ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಪ್ತಾ `ಬಂಗಾರ'ದ ಸಾಧನೆ

Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ಪೋರ್ಟ್ ಎಲಿಜಬೆತ್ (ಪಿಟಿಐ): ಭಾರತದ ಅಭಿಜಿತ್ ಗುಪ್ತಾ ದಕ್ಷಿಣ ಆಫ್ರಿಕಾದ ಬೋರ್ಡ್‌ವಾಕ್‌ನಲ್ಲಿ ನಡೆದ 19ನೇ ಕಾಮನ್‌ವೆಲ್ತ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಗ್ರ್ಯಾಂಡ್ ಮಾಸ್ಟರ್ ಗುಪ್ತಾ ಅಂತಿಮ ಹಾಗೂ 11ನೇ ಸುತ್ತಿನಲ್ಲಿ ಭಾರತದ ಜಿ. ಆಕಾಶ್ ಅವರೊಂದಿಗೆ ಡ್ರಾ ಸಾಧಿಸಿದರು. ಉತ್ತಮ ಪ್ರದರ್ಶನ ತೋರಿದ ಗುಪ್ತಾ, ಒಂಬತ್ತು ಪಾಯಿಂಟ್‌ಗಳೊಂದಿಗೆ ಟೂರ್ನಿ ವ್ಯವಹಾರ ಅಂತ್ಯಗೊಳಿಸಿದರು. ಗುಪ್ತಾ  ತಮ್ಮಷ್ಟೇ ಪಾಯಿಂಟ್ ಪಡೆದಿದ್ದ ಉಕ್ರೇನ್‌ನ ಫೆಡೊರ್‌ಚುಕ್ ಹಾಗೂ ಹಾಲೆಂಡ್‌ನ ಸೆರ್ಜೆಯ್ ತಿವಿಯಾಕೊವ್ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡರು.

ಇನ್ನುಳಿದಂತೆ ಗ್ರ್ಯಾಂಡ್ ಮಾಸ್ಟರ್ ಭಾರತದ ದಿವ್ಯೇಂದು ಬರುವಾ ಬೆಳ್ಳಿ ಸಾಧನೆ ಮಾಡಿದರೆ, ಎಂ.ಆರ್. ಲಲಿತ್ ಬಾಬು ಕಂಚಿಗೆ ತೃಪ್ತಿ ಪಟ್ಟರು. ಮಹಿಳೆಯರ ವಿಭಾಗದಲ್ಲಿ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಸೌಮ್ಯಾ ಸ್ವಾಮಿನಾಥನ್ ಬೆಳ್ಳಿ ಹಾಗೂ ಮೇರಿ ಆ್ಯನ್ ಗೋಮ್ಸ ಕಂಚು ಗೆದ್ದರು.

ಜೂನಿಯರ್ ವಿಭಾಗದಲ್ಲೂ ಭಾರತ ಉತ್ತಮ ಪ್ರದರ್ಶನ ತೋರಿತು. ಜಿ. ಆಕಾಶ್, ಸಹಜ್ ಗ್ರೋವರ್ ಹಾಗೂ ರಾಕೇಶ್ ಕುಲಕರ್ಣಿ ಕ್ರಮವಾಗಿ ಬಂಗಾರ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಜುಮಾ ಮೆಚ್ಚುಗೆ (ಜೋಹಾನ್ಸ್‌ಬರ್ಗ್ ವರದಿ): ಅಗ್ರಸ್ಥಾನ ಪಡೆದ ಅಭಿಜಿತ್ ಗುಪ್ತಾ ಅವರಿಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೊಬ್ ಜುಮಾ ಚಿನ್ನದ ಪದಕ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT