ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಭರವಸೆ ನೀಡಿದ ಡರೆನ್ ಸಮಿ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯುವ ಭರವಸೆಯನ್ನು ವೆಸ್ಟ್‌ಇಂಡೀಸ್ ತಂಡದ ನಾಯಕ ಡರೆನ್ ಸಮಿ ನೀಡಿದ್ದಾರೆ.

`ಲಂಕಾದ ಸಂತೋಷವನ್ನು ಹಾಳುಗೆಡುವಲು ಸಜ್ಜಾಗಿದ್ದೇವೆ. ನಾವು ಗೆಲುವಿನ ಉದ್ದೇಶ ಇಟ್ಟುಕೊಂಡು ಇಲ್ಲಿಗೆ ಬಂದಿದ್ದೇವೆ. ಅದಕ್ಕಾಗಿ ಒಂದು ತಡೆ ದಾಟಬೇಕು. ಆ ಬಳಿಕ ದೊಡ್ಡ ಪಾರ್ಟಿ ಮಾಡಲಿದ್ದೇವೆ~ ಎಂದು ಶನಿವಾರ ಹೇಳಿದರು.

ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ವಿಂಡೀಸ್ ತಂಡದ ಮಾಜಿ ನಾಯಕ ಕ್ಲೈವ್ ಲಾಯ್ಡ ಈ ತಂಡಕ್ಕೆ ಇ-ಮೇಲ್ ಮೂಲಕ ಶುಭಾಶಯ ಕಳುಹಿಸಿದ್ದಾರೆ. `ಇದುವರೆಗಿನ ಆಟಕ್ಕೆ ಲಾಯ್ಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೈನಲ್ ಗೆದ್ದು ಬರುವಂತೆ ಅವರು ಹೇಳಿದ್ದಾರೆ~ ಎಂದು ಸಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT