ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡೀಗಡ: 23 ಕೆ.ಜಿ ಹೆರಾಯಿನ್ ವಶ

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚಂಡೀಗಡ (ಐಎಎನ್‌ಎಸ್): ಸುಮಾರು 23 ಕೆ. ಜಿ ಹೆರಾಯಿನ್‌ನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶನಿವಾರ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಪ್ರದೇಶಗಳಲ್ಲಿರುವ ಅಮೃತಸರ ಹಾಗೂ ಫಿರೋಜ್‌ಪುರ್ ಜಿಲ್ಲೆಗಳಲ್ಲಿ ದೊರೆತಿರುವ ಈ ಹೆರಾಯಿನ್ 115 ಕೋಟಿ ರೂಪಾಯಿ ಬೆಲೆಬಾಳಬಹುದು ಎಂದು ಅಂದಾಜಿಸಲಾಗಿದೆ.

ಶನಿವಾರ ಬೆಳಿಗ್ಗೆ ತೀವ್ರ ಮಂಜು ಆವರಿಸಿದ್ದ ಸಮಯದಲ್ಲಿ ಪಾಕಿಸ್ತಾನದ ಕಳ್ಳಸಾಗಣೆಕಾರರು ಈ ಕೃತ್ಯ ಎಸಗಿದ್ದಾರೆ ಎಂದು ಬಿಎಸ್‌ಎಫ್ ಅಧಿಕಾರಿಗಳು ಆರೋಪಿಸಿದ್ದಾರೆ. ಪಲ್ಲೊಪತಿ ಗಡಿ ಪ್ರದೇಶದ ಹೊರಭಾಗದಲ್ಲಿ ಯಾರೋ ಸಂಚರಿಸುತ್ತಿರುವ ಅನುಮಾನದ ಮೇಲೆ ಬಿಎಸ್‌ಎಫ್ ಯೋಧರು ಹೆಚ್ಚಿನ ನಿಗಾ ವಹಿಸಿದಾಗ ಹೆರಾಯಿನ್ ಚೀಲ ಹೊತ್ತ ವ್ಯಕ್ತಿ ಸೇರಿದಂತೆ ಮೂವರು ಸಂಚರಿಸುತ್ತಿರುವುದು ಕಂಡುಬಂತು. ಕಳ್ಳರು ಚೀಲವನ್ನು ಅಲ್ಲೇ ಬಿಟ್ಟು ನಸುಗತ್ತಲಿನಲ್ಲಿ ಪರಾರಿಯಾದರು.

ಯೋಧರು ಈ ಸಂದರ್ಭದಲ್ಲಿ ಒಂದು ಪಿಸ್ತೂಲು, ಮದ್ದುಗುಂಡು ಹಾಗೂ ಪ್ಲಾಸ್ಟಿಕ್ ಪೈಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT