ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಸಿಬ್ಬಂದಿ ಕೇಂದ್ರ ಸ್ಥಾನ ಬಿಡುವಂತಿಲ್ಲ:ಸೂಚನೆ

Last Updated 5 ಏಪ್ರಿಲ್ 2013, 6:46 IST
ಅಕ್ಷರ ಗಾತ್ರ

ಜಮಖಂಡಿ: ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಆಗಿರುವ ಯಾವ ಸಿಬ್ಬಂದಿಗೂ ಚುನಾವಣೆ ಮುಗಿಯುವವರೆಗೆ ರಜೆ ನೀಡಬಾರದು. ಯಾವುದೇ ಸಿಬ್ಬಂದಿ ಯಾವ ಕಾರಣಕ್ಕೂ ತಮ್ಮ ಕೇಂದ್ರ ಸ್ಥಾನದಿಂದ ಹೊರಗೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಎಸಿ ಅಶೋಕ ದುಡಗುಂಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯ ವಿಧಾನಸಭೆಗೆ ಜರುಗಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಕಚೇರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಮಖಂಡಿ ಮತ್ತು ತೇರದಾಳ ವಿಧಾನಸಭೆ ಮತಕ್ಷೇತ್ರಗಳ ಚುನಾವಣೆ ಮಾದರಿ ನೀತಿ ಸಂಹಿತೆ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಿನದ 24 ಗಂಟೆಗಳ ಕಾಲ ಮೊಬೈಲ್ ಫೋನ್ ಆನ್ ಇಟ್ಟುಕೊಳ್ಳಬೇಕು. ಸರ್ಕಾರಿ ವಾಹನಗಳ ದುರಪಯೋಗ ಆಗದಂತೆ ನೋಡಿಕೊಳ್ಳಬೇಕು. ಗ್ರಾಮ ಮಟ್ಟದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕು. ರಾತ್ರಿ ವೇಳೆಯಲ್ಲಿ ಸಹ ಕರ್ತವ್ಯ ನಿರ್ವಹಿಸಬೇಕು. ದಿನಾಲೂ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಮತದಾರರಿಗೆ ಆಮಿಷ ಒಡ್ಡುವ, ಧಮಕಿ ಹಾಕುವ, ಪೂರ್ವಾನುಮತಿ ಇಲ್ಲದೆ ಸಭೆ ನಡೆಸುವ, ಗುಳೆ ಹೋಗಿರುವ ಕಾರ್ಮಿಕರನ್ನು ವಾಹನಗಳಲ್ಲಿ ಕರೆತರುವ, ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಇಲ್ಲದೆ ಬ್ಯಾನರ್, ಕಟೌಟ್ ನಿಲ್ಲಿಸುವವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಿಸಿಕೊಳ್ಳಬೇಕು.

ದಿನಪತ್ರಿಕೆ, ಹಾಲಿನ ಪಾಕೆಟ್ ಮೂಲಕ ಹಣ ಹಂಚುವುದು, ಸ್ತ್ರೀ-ಶಕ್ತಿ ಗುಂಪುಗಳ ಸದಸ್ಯೆಯರನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವುದು, ಜಾತಿವಾರು ಮುಖಂಡರಿಗೆ ದುಡ್ಡು ನೀಡಿ ಇಡೀ ಜಾತಿಯ ಜನರ ಮತ ಯಾಚಿಸುವುದು, ಡಮ್ಮಿ ಅಭ್ಯರ್ಥಿಗಳ ಹೆಸರಿನಲ್ಲಿ ಅನುಮತಿ ಪಡೆದ ವಾಹನ ಬಳಸುವುದು ನೀತಿ ಸಂಹಿತೆಯ ಉಲ್ಲಂಘನೆ ಎನಿಸುತ್ತದೆ.

ಯಾವ ಅಭ್ಯರ್ಥಿ ಯಾವ ವಾಹನದ ಅನುಮತಿ ಪಡೆದಿರುತ್ತಾರೋ ಅವರೇ ತಮ್ಮ ವಾಹನಗಳನ್ನು ಬಳಸಿಕೊಳ್ಳಬೇಕು. ಗಣ್ಯವ್ಯಕ್ತಿಗಳು ಬಂದಾಗ ಆರತಿ ಎತ್ತುವ ಹೆಣ್ಣು ಮಕ್ಕಳಿಗೆ ಆರತಿಯಲ್ಲಿ ಹಣ ಹಾಕುವುದು ಕೂಡ ನಿಯಮ ಬಾಹಿರ ಎನಿಸುತ್ತದೆ. ಪಂಚರ ಮುಖಾಂತರ ಹಣ ಹಂಚುವುದು, ಬಡವರು ಮತ್ತು ಕೊಳೆಗೇರಿಗಳಲ್ಲಿ ವಾಸಿಸುವವರಿಗೆ ಹಣ ಹಂಚುವುದು ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದರು.

ಚುನಾವಣೆ ನೀತಿ ಸಂಹಿತೆ ತಂಡದ ಯಾರು ಬೇಕಾದರೂ ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬಹುದು. ಆರೋಪ ಸಾಕ್ಷೀಕರಿಸಲು ಘಟನೆಯ ವಿವರಗಳನ್ನು ವಿಡಿಯೋ ಶೂಟಿಂಗ್ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಮಖಂಡಿ ವಿಧಾನಸಭೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ 45 ಮತ್ತು ತೇರದಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ 37 ಗ್ರಾಮಗಳು ಬರುತ್ತವೆ. ಜಮಖಂಡಿ ವಿಧಾನಸಭೆ ಮತಕ್ಷೇತ್ರದಲ್ಲಿ 203 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT