ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ಕಕ್ಷೆ ಸೇರಿದ ನಾಸಾ ಅವಳಿ ನೌಕೆ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಚಂದ್ರನಲ್ಲಿರುವ ಹಲವು ರೀತಿಯ ಕೌತುಕಗಳನ್ನು ತಿಳಿಯುವ ಉದ್ದೇಶದಿಂದ ನಾಸಾ ಅಲ್ಲಿಗೆ ಕಳುಹಿಸಿರುವ ಎರಡು ನೌಕೆಗಳು ಕಕ್ಷೆ ಸೇರಿವೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ನಾಸಾದ ಗ್ರ್ಯಾವಿಟಿ ರಿಕವರಿ ಅಂಡ್ ಇಂಟೀರಿಯರ್ ಲ್ಯಾಬೊರೇಟರಿ (ಜಿಆರ್‌ಎಐಎಲ್)-ಎ ನೌಕೆಯು ನಿಗದಿತ ಯೋಜನೆಯಂತೆ, ಯಶಸ್ವಿಯಾಗಿ ಮುಖ್ಯ ಎಂಜಿನ್ ಅನ್ನು ಸುಡಲು ಮತ್ತು ಚಂದ್ರನ ಕಕ್ಷೆಯಲ್ಲಿ ಸುತ್ತಲು ಶನಿವಾರದಿಂದಲೇ ಆರಂಭಿಸಿದೆ ಎಂದು ಸಂಸ್ಥೆ ಹೇಳಿದೆ.

`ಕಕ್ಷೆಗೆ ಸೇರಿಕೊಂಡಿರುವ ನೌಕೆಗಳಿಂದ ಸಂಕೇತಗಳು ಬಂದಿವೆ. ಅವು ಸರಿಯಾದ ರೀತಿಯಲ್ಲಿ ಸೂಕ್ತ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂಬುದು ಇದರಿಂದ ಗೊತ್ತಾಗುತ್ತದೆ~ ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ.

ನೌಕೆಗಳು ರೇಡಿಯೊ ಸಂಕೇತಗಳನ್ನು ಕಳುಹಿಸಲಿದ್ದು, ಚಂದ್ರ ಗೋಚರಿಸುವಾಗ ಅದರ ಕಕ್ಷೆಯಲ್ಲಿರುವ ನೌಕೆಯಿಂದ ನಿರ್ದಿಷ್ಟ ದೂರ ತಿಳಿಯಲು ಸಹಾಯಕವಾಗುತ್ತದೆ. ಕಡಿಮೆ ಮತ್ತು ಹೆಚ್ಚು ಗುರುತ್ವಾಕರ್ಷಣದಿಂದ ಕೂಡಿರುವ ಪ್ರದೇಶಗಳು, ಪರ್ವತಗಳು, ಸಣ್ಣ ಗುಳಿಗಳು, ಚಂದ್ರನ ಮೇಲ್ಮೈ ಮೇಲಿಂದ ಹಾದು ಹೋಗಲಿದ್ದು, ಅನೇಕ ರೀತಿಯ ಮಾಹಿತಿ ಒದಗಿಸಲಿವೆ. ಎರಡು ನೌಕೆಗಳ ನಡುವಿನ ದೂರ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆಯಾಗಲಿದೆ. ಇದರಿಂದಾಗಿ ಅವು ಚಂದ್ರನಲ್ಲಿರುವ ಗುರುತ್ವಾಕರ್ಷಣ ಪ್ರದೇಶದ ಅತ್ಯುತ್ತಮ ಗುಣಮಟ್ಟದ ಚಿತ್ರ ಕಳುಹಿಸಿಕೊಡಲಿವೆ.

`ನೌಕೆ ಕಳುಹಿಸುವ ಅಂಕಿಅಂಶದಿಂದ ಚಂದ್ರನ ಕಕ್ಷೆಯ ಬಗ್ಗೆ ನಿಖರವಾಗಿ ತಿಳಿಯಲು ಸಾಧ್ಯವಾಗುತ್ತದೆ. ಇದಲ್ಲದೆ ಭೂಮಿ ಮತ್ತು ಸೌರವ್ಯೆಹದಲ್ಲಿ ಇತರ ಗ್ರಹಗಳ ಮಾಹಿತಿ ತಿಳಿಯುತ್ತದೆ~  ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT