ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರಿಗೆ ಮೋಜು, ಮನರಂಜನೆ ಹಬ್ಬ

Last Updated 27 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ಬೆಂಗಳೂರಿನ ವಾರ್ಷಿಕ ಕ್ಯಾಲೆಂಡರಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಭರ್ಜರಿ ಮಕ್ಕಳ ಕಾರ್ಯಕ್ರಮ ಕಾಣುತ್ತಿದೆ. ಈ ಬಾರಿ ಇನ್ನೂ ಹೆಚ್ಚಿನ ವೈಭವದೊಂದಿಗೆ ಮತ್ತು ಉತ್ಸಾಹಕರ ರೂಪದಲ್ಲಿ ಮರಳಿ ಬಂದಿದೆ. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ನಿರೂಪಿತವಾಗಿರುವ ಈ ನಾಲ್ಕು ದಿನಗಳ ಕಾರ್ಯಕ್ರಮವು ಮಕ್ಕಳು ಮತ್ತು ಅವರ ಕುಟುಂಬದವರಿಗೆ ವಿನೋದ, ಶಾಪಿಂಗ್ ಮತ್ತು ಮನರಂಜನೆಯನ್ನೊಳಗೊಂಡ ಒಂದು ಅದ್ಭುತ ಅನುಭವ ಒದಗಿಸಲು ಕಾದಿದೆ.

ಸಾಮಾನ್ಯವಾಗಿ ಚಿಣ್ಣರ ಹಬ್ಬದಲ್ಲಿ ನಡೆಯುವ ಚಿತ್ರಬರಹ ಸ್ಫರ್ಧೆ, ಪ್ರತಿಭಾ ಪ್ರದರ್ಶನ, ತಾಯಿ ಮತ್ತು ಮಕ್ಕಳ ಫ್ಯಾಷನ್ ಷೋ(ಮಾಮ್, ಲೆಟ್ಸ್ ವಾಕ್ ದ ರ್ಯಾಂಪ್)ನ ಜೊತೆಗೆ 2010ರ ಚಿಣ್ಣರ ಹಬ್ಬವು ಹೊಸ ಮತ್ತು ಉತ್ಸಾಹಕರ ಆಕರ್ಷಣೆಗಳಾದ ಸ್ನೋ ವರ್ಲ್ಡ್, ಸ್ಕೇರಿ ಹೌಸ್ ಮತ್ತು ಸಂಪೂರ್ಣವಾಗಿ ಹೊಸದಾದ ವಿಭಿನ್ನ ಮಾದರಿಯ ಸಾಹಸಮಯ ಚಟುವಟಿಕೆಗಳಿಂದ ತುಂಬಿದೆ.
ಪ್ರತಿಭಾ ಶೋಧದ ಚಟುವಟಿಕೆಗಳ ಒಂದು ದೊಡ್ಡ ಸಮೂಹವೇ ಆದ ಆರ್‌ಜೆ ಹಂಟ್ (ರೇಡಿಯೋ ಜಾಕಿ ಶೋಧ) ವಾಯ್ಸ್ ಆಫ್ ಚಿಣ್ಣರ ಹಬ್ಬ ಮತ್ತು ಸಮೂಹ ನೃತ್ಯಗಳನ್ನೊಳಗೊಂಡಿದೆ. ಈ ಬಾರಿಯ ಚಿಣ್ಣರ ಹಬ್ಬ ಆ್ಯಕ್ಷನ್ ಮತ್ತು ಮನರಂಜನೆಗಳಿಂದ ಹೃದಯ ಬಡಿತವನ್ನು ಇಮ್ಮಡಿಗೊಳಿಸಲಿದೆ. 

ಸ್ಟಾಲ್‌ಗಳು
ಕುಟುಂಬದ ಎಲ್ಲಾ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ವಿಶೇಷವಾಗಿ ಮಕ್ಕಳ ಮನರಂಜನೆ ಮತ್ತು ಸೇವಾ ಸೌಲಭ್ಯಗಳನ್ನು ಒದಗಿಸುವ 150ಕ್ಕೂ ಹೆಚ್ಚು ಮಾರಾಟ ಮಳಿಗೆಗಳಿವೆ.

ಶೈಕ್ಷಣಿಕ ಸಹಾಯಕ ಪುಸ್ತಕಗಳು ಮತ್ತು ಪ್ರಕಾಶನಗಳು, ಮಕ್ಕಳ ಫರ್ನಿಚರ್, ಉಡುಗೆಗಳು, ಅಮ್ಯೂಸ್‌ಮೆಂಟ್ ಮತ್ತು ಥೀಮ್ ಪಾರ್ಕ್‌ಗಳು, ಬೈಸಿಕಲ್, ಕಂಪ್ಯೂಟರ್, ಕ್ರೀಡೆ ಮತ್ತು ಮನರಂಜನೆ, ಆಟಿಕೆ ಮತ್ತು ಆಟ, ಕ್ರಾಫ್ಟ್ಸ್ ಮತ್ತು ಸ್ಟೇಷನರಿಗಳು, ಎಲೆಕ್ಟ್ರಾನಿಕ್, ಐಟಿ ಮತ್ತು ಟೆಲಿಕಾಂ, ಫೈನಾನ್ಷಿಯಲ್ ಮತ್ತು ಇನ್‌ಶೂರೆನ್ಸ್ ಸೇವೆಗಳು, ಟ್ರಾವಲ್ ಮತ್ತು ಟೂರ್ಸ್‌, ಆರೋಗ್ಯ ಸಂರಕ್ಷಣೆ ಮತ್ತು ಸಮತೋಲನ, ಸರ್ಕಾರಿ ಏಜೆನ್ಸಿಗಳು, ಎಫ್.ಎಂ.ಸಿ.ಜಿಗಳು, ಕಂಪ್ಯೂಟರ್ ತರಬೇತಿ, ನೃತ್ಯ ಮತ್ತು ಸಂಗೀತ ಶಾಲೆಗಳು, ಆರೋಗ್ಯ ಪೇಯಗಳು, ಅಂತರ್ಜಾಲ ಸೇವೆ, ಫಿಟ್‌ನೆಸ್, ಪಾನೀಯ, ಕೆರಿಯರ್ ಪ್ಲಾನಿಂಗ್, ತಿಂಡಿ ತಿನಿಸು ಹೀಗೆ ಬಹಳಷ್ಟು ಮಳಿಗೆಗಳು...
ಹೀಗೆ ಮಕ್ಕಳು ಮತ್ತು ಪೋಷಕರಿಬ್ಬರನ್ನೂ ಜೊತೆಗೂಡಿಸಿ ಆಡಿಸುವ ಒಂದು ಉತ್ಸಾಹಕರ ಗೇಮ್ ಷೋ ಅ-ಮೇಜ್-ಥಿಂಗ್. ಲಕ್ಕಿ ಡಿಪ್.

ಮಕ್ಕಳಿಗಾಗಿ ಒಂದು ಚಿತ್ರ ಬರಹ ಸ್ಪರ್ಧೆ ಕಿಂಡರ್ ಜಾಯ್- ಕಿಡ್ಸ್ ಆರ್ಟ್‌ ಇದೆ. 
ನಮ್ಮ ಭೂ ಗ್ರಹದ ಸಂರಕ್ಷಣೆ - ಎಂಬ ಪೂರ್ವ ನಿರ್ಧರಿತವಾದ ವಿಷಯದ ಬಗ್ಗೆ ಬೆಂಗಳೂರಿನ ಸುಮಾರು 200 ಶಾಲೆಗಳ 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.

ಕ್ಯಾನ್ವಾಸಿನ ಮೇಲೆ ತಮ್ಮ ಸೃಜನಾತ್ಮಕ ಕಲ್ಪನೆಗಳಿಗೆ ರೂಪ ನೀಡುವ ಅವಕಾಶ ಕಲ್ಪಿಸುತ್ತದೆ. ವಾಟರ್ ಕಲರ್‌ಗಳು ಮತ್ತು ಇತರ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಸ್ಪರ್ಧಿಗಳು ಕಡ್ಡಾಯವಾಗಿ ತಮ್ಮ ಶಾಲಾ ಗುರುತು ಚೀಟಿಗಳನ್ನು ತರಬೇಕು.
ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣಪತ್ರ ನೀಡಲಾಗುವುದು ಮತ್ತು ವಿಜೇತರನ್ನು ಕಲಾ ಕ್ಷೇತ್ರದ ನುರಿತ ತೀರ್ಪುಗಾರರಿಂದ ಆಯ್ಕೆ ಮಾಡಿ ಅದೇ ದಿನ ಸಾಯಂಕಾಲ ವರ್ಣರಂಜಿತ ಬಹುಮಾನ ವಿತರಣಾ ಸಮಾರಂಭ ನೆರವೇರಲಿದೆ.
ಪ್ರವೇಶ ಮಿತಿ 1000ಕ್ಕೆ ಸೀಮಿತ. ಮೊದಲು ಬಂದವರಿಗೆ ಮಾತ್ರ ಆದ್ಯತೆ.
 ಸ್ಥಳದಲ್ಲಿಯೇ ತಕ್ಷಣದ ನೋಂದಣಿ ಕೂಡ ಲಭ್ಯ.

ಪುಟ್ಟ ಗಟ್ಟಿಗರಿಗೆ ಸಾಹಸಮಯ ವಲಯ
ಇಲ್ಲಿ 8 ವರ್ಷ ವಯೋಮಿತಿಯ ಮಕ್ಕಳಿಗಾಗಿ ದೈಹಿಕವಾಗಿ ಶ್ರಮದಾಯಕವಾಗುವಂತಹ ಹಲವಾರು ಚಟುವಟಿಕೆಗಳಾದ - ಪೈಂಟ್ ಬಾಲ್ ಟಾರ್ಗೆಟ್ ಷೂಟ್, ಸ್ಪೈಡರ್ ವೆಬ್, ಟ್ರಾಲಿ, ಕಾರ್ಗೋ ನೆಟ್, ರಿವರ್ ಕ್ರಾಸಿಂಗ್, ಕಾಂಬ್ಯಾಟ್ ಬ್ರಿಡ್ಜ್, ಜುಮ್ಮಾರಿಂಗ್, ಟೈಟ್ ರೋಪ್ ವಾಕ್, ಲೋ ರೋಪ್ ಕೋರ್ಸ್, ಮಿನಿಗಾಲ್ಫ್ ಮತ್ತು ಎಟಿವಿಗಳಿವೆ.

ಇನ್ಫ್ಲೇಟೇಬಲ್ ರೆನ್
ಗಾಳಿ ತುಂಬಿದ ಬೃಹದಾಕಾರ ಬಲೂನಿನಂತಹ ಬೌನ್ಸೀಸ್ ಮತ್ತು ಇನ್ಫ್ಲೇಟೇಬಲ್‌ಗಳನ್ನೊಳಗೊಂಡ ಮಕ್ಕಳಿಗಾಗಿ ಸುರಕ್ಷಿತ ಆಟದ ಪ್ರದೇಶ.

ಕಬಡ್ಡಿ, ವೆಲ್ಕ್ರೋ ವಾಲ್, ರಾಕ್ ಕ್ಲೈಂಬಿಂಗ್, ಬಂಜೀ ರನ್, ವಾಲಿ ಬಾಲ್, ಫುಟ್ ಬಾಲ್, ಸ್ಟಾಂಟೆರ್ನ್, ಬಾಕ್ಸಿಂಗ್, ರೋಲ್ ಇನ್ ಎ ಬಾಲ್, ಈಕ್ವಲೈಜರ್ ಆಟಗಳೂ ಇವೆ.

ಮಾಮ್ ಲೆಟ್ಸ್ ವಾಕ್ ದಿ ರ್ಯಾಂಪ್
ವರ್ಷದೊಳಗಿನ ಮಕ್ಕಳು ತಮ್ಮ ತಾಯಂದಿರ ಜತೆ ಆತ್ಮವಿಶ್ವಾಸದಿಂದ ತುಂಬಿದ ಸಭಾಂಗಣದಲ್ಲಿ ರ್ಯಾಂಪ್ ಮೇಲೆ ನಡೆಯಬಹುದು.
ವರ್ಣರಂಜಿತ ರ್ಯಾಂಪ್ ಮೇಲೆ ನುರಿತ ಕೋರಿಯೊಗ್ರಾಫರ್ ರೂಪಿಸುವ ಕಾರ್ಯಕ್ರಮ. ಸ್ಪರ್ಧೆ ವಿಜೇತರಿಗೆ ಅಂದಿನ ದಿನ ಸಂಜೆಯೇ ವರ್ಣರಂಜಿತ ಕಾರ್ಯಕ್ರಮದಲ್ಲಿ ಸನ್ಮಾನ.

ಕೀರ್ತಿಯನ್ನರಸಿ...
ಆರ್‌ಜೆ/ವಿಜೆ ಹುಡುಕಾಟದ ಈ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷೆ ಬಲ್ಲ 8 ರಿಂದ 10ನೇ ತರಗತಿಯ ಮಕ್ಕಳು ತಮಗಿಷ್ಟವಾದ ಯಾವುದೇ ವಿಷಯದ ಬಗ್ಗೆ ಮಾತನಾಡಬಹುದು.

ವಾಯ್ಸೆ ಆಫ್ ಚಿಣ್ಣರ ಹಬ್ಬ
ಮೂರು ನಿಮಿಷದ ಅವಧಿಯಲ್ಲಿ ಯಾವುದಾದರೂ  ಕನ್ನಡ ಚಲನಚಿತ್ರದ ಹಾಡು ಹಾಡಬಹುದು.

ಸಮೂಹ ನೃತ್ಯ
ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್‌ನ ಯಾವುದಾದರೂ ಹಾಡುಗಳಿಗೆ ಸಮೂಹ ನೃತ್ಯ.

ಪ್ರತಿಭಾ ಪ್ರದರ್ಶನ
ಕಾರ್ಯಕ್ರಮದಲ್ಲಿ ನವೀನ ಮಾದರಿಯ ಸುಸಜ್ಜಿತ ವೇದಿಕೆಯಲ್ಲಿ ಮಕ್ಕಳು ತಮ್ಮ ಅತ್ಯುತ್ತಮ ಪ್ರತಿಭೆಯನ್ನು ವಿವಿಧ ರೀತಿಯ ಕಲಾ ಪ್ರಕಾರಗಳಾದ ನೃತ್ಯ, ಸಂಗೀತ, ಮಾರ್ಷಲ್ ಆರ್ಟ್, ಮ್ಯಾಜಿಕ್ ಮತ್ತು ನಾಟಕಗಳ ಮುಖಾಂತರ ಪ್ರದರ್ಶಿಸುವ ಅವಕಾಶವಿದೆ.
 ವೇದಿಕೆಯ ಮೇಲೆ ಅಭಿನಯಿಸಲಿಚ್ಛಿಸುವ ಸ್ಪರ್ಧಿಗಳು ತಮ್ಮ ಹೆಸರನ್ನು ಕಾರ್ಯಕ್ರಮದ ಮೊದಲು ನೋಂದಾಯಿಸಿಕೊಳ್ಳಬೇಕು.
ಮಕ್ಕಳಲ್ಲಿ ಪರಿಸರ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವ ಪರಿಸರ ಸ್ನೇಹಿ ಸೈಕಲ್ ರ್ಯಾಲಿ.
2 ಕಿ.ಮೀ ನಷ್ಟು ಚಲಿಸಲಿದೆ. ಸುಮಾರು 3000 ಮಕ್ಕಳು ಈ ರ್ಯಾಲಿಯಲ್ಲಿ ಭಾಗವಹಿಸಬಹುದು ಎಂಬ ಅಂದಾಜಿದೆ. ಈ ರ್ಯಾಲಿಯಲ್ಲಿ ಪ್ರಮುಖ ವ್ಯಕ್ತಿಗಳು, ವಿವಿಧ ಸಾಮಾಜಿಕ ಕ್ಷೇತ್ರಗಳ ಧುರೀಣರು ಮಕ್ಕಳ ಜತೆ ಭಾಗವಹಿಸಿ ಬೆಂಬಲಿಸಲಿದ್ದಾರೆ.

ಕಾರ್ಯಾಗಾರಗಳು
ಮಕ್ಕಳ ಸೃಜನಾತ್ಮಕ ಪ್ರವೃತ್ತಿಯನ್ನು ಜಾಗೃತವಾಗಿಸಲು
ಪರ್ಸನಾಲಿಟಿ ಡೆವೆಲಪ್‌ಮೆಂಟ್, ಪಾಟರಿ, ಆರಿಗಾಮಿ, ಬಾಲಿವುಡ್ ಮತ್ತು ಕಂಟೆಪರರಿ ಕಾರ್ಯಾಗಾರಗಳು ಇವೆ.
ಪೆಟ್ ರೆನ್, ಆಕ್ವಾಟಿಕ್ ರೆನ್, ಸ್ಕೇರಿ ಹೌಸ್, ಸ್ನೋ ವರ್ಲ್ಡ್ ವಿಶೇಷ ಆಕರ್ಷಣೆಗಳು.
ವಿವರಗಳಿಗೆ ಮತ್ತು ನೋಂದಣಿಗಾಗಿ:
99025 53331 / 96118 96669

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT