ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಹಾ ಆಮದು ಕುಸಿತ

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜುಲೈ ಅವಧಿಯಲ್ಲಿ ದೇಶದ ಚಹಾ ಆಮದು ಶೇ 22ರಷ್ಟು ಕುಸಿದಿದ್ದು, 5.19 ದಶಲಕ್ಷ ಕೆ.ಜಿಗಳಷ್ಟಾಗಿದೆ ಎಂದು ಚಹಾ ಮಂಡಳಿ ಹೇಳಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ 6.62 ದಶಲಕ್ಷ ಕೆ.ಜಿಗಳಷ್ಟು ಚಹಾ ಆಮದು ಮಾಡಿಕೊಳ್ಳಲಾಗಿತ್ತು.ಭಾರತವು, ಪ್ರಪಂಚದಲ್ಲಿಯೇ ಅತಿ ದೊಡ್ಡ ಚಹಾ ಗ್ರಾಹಕ ದೇಶವಾಗಿದೆ. ಏಪ್ರಿಲ್ ಜುಲೈ ಅವಧಿಯಲ್ಲಿ ಚಹಾ ಮರು-ರಫ್ತು ಪ್ರಮಾಣ ತೀವ್ರವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಒಟ್ಟು ಆಮದು ಪ್ರಮಾಣವೂ ಕುಸಿತ ಕಂಡಿದೆ.

ಪ್ರಸಕ್ತ ಹಣಕಾಸು ವರ್ಷದ ಜನವರಿ-ಜುಲೈ ಅವಧಿಯಲ್ಲಿ ಚಹಾ ಆಮದು ಶೇ 19ರಷ್ಟು ಕುಸಿದಿದ್ದು, 9.42 ದಶಲಕ್ಷ ಕೆ.ಜಿಗಳಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT