ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಆವರಣ ಗೋಡೆ ತೆರವು

Last Updated 29 ಜನವರಿ 2011, 9:30 IST
ಅಕ್ಷರ ಗಾತ್ರ

ಕುಣಿಗಲ್: ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಆವರಣ ಗೋಡೆಯನ್ನು ಪುರಸಭೆ ಯಾವುದೇ ಮುನ್ಸೂಚನೆ ನೀಡದೆ ಕೆಡವಿರುವ ಕ್ರಮದ ಬಗ್ಗೆ ಸಾರ್ವಜನಿಕರು ಹಾಗೂ ಗ್ರಂಥಾಲಯ ಮೇಲ್ವಿಚಾರಕ ಸಂಘದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 1988ರಲ್ಲಿ ಪಟ್ಟಣದ ಸಂತೆಮೈದಾನದ ಜಾಗದಲ್ಲಿ ಸಾರ್ವಜನಕರ ಅನುಕೂಲಕ್ಕಾಗಿ ಅಂದಿನ ಶಾಸಕ ವೈ.ಕೆ.ರಾಮಯ್ಯ ಅವರು ಪುರಸಭೆಯಿಂದ ನಿವೇಶನವನ್ನು ಮಂಜೂರು ಮಾಡಿಸಿ ಗ್ರಂಥಾಲಯವನ್ನು ನಿರ್ಮಿಸಿದ್ದರು, ಕಾಲಕ್ರಮೇಣ ಕಟ್ಟಡ ಸಂಪೂರ್ಣ ಶಿಥಿಲವಾಗಿ ಮೇಲ್ಛಾವಣಿ ಕುಸಿಯುವ ಹಂತಕ್ಕೆ ತಲುಪಿತ್ತು. ಸಾರ್ವಜನಿಕರ ಮನವಿ ಮತ್ತು ಪತ್ರಿಕೆಗಳಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ, ಗ್ರಂಥಾಲಯ ಇಲಾಖೆಯು 2.5ಲಕ್ಷ ರೂಪಾಯಿಗಳ ವೆಚ್ಚದಲ್ಲಿ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿತ್ತು.

ಗ್ರಂಥಾಲಯದ ಮುಂಭಾಗದಲ್ಲಿ ವಾಹನಗಳ ಕಳ್ಳತನ ಹೆಚ್ಚಾಗಿ ಸಂತೆ ದಿನ ದೂಳಿನಿಂದ ಆವೃತ್ತವಾಗಿ ಗ್ರಂಥಾಲಯಕ್ಕೆ ಬರುವವರಿಗೆ  ಕಿರಿಕಿರಿಯಾಗುವುದರ ಜೊತೆಗೆ ಶುಚಿತ್ವ ಕಾಪಾಡಲು ಸಮಸ್ಯೆಯಾಗುತ್ತಿತ್ತು. ಈ ಕಾರಣದಿಂದಾಗಿ ದುರಸ್ತಿಗಾಗಿ ಬಂದ ಹಣದಲ್ಲಿ ಗ್ರಂಥಾಲಯಕ್ಕೆ ಸೇರಿದ ಜಾಗದಲ್ಲಿ ಆವರಣಗೋಡೆಯನ್ನು ನಿರ್ಮಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಪುರಸಭೆ ಬಿಲ್ ಕಲೆಕ್ಟರ್ ಯಾವುದೇ ಮುನ್ಸೂಚನೆ ನೀಡದೆ ಸಿಬ್ಬಂದಿ ಜೊತೆ ತೆರಳಿ ಆವರಣ ಗೋಡೆಯನ್ನು ಕೆಡವಿದರು.

ಪಟ್ಟಣದಲ್ಲಿ ಸುಮಾರು ಸಾರ್ವಜನಿಕ ಸ್ಥಳಗಳು ಒತ್ತುವರಿಯಾಗಿವೆ. ಪುರಸಭೆಯಿಂದ ಯಾವುದೇ ಪರವಾನಗಿಯನ್ನು ಪಡೆಯದೆ ನೂರಾರು ಕಟ್ಟಡಗಳು ನಿರ್ಮಾಣಗೊಂಡಿವೆ. ಇದಾವುದರ ಬಗ್ಗೆ ಕ್ರಮ ಕೈಗೊಳ್ಳದೆ ಗ್ರಂಥಾಲಯದ ಆವರಣ ಗೋಡೆಯನ್ನು ಅಧಿಕಾರಿಗಳ ಗಮನಕ್ಕೆ ತರದೆ ಏಕಾಏಕಿ ಕೆಡವಿ ಹಾಕಿರುವುದು ಖಂಡನೀಯ ಎಂದು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಆಧ್ಯಕ್ಷ ಸಿ.ವೈ.ಶಿವರಾಜು ಹಾಗೂ ಓದುಗರಾದ  ಗೋಪಾಲಪ್ಪ, ಅಫೀಸ್, ಹರಪ್ರಸಾದ್, ಕೆ.ಜಿ.ವೆಂಕಟೇಶ್, ಉಮೇಶ್ ಇತರರು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT