ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಹಾದಿಗೆ ಮರಳಿದ ಭಾರತ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು: ಅಜಯ್ ಕುಮಾರ್ ರೆಡ್ಡಿ (128, 43ಎಸೆತ) ಮತ್ತು ಹನುಮಾನ್ ಪೂನಿಯಾ (120, 50ಎಸೆತ) ಅವರ ಶತಕದ ನೆರವಿನಿಂದ ಭಾರತ ತಂಡ ಅಂಧರ ಚೊಚ್ಚಲ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ನೇಪಾಳ ವಿರುದ್ಧ 249 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಶುಕ್ರವಾರ ಪಾಕಿಸ್ತಾನ ಎದುರು ಸೋಲು ಕಂಡಿದ್ದ ಆತಿಥೇಯರು ನೇಪಾಳವನ್ನು ಸೋಲಿಸುವ ಮೂಲಕ ಮತ್ತೆ ಗೆಲುವಿನ ಹಾದಿಗೆ ಮರಳಿದರು. ಆದಿತ್ಯ ಗ್ಲೋಬಲ್ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಎದುರಾಳಿ ತಂಡವನ್ನು ಕೇವಲ 93 ರನ್‌ಗೆ ಆಲ್‌ಔಟ್ ಮಾಡಿತು.

ಇದೇ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೂರು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಸೆಂಟ್ರಲ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಇತರ ಪಂದ್ಯಗಳಲ್ಲಿ ಪಾಕ್ ತಂಡ ಬಾಂಗ್ಲಾದೇಶದ ವಿರುದ್ಧ ಹತ್ತು ವಿಕೆಟ್ ಗೆಲುವು ಪಡೆದರೆ, ಮತ್ತೊಂದು ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ  ದಕ್ಷಿಣ ಆಫ್ರಿಕಾ ತಂಡವನ್ನು ಹತ್ತು ವಿಕೆಟ್‌ಗಳಿಂದ ಸೋಲಿಸಿತು. ಶತಕ ಗಳಿಸಿದ ಹೆಲ್ಡನ್ ಫೋರ್ಡ್ ವಿಂಡೀಸ್ ತಂಡದ ಗೆಲುವಿಗೆ ಕಾರಣರಾದರು.

ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 342. (ಅಜಯ್ ಕುಮಾರ್ ರೆಡ್ಡಿ 128, ಹನುಮಾನ್ ಪೂನಿಯಾ 120, ಸುಭಾಷ್ ಬೋಯಾ 58). ನೇಪಾಳ 14.3 ಓವರ್‌ಗಳಲ್ಲಿ 93. ಫಲಿತಾಂಶ: ಭಾರತಕ್ಕೆ 249 ರನ್‌ಗಳ ಗೆಲುವು. ಪಂದ್ಯ ಶ್ರೇಷ್ಠ: ಹನುಮಾನ್ ಪೂನಿಯಾ.

ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 193 (ಆರ್. ಲಾವ್ರೆನ್ಸ್ 57, ಸೇನ್ ಚೆವಾನ್ 45, ರ‌್ಯಾಡ್ನಿ ರಾಮರಥನ್ 40). ವೆಸ್ಟ್ ಇಂಡೀಸ್ 14.3 ಓವರ್‌ಗಳಲ್ಲಿ  ವಿಕೆಟ್ ನಷ್ಟವಿಲ್ಲದೆ 194. (ಹೆಲ್ಡನ್ ಫೋರ್ಡ್ ಅಜೇಯ 105, ಜಾರ್ಜ್ ಸ್ಟುವರ್ಟ್ ಅಜೇಯ 59). ಫಲಿತಾಂಶ: ವೆಸ್ಟ್ ಇಂಡೀಸ್‌ಗೆ ಹತ್ತು ವಿಕೆಟ್ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT