ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಕಟ್ಟಿನೊಳಗಣ ನಗರ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಹಸಿರನ್ನು ಹೊದ್ದು ಮಲಗಿರುವ ವಿಶಾಲ ಮೈದಾನ, ಮೇಯಲು ಹೊರಟಿರುವ ಕುರಿ ಹಿಂಡು, ಒಂದು ಬದಿ ದೊಡ್ಡ ದೊಡ್ಡ ಕಟ್ಟಡಗಳು, ಮತ್ತೊಂದೆಡೆ ದೇವಾಲಯ, ಮೈದಾನದಲ್ಲಿ ಆಡುತ್ತಿರುವ ಮಕ್ಕಳು.... ಇವೆಲ್ಲವೂ ಒಂದೇ ಚಿತ್ರದಲ್ಲಿ ಕಟ್ಟಿಕೊಡಲು ಸಾಧ್ಯವೇ?

ಸಾಧ್ಯವೆನ್ನುತ್ತಾರೆ ರಾಜೇಶ್ ಧಾರ್!

ಇಷ್ಟಕ್ಕೂ ಈ ಚಿತ್ರ ಕಂಡದ್ದು ಎಲ್ಲಿ ಅಂದಿರಾ? ನಗರದ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಸೆಂಟರ್, ಐಐಎಂನ ಕ್ಯಾಂಪಸ್‌ನಲ್ಲಿ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ. ಪುಟ್ಟದೊಂದು ಛಾಯಾಚಿತ್ರ ಸ್ಪರ್ಧೆಯಲ್ಲಿ ಬಂದಿದ್ದ ಪ್ರವೇಶಗಳೆಷ್ಟು ಗೊತ್ತೆ? ಬರೊಬ್ಬರಿ 7800. ಈ ಸಂಖ್ಯೆಯೇ ಸ್ಪರ್ಧೆಗೆ ಯಶಸ್ಸು ತಂದು ಕೊಟ್ಟಿತು.

ಸಾಮಾನ್ಯವಾಗಿ ಛಾಯಾಚಿತ್ರ ಸ್ಪರ್ಧೆ ಎಂದರೆ ಅಲ್ಲಿ ಸುಂದರ ಪ್ರಕೃತಿಯ ಚಿತ್ರ, ಹಕ್ಕಿಗಳ ಚುಂಬನ, ಮಕರಂದ ಹೀರುತ್ತಿರುವ ದುಂಬಿ, ಇಲ್ಲವೇ ಹಳ್ಳಿಯ ಚಿತ್ರಣಗಳು ಸ್ಥಾನ ಪಡೆದಿರುತ್ತವೆ. ಆದರೆ ಈ ಛಾಯಾಚಿತ್ರ ಸ್ಪರ್ಧೆ ಭಿನ್ನ.

`ಫ್ರೇಮ್ ಆಫ್ ಮೈ ಸಿಟಿ~ ಶೀರ್ಷಿಕೆಯಡಿ ಈ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. `ಶೂಟ್ ಯುವರ್ ಸಿಟಿ~ ಸ್ಪರ್ಧೆಯ ಮುಖ್ಯ ವಿಷಯ ವಸ್ತು. ಅಂದರೆ ನಗರದ ಜೀವನ ಶೈಲಿ, ವಿಶೇಷ ಕ್ಷಣಗಳು, ಸ್ಥಳ, ಜನರು ಇವೆಲ್ಲ ಛಾಯಾಚಿತ್ರದ ಭಾಗಗಳಾಗಿದ್ದವು.

ಛಾಯಾಗ್ರಾಹಕರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ಕಲ್ಪಿಸಲಾಗಿತ್ತು. ದೇಶದ ವಿವಿಧ ಭಾಗಗಳಿಂದ ಹವ್ಯಾಸಿ, ವೃತ್ತಿಪರ ಛಾಯಾಗ್ರಾಹಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. 

ಸ್ಪರ್ಧೆಯಲ್ಲಿ ರಾಜೇಶ್ ಪ್ರಥಮ ಬಹುಮಾನ ಪಡೆದರೆ, ಅಮೋಘ್ ಪಂತ್ ಅವರ ಗಾಜಿನ ಪ್ರತಿಬಿಂಬದೊಳಗೆ ನಗರ ಕಟ್ಟಡಗಳು ಕಾಣುವಂತೆ ತೆಗೆದಿರುವ ಛಾಯಾಚಿತ್ರ ದ್ವಿತೀಯ ಬಹುಮಾನಕ್ಕೆ ಭಾಜನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT