತ್ತ ನ್ಯಾ. ಆರ್‌.ಎ. ಮೆಹ್ತಾ ಅವರನ್ನು 2011ರ ಆ. 25ರಂದು ಲೋಕಾಯುಕ್ತ­ರನ್ನಾಗಿ ನೇಮಕ ಮಾಡಿದ್ದ ರಾಜ್ಯಪಾಲರ ಕ್ರಮ ವಿರೋಧಕ್ಕೆ ಕಾರಣವಾಗಿತ್ತು. ಇದಾದ ನಂತರ ಅಧಿಕಾರವಹಿಸಿ­ಕೊಳ್ಳಲು ನ್ಯಾ.ಮೆಹ್ತಾ ನಿರಾಕರಿಸಿದ್ದ­ರಿಂದ ಬಿಕ್ಕಟ್ಟು ಉಲ್ಬಣಿಸಿತ್ತು. ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಈ ಕದನ ಸುಪ್ರೀಂಕೋರ್ಟ್ ತಲುಪಿದ್ದು ಕೋರ್ಟ್ ರಾಜ್ಯಪಾಲರ ನಿರ್ಧಾರ ಎತ್ತಿಹಿಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT