ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗುಣಮಟ್ಟ ಶಿಕ್ಷಣಕ್ಕೆ ತರಬೇತಿ ಅಗತ್ಯ'

Last Updated 1 ಡಿಸೆಂಬರ್ 2012, 5:55 IST
ಅಕ್ಷರ ಗಾತ್ರ

ಚಿಂತಾಮಣಿ: ಶಿಕ್ಷಣ ಕ್ಷೇತ್ರ ಗುಣಮಟ್ಟ ಆಗಬೇಕಾದರೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಆರ್.ಅಶೋಕ್‌ಕುಮಾರ್ ಅಭಿಪ್ರಾಯ ಪಟ್ಟರು.

ತಾಲ್ಲೂಕು ಆನೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಗೌರಮ್ಮ , ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್‌ರೆಡ್ಡಿ ಕರೆ ನೀಡಿದರು.

ಸಹ ಕಾರ್ಯದರ್ಶಿ ವೆಂಕಟಾ ಚಲಪತಿ,  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಮರನಾಥ್, ಆನೂರು ಗ್ರಾ.ಪಂ.ಅಧ್ಯಕ್ಷ ನರಸಿಂಹನಾಯಕ್, ಗೃಹ ನಿರ್ಮಾಣ ಸಹಕಾರ ಸಂಘದ ಮಾಜಿ ಅಧ್ಯಕ್ಷ ಆಂಜನೇಯರೆಡ್ಡಿ, ಶಿಕ್ಷಕರ ಸಂಘದ ಸದಸ್ಯೆ ಕೆ.ಎಸ್.ಶೋಭಾ, ಶಿಕ್ಷಣ ಸಂಯೋಜಕಿ ನಿರ್ಮಲಾ, ಕೆ.ಎಸ್.ನಾರಾಯಣಸ್ವಾಮಿ ಇದ್ದರು.

ಶಿಕ್ಷಣದಿಂದ ಸಮಾಜ ಸುಧಾರಣೆ
ಗುಡಿಬಂಡೆ: ಹೆಣ್ಣುಮಕ್ಕಳು ಶಿಕ್ಷಣ ಪಡೆದಾಗ ಸಮಾಜದ ಸುಧಾರಣೆ ಸಾಧ್ಯ ಎಂದು ಸಮನ್ವಯಾಧಿಕಾರಿ ಜಿ.ಗಂಗಿರೆಡ್ಡಿ ಕರೆ ನೀಡಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ `ಸಮುದಾಯ ಸಂಚಲನ ಹೆಣ್ಣು ಮಕ್ಕಳಿಗಾಗಿ ನಡೆದ ಜಾಗೃತಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಯೋಜಕಿ ಎಸ್. ಸುಕನ್ಯಾ ಮಾತನಾಡಿದರು. ಇದೇ ವೇಳೆ ಜೀತ ವಿಮುಕ್ತಿ ಕರ್ನಾಟಕ ಕಲಾ ತಂಡದಿಂದ  ಹಲವು ಸಾಮಾಜಿಕ ಕುರಿತಾದ ನಾಟಕಗಳನ್ನು ಪ್ರದರ್ಶಿಸಿದರು.

ಮುಖ್ಯಶಿಕ್ಷಕ ವಿಶ್ವನಾಥರಾವ್, ಶಿಕ್ಷಣ ಇಲಾಖೆ ಸಂಪನ್ಮೂಲ ಅಧಿಕಾರಿ ಆರ್.ಎಸ್.ರಾಮನಾಥ್, ಶಿಕ್ಷಕರಾದ ಅನಸೂಯಮ್ಮ, ರಿಹಾನ್, ಚಲಪತಿ,  ಕ್ಲಸ್ಟರ್ ಸಂಯೋಜಕಿ ವಿ.ನಾಗಮಣಿ ಹಾಜರಿದ್ದರು.

ಕನಕ ಜಯಂತಿ ಇಂದು
ಚಿಂತಾಮಣಿ: ತಾಲ್ಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಡಿ.1ರಂದು ನಗರದ ಗುರುಭವನ ಆವರಣದಲ್ಲಿ ಕನಕ ಜಯಂತಿ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದ್ದಾರೆ.

ಶಾಸಕ ಡಾ.ಎಂ.ಸಿ.ಸುಧಾಕರ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ವಿ.ಮೀನಾ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಸ್ತಬ್ಧಚಿತ್ರಗಳ ಮೆರವಣಿಗೆಯನ್ನು ನಗರಸಭೆ ಅಧ್ಯಕ್ಷೆ ನಾಗರತ್ನಮ್ಮ ಉದ್ಘಾಟಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT