ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಗಳ ಗುಣಗಾನ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೊರಗಡೆ ಮಳೆ ಬರುವ ಹಾಗಿತ್ತು... ಒಳಗೆ ಸಂಪೂರ್ಣ ಹವಾನಿಯಂತ್ರಿತ ಕೊಠಡಿಯಲ್ಲಿ ಗುರುಗಳ ಪಾತ್ರ, ಕೊಡುಗೆಯ ಬಗ್ಗೆ ದೊಡ್ಡ ಸಂವಾದವೇ ನಡೆದಿತ್ತು. ಅದರಲ್ಲಿ ಏನು ವಿಶೇಷ ಎಂದಿರಾ?

ತಮ್ಮನ್ನು ತಿದ್ದಿ ತೀಡಿ ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಗಳಿಸಿಕೊಳ್ಳಲು ದಾರಿ ತೋರಿಸಿದ ಶಿಕ್ಷಕರ ಬಗ್ಗೆ ಬಗ್ಗೆ ಮಾತನಾಡುತ್ತಿದ್ದವರು ಸಮಾಜದ ಮುಖ್ಯವಾಹಿನಿಗಳಲ್ಲಿ ಹೆಸರು ಮಾಡಿರುವ ಗಣ್ಯರು.

ಮಿಲ್ಲರ್ಸ್ ರಸ್ತೆ ವಿಕ್ರಂ ಆಸ್ಪತ್ರೆ ಆಯೋಜಿಸಿದ್ದ ಶ್ರೇಷ್ಠ ಶಿಕ್ಷಕರ ಸನ್ಮಾನದಲ್ಲಿ ಗಣ್ಯರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದು ಹೀಗೆ...

ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ
`ಪ್ರತಿ ಸಲ ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಸಾಕಾಗಿಹ್ದೋಗಿತ್ತು. ಇಂದು ಸ್ವಲ್ಪ ಡಿಫರೆಂಟ್ ಆಗಿ ನನ್ನ ಬಾಲ್ಯದ ಬಗ್ಗೆ ಮಾತನಾಡುತ್ತೇನೆ. ಶಾಲಾ ದಿನಗಳಲ್ಲಿ ನಮ್ಮ ಶಿಕ್ಷಕರು ಹೇಳಿಕೊಟ್ಟು ನೈತಿಕ ಶಿಕ್ಷಣವನ್ನು ಎಂದೂ ಮರೆಯಲಾರೆ.

ಯಾವುದೇ ಕಾರಣಕ್ಕೂ ಒಂದು ಬಾರಿ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳಬಾರದು ಎಂದು ಹೇಳಿಕೊಟ್ಟ ಮಾತುಗಳು ಇಂದಿಗೂ ಜೀವನದಲ್ಲಿ ಅಳವಡಿಸಿಕೊಂಡಿದ್ದೆನೆ. ಇಂದೂ ನಾನು ಏನಾದರೂ ಸಮಾಜದಲ್ಲಿ ಸ್ವಲ್ಪ ಹೆಸರು ಮಾಡಿದ್ದಿನಿ ಅದರ ಪೂರ್ಣ ಕೀರ್ತಿ ನನ್ನ ಶಿಕ್ಷಕರಿಗೆ ಸಲ್ಲಬೇಕು~.

ನಟ ರಮೇಶ್ ಅರವಿಂದ

`ದೇವರು ಜೀವನದಲ್ಲಿ ಎಲ್ಲವನ್ನು ಬ್ಯಾಲೆನ್ಸ್ ಆಗಿ ಇಟ್ಟಿರುತ್ತಾನೆ. ಪ್ರಪಂಚದ ಅಷ್ಟ ಐಶ್ವರ್ಯಗಳನ್ನು ಒಂದು ತಕ್ಕಡಿಯಲ್ಲಿ ಇಟ್ಟು ನಮಗೆ ಕಲಿಸಿದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತ್ತೊಂದು ತಕ್ಕಡಿಯಲ್ಲಿ ಹಾಕಿದರೆ ಶಿಕ್ಷಕರಿರುವ ತಕ್ಕಡಿಗೇ ಬೆಲೆ ಜಾಸ್ತಿ.
 

ಕಾರಣ, ಜೀವನದಲ್ಲಿ ಬಂಡೆ ಕಲ್ಲಿನಂತಿರುವ ನಮ್ಮಲ್ಲಿ ಕನಸು ಮತ್ತು ಬದುಕುವ ಛಲವನ್ನು ತುಂಬುವವರು ಶಿಕ್ಷಕರು. ಅವರ ಕಲಿಸುವ ವಿದ್ಯೆಯಿಂದ ಜೀವನದಲ್ಲಿ ನಾವು ಉನ್ನತ ಮಟ್ಟಕ್ಕೆ ಬರುತ್ತಿವೆ. ಆದರೆ ಮುಂದೆ ಕನಿಷ್ಠ ಒಂದು ದಿನವೂ ಅವರನ್ನು ನೆನಸಿಕೊಳ್ಳುವುದಿಲ್ಲ. ಇದು ಬೇಸರದ ಸಂಗತಿ~.

`ಇವತ್ತು ನಾನು ಏನಾಗಿದ್ದೇನೋ ಅದಕ್ಕೆ ನನಗೆ ಜೀವನದಲ್ಲಿ ಧೈರ್ಯ ತುಂಬಿದ ನನ್ನ ಶಿಕ್ಷಕರು ಕಾರಣ. ನನಗೆ ನೆನಪಿರುವ ಹಾಗೇ ಏಳನೇ ತರಗತಿಯಲ್ಲಿ ಪ್ರಥಮ ಬಾರಿಗೆ ಸ್ಟೇಜ್ ಶೋನಲ್ಲಿ ಅಡುಗೆ ಭಟ್ಟನ ಪಾತ್ರ ಮಾಡಿದ್ದೆ.

ಅದರೆ ಅದರಲ್ಲಿ ಬರುವ ನಾಯಕಿ ನನ್ನೊಂದಿಗೆ ಅಭಿನಯಿಸಲು ಹಿಂಜರಿದಳು. ಆದರೂ ನನ್ನ ಶಿಕ್ಷಕ ರಾಮಕೃಷ್ಣ ಅವರು ನನಗೆ ಸ್ಟೇಜ್ ಮೇಲೆ ಹೋಗಿ ಏನು ಬರುತ್ತದೋ ಅದನ್ನು ಹೇಳಿ ನಾಟಕ ಮುಗಿಸಿ ಬಾ ಎಂದರು. ನನಗೆ ದಿಕ್ಕು ತೋಚಲಿಲ್ಲ.

ಆದರೂ ಧೈರ್ಯವಾಗಿ ಮುಗಿಸಿದೆ. ಎಂಟನೇ ತರಗತಿಯಲ್ಲಿ ಡಿಬೇಟ್‌ನಲ್ಲಿ ನನ್ನ ಶಿಕ್ಷಕಿ ಮೀನಾ ಅವರ ತುಂಬಿದ ಧೈರ್ಯದಿಂದ ನಾನು ಚೆನ್ನಾಗಿ ಮಾತನಾಡಲು ಕಲಿತೆ~.

ನೃತ್ಯ ಕಲಾವಿದೆ ಸುಭಾಷಿಣಿ ವಸಂತ್
`ನನ್ನ ಶಿಕ್ಷಕಿ ನನಗೊಂದು ಆಟೋಗ್ರಾಫ್ ಬರೆದುಕೊಟ್ಟಿದ್ದರು. ಅದರಲ್ಲಿ ಒಂದು ಬಾರಿ ಒಡೆದ ಮೊಟ್ಟೆ ಮತ್ತು ಒಂದು ಬಾರಿ ಆಡಿದ ಮಾತು ಮಗಿದು ಹೋದ ಕಥೆಯಂತೆ ಹಾಗಾಗಿ ಜೀವನದಲ್ಲಿ ಪ್ರತಿಯೊಂದನ್ನು ಜಾಗರೂಕತೆಯಿಂದ ಮಾಡಬೇಕು ಎಂದು ಬರೆದಿದ್ದರು. ಅದು ಇಂದಿಗೂ ನನಗೆ ಹೆಚ್ಚು ಆಪ್ತವೆನಿಸುತ್ತದೆ.

ಪತ್ರಕರ್ತೆ ವಸಂತಿ ಹರಿಪ್ರಕಾಶ್
`ನನ್ನ ಶಿಕ್ಷಕರಿಂದ ಹಿಂದಿ ಮತ್ತು ಗಣಿತದಲ್ಲಿ ಹೆಚ್ಚು ಅಂಕಗಳಿಸಲು ಸಾಧ್ಯವಾಯಿತು. ಒಂದು ಬಾರಿ ಶಿಕ್ಷಕರೊಬ್ಬರು ದಕ್ಷಿಣ ಭಾರತದ ಹೆಣ್ಣು ಮಕ್ಕಳಿಗೆ ಹಿಂದಿ ಭಾಷೆ ಕಲಿಕೆ ಕಷ್ಟ , ಗಣಿತ ಕಬ್ಬಿಣದ ಕಡಲೆ ಎಂದು ಹೇಳಿದ್ದರು.

ಅದನ್ನು ಛಲವಾಗಿ ತೆಗೆದುಕೊಂಡು ಉತ್ತರ ಭಾರತಿಯರಿಗಿಂತ ಹೆಚ್ಚು ಅಂಕವನ್ನು ಹಿಂದಿ ಮತ್ತು ಗಣಿತದಲ್ಲಿ ಪಡೆದೆ.ಮಾಜಿ ಭಾರತ ಸುಂದರಿ ರೇಖಾ ಹಂದೆ  ಕೂಡ ಬದುಕಿನಲ್ಲಿ ಮುಂದೆ ಬರಲು ಕಾರಣರಾದ ಶಿಕ್ಷಕರನ್ನು ಸ್ಮರಿಸಿಕೊಂಡರು. ಇದೇ ಸಂದರ್ಭದಲ್ಲಿ ಒಟ್ಟು 15 ಶಾಲೆಯ 45 ಶಿಕ್ಷಕರನ್ನು ಸನ್ಮಾನಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT