ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತೆಗೆ ಕುಂದು ತರುವಂತಹ ಹೇಳಿಕೆ

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

`ಪ್ರಧಾನಿಯನ್ನು ಕ್ಷಮಿಸಿದ್ದೇನೆ~ ಎಂದು ಅಹಂಕಾರದಿಂದ ಮಾತನಾಡಿರುವ ಯೋಗ ಗುರು ರಾಮ್‌ದೇವ್ ಮಾತು ಪ್ರಜಾಪ್ರಭುತ್ವದ ಘನತೆಗೆ ಕುಂದು ತರುವುದಾಗಿದೆ.

ಸತ್ಯಾಗ್ರಹ ಕ್ಷೇತ್ರದಿಂದ (ಕಳ್ಳನಂತೆ) ಪರಾರಿಯಾಗಲು ಯತ್ನಿಸಿದ್ದ ಸಾವಿರಾರು ಕೋಟಿ ಬಂಡವಾಳಿಗ ವ್ಯಾಪಾರಿ ಯೋಗ ಗುರು ಸತ್ಯಾಗ್ರಹದಂತಹ ಅಗ್ನಿದಿಬ್ಯಕ್ಕೆ ಕೈಯಿಕ್ಕುವ ಮುನ್ನ ತನ್ನ ಸತ್ಯ ಶುದ್ಧತೆಯನ್ನು ಆತ್ಮವಿಮರ್ಶೆಗೆ ಒಡ್ಡಿಕೊಳ್ಳಬೇಕಾಗಿತ್ತು.
 
ಸತ್ಯಾಗ್ರಹವೆಂಬುದು ಕಳ್ಳರ ಹಾದಿಯಲ್ಲ, ಶುದ್ಧಾತ್ಮರ ಮಾರ್ಗ. ಒಂದು ಪಕ್ಷದ ಕೈಗೊಂಬೆಯಾಗಿ ಬಳಕೆಯಾಗುತ್ತಾ, ಮೂರ್ಖ ಮಾರ್ಗದಲ್ಲಿ ನಡೆಯುತ್ತಿರುವ ಈ ಯೋಗಗುರು ರಾಜಕೀಯ ಕೈದಾಳವಾಗದೆ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಿ.

ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಒಂದೂ ಮಾತನಾಡದ ಕೇಂದ್ರದ ಬಿಜೆಪಿಯ ಜನ ಯೋಗಗುರು ರಾಮ್‌ದೇವ್‌ನಂತಹವರನ್ನು ಮುಂದೆ ಬಿಟ್ಟುಕೊಂಡು ಕುತಂತ್ರದ ರಾಜಕಾರಣವನ್ನು ಮಾಡುವುದನ್ನು ಬಿಟ್ಟು ನೇರ ಮಾರ್ಗದ ನ್ಯಾಯಯುತ ರಾಜಕಾರಣದ ದಾರಿ ಹಿಡಿಯಲಿ.

-ಪ್ರೊ. ಶಿವರಾಮಯ್ಯ, ಪ್ರೊ. ಎಸ್. ಜಿ. ಸಿದ್ಧರಾಮಯ್ಯ, ಸಿರಿವರ ರವೀಂದ್ರನಾಥ್, ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಸ್ವಾಮಿ ಆನಂದ, ಬಿ ರಾಜಣ್ಣ, ಈ ಚಂದ್ರ ತಾಳಿಕಟ್ಟೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT