ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಡಯ್ಯನದೊಡ್ಡಿ; ಸಮಸ್ಯೆಗಳ ತೊಟ್ಟಿ

Last Updated 5 ಡಿಸೆಂಬರ್ 2012, 6:47 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ
ಭಾರತೀನಗರ: ಸಮೀಪದ ಗೌಡಯ್ಯನದೊಡ್ಡಿ ಗ್ರಾಮವು ಹತ್ತು ಹಲವು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ.
ಭಾರತೀನಗರದಿಂದ 3ಕಿ.ಮೀ.ದೂರದದಲ್ಲಿರುವ ಈ ಗ್ರಾಮವು ದೊಡ್ಡಅರಸಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಈ ಗ್ರಾಮದಲ್ಲಿ ಅಂದಾಜು 550 ಜನಸಂಖ್ಯೆ ಇದೆ. ಇಲ್ಲಿಂದ ಒಬ್ಬರು ಗ್ರಾಮ ಪಂಚಾಯಿತಿ ಆಯ್ಕೆಯಾಗಿದ್ದಾರೆ. ಪುಟ್ಟ ಗ್ರಾಮವಾಗಿದ್ದರೂ ಸರಿಯಾದ ಮೂಲ ಸೌಕರ್ಯಗಳಿಲ್ಲ,

ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಇಲ್ಲ. ನೀರು ಸಂಗ್ರಹಿಸಲು ಟ್ಯಾಂಕ್ ಇಲ್ಲ. ಕಿರು ನೀರು ಸರಬರಾಜು ವ್ಯವಸ್ಥೆಯೂ ಕೂಡ ಇಲ್ಲ. ವಿದ್ಯುತ್ ಸರಬರಾಜು ಇದ್ದಾಗ ಕೊಳವೆಬಾವಿಯಿಂದ ನೇರವಾಗಿ ನಲ್ಲಿಗಳಿಗೆ ನೀರು ಹರಿಸುತ್ತಾರೆ. ವಿದ್ಯುತ್ ಇಲ್ಲ ಎಂದರೇ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುತ್ತದೆ. ಅನಿಯಮಿತ ವಿದ್ಯುತ್ ಸರಬರಾಜಿನಿಂದಾಗಿ ತೊಂದರೆ ತಪ್ಪಿದ್ದಲ್ಲ.

ಚರಂಡಿ ವ್ಯವಸ್ಥೆಯೂ ಸರಿಯಿಲ್ಲ. ಚರಂಡಿಗಳಲ್ಲಿ ಗಿಡಗಳು ಬೆಳೆದು ನಿಂತಿರುವ ಪರಿಣಾಮ ತ್ಯಾಜ್ಯ ನೀರು ಸಲೀಸಾಗಿ ಹರಿದು ಹೋಗಲು ಸಾಧ್ಯವಿಲ್ಲ. ಪರಿಣಾಮ ಅವು ರೋಗ ರುಜಿನಗಳ ತಾಣಗಳಾಗಿವೆ. ಇದಕ್ಕೆ ಪರಿಹಾರ ಒದಗಿಸಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ಗೌಡಯ್ಯನದೊಡ್ಡಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇದೆ. 1ರಿಂದ 5ನೇ ತರಗತಿಯವರೆಗೆ ಮಾತ್ರ ಶಿಕ್ಷಣ ನೀಡಲಾಗುತ್ತಿದೆ. ಅಂಗನವಾಡಿಗೆ ಸೂಕ್ತ ಕಟ್ಟಡ ಇಲ್ಲ. ಬೇರೆಯವರ ಮನೆ ಪಡಸಾಲೆಯಲ್ಲಿ ಅಂಗನವಾಡಿಯಲ್ಲಿ ಮಕ್ಕಳು ದಿನ ನೂಕುತ್ತಿದ್ದಾರೆ.

ಕಳೆದ ವರ್ಷ ಭಾರತೀ ಎಜುಕೇಷನ್ ಟ್ರಸ್ಟ್ ತನ್ನ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಅಭಿವೃದ್ಧಿಗೊಳಿಸಲು ಗ್ರಾಮವನ್ನು ದತ್ತು ತೆಗೆದುಕೊಂಡಿತ್ತು. ಅಲ್ಪ-ಸ್ವಲ್ಪ ಚರಂಡಿ ಕಾಮಗಾರಿ ಬಿಟ್ಟರೆ ಗ್ರಾಮದ ಸಮಗ್ರ ಅಭಿವೃದ್ಧಿಯಾಗಿಲ್ಲ ಎಂದು ಗ್ರಾಮದ ಕೆಲ ಮುಖಂಡರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT