ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲಗಾರ, ಜನನಾಯಕ ಬಂಗಾರಪ್ಪ: ಶರಣರ ಬಣ್ಣನೆ

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಸೊರಬ: ಯಾವುದೇ ಒಬ್ಬ ಜನನಾಯಕನಿಗೆ ಬೇಕಾದ ಮೂಲ ದ್ರವ್ಯ ಛಲ. ಛಲ ಇದ್ದರೆ ನಾಡು, ನುಡಿ ಕಟ್ಟಿ ರಕ್ಷಣೆ ಮಾಡಲು ಸಾಧ್ಯ. ಈ ಎಲ್ಲಾ ಗುಣಗಳು ಬಂಗಾರಪ್ಪ ಅವರಲ್ಲಿದ್ದವು ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಸ್ಮರಿಸಿದರು.

ಪಟ್ಟಣದ `ಬಂಗಾರಧಾಮ'ದಲ್ಲಿ ಬುಧವಾರ ಎಸ್. ಬಂಗಾರಪ್ಪ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಹಾಗೂ ತೆಂಗಿನ ಸಸಿ `ಕಲ್ಪವೃಕ್ಷ' ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಕಾರಣಗಳಲ್ಲಿ ವಿಜ್ಞಾನಿ, ತತ್ವಜ್ಞಾನಿಯ ಗುಣಗಳಿರಬೇಕು. ಆಗ ಪ್ರಬುದ್ಧ ರಾಜಕಾರಣಿಯಾಗಲು ಸಾಧ್ಯ. ಈ ಗುಣಗಳು ಬಂಗಾರಪ್ಪ ಅವರಲ್ಲಿ ಇದ್ದುದರಿಂದ ಅವರು ಪ್ರಬುದ್ಧ ರಾಜಕಾರಣಿಯಾಗಿ ಬೆಳೆಯಲು ಸಾಧ್ಯವಾಯಿತು. ಬಂಗಾರಪ್ಪ ಅವರು ಯಾವುದೇ ಒಂದು ವರ್ಗದ ನಾಯಕರಾಗದೆ ರಾಜ್ಯದ ಎಲ್ಲಾ ವರ್ಗದ ನಾಯಕರಾಗಿದ್ದರು. ಎಲ್ಲರ ಹೃದಯದ ಭಾವನೆಗಳನ್ನು ಅರಿತು ಸಾಮಾಜಿಕ ನ್ಯಾಯ ನೀಡುವ ಒಬ್ಬ ಜನನಾಯಕರಾಗಿ ಹೊರಹೊಮ್ಮಿದ್ದರು ಎಂದು ವಿಶ್ಲೇಷಿಸಿದರು.

ಬಂಗಾರಪ್ಪ ಹಟವಾದಿ, ಛಲಗಾರನಾದರೂ ಅವರಲ್ಲಿ ಅಧ್ಯಯನದ ಒಲವು ಹಾಗೂ ಅನುಭವದ ಬಲವಿತ್ತು. ಅವರು ರಾಜ್ಯದ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ನೇತಾರ ಎಂದು ಹೇಳಿದರು.

ಶಕುಂತಲಾ ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತನಾಡಿದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಎಸ್. ಮಧು ಬಂಗಾರಪ್ಪ, `ಬಂಗಾರಪ್ಪ ಅವರಿಗೆ ನಿಮ್ಮ ಹೃದಯದಲ್ಲಿ ಸ್ಥಾನ ನೀಡಿದ್ದೀರಿ. ಅವರ ಆಸೆಯಂತೆ, ನಮ್ಮ ಕುಟುಂಬದವರ ಮಾರ್ಗದರ್ಶನದಂತೆ ತೆಂಗಿನ ಸಸಿ ಕೊಟ್ಟು ಪ್ರತಿ ಮನೆ-ಮನೆಯಲ್ಲಿಯೂ ಬಂಗಾರಪ್ಪ ಅವರ ನೆನಪು ಹಸಿರಾಗಿ ಸಲು ತೆಂಗಿನ ಸಸಿ ವಿತರಣೆ ಮಾಡಿದ್ದೇವೆ' ಎಂದರು.

ಸಮಾರಂಭದಲ್ಲಿ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಷಡಕ್ಷರಿ ಆದಿಜಾಂಬವ ಸ್ವಾಮೀಜಿ, ಜಡೆ ಮಠದ ಡಾ.ಮಹಾಂತ ಸ್ವಾಮೀಜಿ, ಹಿರೇಮಾಗಡಿ ಮಠದ ಮುರುಘ ರಾಜೇಂದ್ರ ಸ್ವಾಮೀಜಿ, ಶಾಂತಾಪುರದ ಶಿವಾನಂದ ಸ್ವಾಮೀಜಿ, ಫಾದರ್ ರೊನಾಲ್ಡ್ ಡಿಕೊನ್ಹಾ, ಮೌಲಾನ ಸೈಯದ್ ಮಹಮ್ಮದ್ ತನ್ವೀರ್ ಹಾಸ್ಮಿ ಉಪಸ್ಥಿತರಿದ್ದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಶಾಸಕ ಬೇಳೂರು ಗೋಪಾಲಕೃಷ್ಣ, ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ತಿಲಕ್‌ಕುಮಾರ್, ಸುಜಾತಾ ತಿಲಕ್‌ಕುಮಾರ್, ಉದ್ಯಮಿ ಪವನ್‌ಕುಮಾರ್, ಅನಿತಾ ಪವನ್‌ಕುಮಾರ್, ಚಿತ್ರನಟ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT