ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಲಲಿತಾರ ಅತಿರೇಕದ ರಾಜಕಾರಣ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರದು ಅತಿರೇಕದ ರಾಜಕಾರಣವಾಗುತ್ತಿದೆ. ಇತ್ತ ಕಾವೇರಿ ವಿವಾದವನ್ನು ಮತ್ತೆ ಮತ್ತೆ ಕೆದಕಿ ಜೀವಂತ ಇಡುವುದು; ಅತ್ತ ಶ್ರೀಲಂಕಾದಲ್ಲಿ ತಮಿಳರಿಗೆ ಪ್ರತ್ಯೇಕ ರಾಷ್ಟ್ರ ಆಗಬೇಕೆಂದು ಒತ್ತಾಯಿಸುವುದು; ಹಾಗೆ ಲಂಕಾ ಆಟಗಾರರು ಚೆನ್ನೈನ ಐಪಿಎಲ್ ಟ್ವೆಂಟಿ - 20 ಪಂದ್ಯಗಳಲ್ಲಿ ಆಡಬಾರದೆಂದು ನಿರ್ಬಂಧಿಸುವುದು ಇತ್ಯಾದಿ ... ಅವರ ಬೆದರಿಕೆ ತಂತ್ರಗಳು.

ಇವರ ನಡೆ ಕೇಂದ್ರಕ್ಕೆ ಮುಜುಗರ ಹಾಗೂ ಸವಾಲಾಗಿ ಪರಿಣಮಿಸುತ್ತಿದೆ. ತಮಿಳು ಭಾಷಿಗರ ಅಭಿಮಾನ ಗಳಿಸುವುದು ಮತ್ತು ಕೆರಳಿಸುವುದು. ಈ ಎಲ್ಲದರ ಹಿಂದಿರುವುದು ರಾಜಕಾರಣ. ಕಳೆದ 25-30 ವರ್ಷ ಪರ್ಯಂತ ಲಂಕಾದಲ್ಲಿ ಎಲ್‌ಟಿಟಿಇ ಸಂಘಟನೆಯ ಹೋರಾಟಗಾರರು ಮಾರಣ ಹೋಮವಾಗಿ ಬಿಟ್ಟರು.

ಈಗ ಲಂಕಾದಲ್ಲಿ ತಮಿಳು ಪ್ರತ್ಯೇಕ ರಾಷ್ಟ್ರ ಆಗಲಿ ಎಂದು ವಿಶ್ವಸಂಸ್ಥೆಯಲ್ಲಿ ಕೇಂದ್ರ ಸರ್ಕಾರ ನಿರ್ಣಯ ಮಂಡಿಸಲಿ ಎಂದು ಒತ್ತಾಯಿಸುತ್ತಿರುವ ಜಯಲಲಿತಾ ಅವರಿಗೆ ತನ್ನ ಬೇಳೆ ಬೇಯಿಸಿಕೊಳ್ಳಬೇಕೆಂಬ ಇರಾದೆ. ಈ ಒತ್ತಾಯದ ಹಿಂದೆ ತಮಿಳು ವೋಟುಗಳನ್ನು ಗಿಟ್ಟಿಸಿಕೊಳ್ಳುವ ರಾಜಕಾರಣ ಇದೆ ಎಂದು ಬೇರೆ ಹೇಳಬೇಕಾಗಿಲ್ಲ.

ಇನ್ನಾದರೂ ಕೇಂದ್ರ ಕ್ರಮ ಕೈಗೊಂಡು ಲಂಕಾ ಆಟಗಾರರು ಚೆನ್ನೈನಲ್ಲಿ ಆಡುವಂತಾಗಬೇಕೆಂದೂ ಏನಾದರೂ ಅವಘಡ ಸಂಭವಿಸಿದರೆ ಮುಖ್ಯಮಂತ್ರಿಯೇ ಹೊಣೆಗಾರರೆಂದೂ ನಿರ್ದೇಶನ ನೀಡಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT