ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲ್ಬರ್ಗ ದಲ್ಲಿ ಭಾರೀ ಮಳೆ: ನಗರ ಜಲಾವೃತ, ಸಂಚಾರ ಅಸ್ತವ್ಯಸ್ತ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ಗುಲ್ಬರ್ಗದಲ್ಲಿ ಮಂಗಳವಾರ ಮುಂಜಾನೆ 12 ಸೆ.ಮೀ.ಗೂ ಅಧಿಕ ಮಳೆ ಸುರಿದ ಪರಿಣಾಮ ನಗರದ ಪ್ರಮುಖ ಸ್ಥಳಗಳು, ರಸ್ತೆಗಳು ಜಲಾವೃತಗೊಂಡವು.

ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಆರಂಭಗೊಂಡ ಭಾರಿ ಮಳೆಯು ಬೆಳಿಗ್ಗೆ 9ರ ತನಕ ಎಡೆಬಿಡದೆ ಸುರಿಯಿತು.  ನಗರದ ಲಾಲ್‌ಗೇರಿ ಕ್ರಾಸ್, ಸುಂದರ ನಗರ, ಬಾಪುನಗರ, ಜನತಾ ಲೇಔಟ್ ಮತ್ತಿತರ ತಗ್ಗು ಪ್ರದೇಶದ ಮನೆ, ಅಂಗಡಿಗಳಿಗೆ ನೀರು ನುಗ್ಗಿತು.

ಸುಂದರ ನಗರದಲ್ಲಿ ಮನೆಯೊಂದು ಭಾಗಶಃ ಕುಸಿದು ಬಿದ್ದಿದೆ. ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡ ಪರಿಣಾಮ ಮಧ್ಯಾಹ್ನ ತನಕ ಸಂಚಾರ ದುಸ್ತರವಾಗಿತ್ತು. ಉಳಿದಂತೆ ಜಿಲ್ಲೆಯಾದ್ಯಂತ ಸೇಡಂ 4 ಸೆ.ಮೀ., ಖಜೂರಿ 3 ಸೆ.ಮೀ., ಚಿತ್ತಾಪುರ 2 ಸೆ.ಮೀ., ಜೇವರ್ಗಿ 1 ಸೆ.ಮೀ. ಮಳೆಯಾಗಿದೆ.

ಕನಿಷ್ಠ ತಾಪಮಾನವು 24 ರಿಂದ 20 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಗರಿಷ್ಠ ತಾಪಮಾನದಲ್ಲೂ ತೀವ್ರ  ಇಳಿಕೆಯಾಗಿದೆ. ವಾರದಿಂದ ಬಿಸಿಲಿಗೆ ತತ್ತರಿಸಿದ್ದ ಸೂರ್ಯ ನಗರಿಯಲ್ಲಿ ಮಂಗಳವಾರ ಸೂರ್ಯನ ದರ್ಶನವೇ ಅಸ್ಪಷ್ಟವಾಗಿತ್ತು. ಸಂಜೆ ತನಕವೂ ಮೋಡ ಕವಿದ ವಾತಾವರಣವಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT