ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಈದ್ ಸಂಭ್ರಮ

Last Updated 6 ಫೆಬ್ರುವರಿ 2012, 6:00 IST
ಅಕ್ಷರ ಗಾತ್ರ

ಹಳೇಬೀಡು: ಮುಸ್ಲಿಂರು ವಾಸವಾಗಿರುವ ಮಹಮದ್‌ಪುರದಲ್ಲಿ ಭಾನುವಾರ ಅದ್ದೂರಿ ಯಾಗಿ ಈದ್ ಮಿಲಾದ್ ಆಚರಿಸಲಾಯಿತು.

ಗ್ರಾಮದ ಖತಿಬೋ ಇಮಾಮ್ ಸುನ್ನಿ ಜಾಮಿಯಾ ಮಸೀದಿಯಿಂದ ಹಸಿರು ಬಾವುಟ ಹಿಡಿದು ಮೆರವಣಿಗೆಯಲ್ಲಿ ತೆರಳಿದ ಮುಸ್ಲಿಂರು ಘೋಷಣೆ ಮಾಡುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದರು.

ಮಸೀದಿ ಗುರುಗಳಾದ ಹಜರತ್ ಮೌಲಾನಾ ಮಹಮದ್ ವಿರೂಫನ್ ನೇತೃತ್ವ ದಲ್ಲಿ ವಿವಿಧ ಆಚರಣೆಗಳು ವೈಭವದಿಂದ ನಡೆಯಿತು. ಪ್ರವಾದಿ ಮಹಮದ್ ಪೈಂಗಂಬರರ ಹುಟ್ಟಹಬ್ಬದ ಪ್ರಯುಕ್ತ ಸುಖ ಸಾಂತಿ ಸಾಮರಸ್ಯ ದೊರಕಲಿ ಎಂದು ಮುಸ್ಲಿಂರು ಒಗ್ಗೂಡಿ ಈದ್ ಮಿಲಾದ್ ಆಚರಿಸಲಾಗುವುದು ಎಂದರು.

ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮೌಲನಾ ಮುಸ್ತಿ ಮಜಾರತ್ ಮುತಹಕ್ ಉಪನ್ಯಾಸ ಮಾಡಿದರು. ಸಮಾಜದ ಅಧ್ಯಕ್ಷ ಮುತ್ತುವಲ್ಲಿ ಜೈಲಾಬುದ್ದಿನ್, ಕಾರ್ಯದರ್ಶಿ ದಸ್ತ್‌ಗಿರಿ ಸಾಬ್ ಇತರರು ಇದ್ದರು.

ಬಾಣಾವರ ವರದಿ: ಮಹಮ್ಮದ್ ಪೈಂಗಬರ್‌ಅವರ ತತ್ವ ಅದರ್ಶ ಯುವಕರು ಜೀವನದಲ್ಲಿ ಆಳವಡಿಸಿಕೊಂಡಾಗ ಮಾತ್ರ ಈದ್ ಮೀಲಾದ್ ಆಚರಣೆ ಅರ್ಥಪೂರ್ಣ ಎಂದು ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ತಿಳಿಸಿದರು.
ಪಟ್ಟಣದ ಪೇಟೆ ಬಡಾವಣೆಯಲ್ಲಿ ಈದ್ ಮೀಲಾದ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲ ಧರ್ಮಗಳು ಬಯಸುವುದು ಮನು ಕುಲದ ಶ್ರೇಯಸ್ಸು. ಅದನ್ನು ಅರಿತು ಬಾಳಿದಾಗ ಮಾತ್ರ ಸಮಾಜ ಸುಭಿಕ್ಷವಾಗಿರುತ್ತದೆ. ಎಲ್ಲ ಹಬ್ಬಗಳ ಆಚರಣೆಯಿಂದ ಸಮಾಜದಲ್ಲಿ ಸಹೋದರ ಪ್ರೇಮ ಹೆಚ್ಚಾಗಲಿ ಎಂದರು.

ಧರ್ಮ ಗುರುಗಳಾದ ಷರೀಫ್ ಸಾಧ್ವಿ, ಗ್ರಾ.ಪಂ. ಅಧ್ಯಕ್ಷೆ ಅಂಬಿಕಾ ರಮೇಶ್, ಗೋಪಾಲಸ್ವಾಮಿ, ತಾ.ಪಂ. ಸದಸ್ಯರಾದ ಬಿ.ಆರ್. ಜಯಣ್ಣ, ಬಿ. ರವಿಶಂಕರ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಎಂ. ಜಯಣ್ಣ, ಏಸಾನ್ ಉಲ್ಲಾ ಷರೀಫ್ ಮಾತನಾಡಿದರು.

ಜಮಾತ್ ಕಮಿಟಿ ಅಧ್ಯಕ್ಷ ಕೆ.ಸಿ. ಖಾದರ್ ಬಾಷಾ, ಉಪಾಧ್ಯಕ್ಷ ಹಯಾತ್ ಮೊಹದ್ದೀನ್, ಮಹಮ್ಮದ್ ಇಕ್ಬಾಲ್, ಇಲಿಯಾಜ್‌ಅಹ ಮ್ಮದ್, ಶೇಖ್ ಅಲಿ ಇಯಾಜ್, ಹಜಾರತ್ ವಾಸಿಂ ಅಹಮ್ಮದ್, ಮನಕತ್ತೂರು ತಾ.ಪಂ. ಸದಸ್ಯ ಎಸ್.ಆರ್. ಲಕ್ಷ್ಮಣ್, ಗ್ರಾ.ಪಂ. ಸದಸ್ಯರಾದ ಆರೀಫ್, ಶ್ಯಾಮ್‌ಸುಂದರ್, ಬಿ.ಆರ್. ಸುರೇಶ್, ಬಿ.ಸಿ. ಮಂಜುನಾಥ ಮತ್ತು ಜಯರಾಂ ಇತರರು ಇದ್ದರು.

ಬೇಲೂರು ವರದಿ: `ಬಡವರು, ದೀನ- ದಲಿತರ ಬಗ್ಗೆ ಕಾಳಜಿ ಹೊಂದಿದ್ದ ಮಹಮ್ಮದ್ ಪೈಗಂಬರ್ ಅವರ ಜೀವನಾದರ್ಶಗಳು ಎಲ್ಲರಿಗೂ ಮಾದರಿಯಾಗಿವೆ~ ಎಂದು ಶಾಸಕ ವೈ.ಎನ್.ರುದ್ರೇಶ್‌ಗೌಡ ಹೇಳಿದರು.

ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿ, ಇಝತುಲ್ ಎಜುಕೇಷನ್ ಸೊಸೈಟಿ ವತಿ ಯಿಂದ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ  ಅಂಗವಾಗಿ ಭಾನುವಾರ ಏರ್ಪ ಡಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಂರು ಇಂದಿಗೂ ಕುರಾನ್ ಗ್ರಂಥವನ್ನು ಪರಿಪಾಲನೆ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ವಿ.ಹೇಮಾವತಿ ಮಂಜುನಾಥ್ ಮಾತ ನಾಡಿ, ಭಗವಂತನ ರೂಪದಲ್ಲಿ ಮಹಮ್ಮದ್ ಪೈಗಂಬರ್ ಅವರು ಭೂಮಿಯಲ್ಲಿ ಅವತರಿಸಿದ್ದರು. ಎಲ್ಲರ ಹೃದಯದಲ್ಲೂ ಭಗವಂತನಿದ್ದಾನೆ ಎಂದು ಸಾರಿದ ಮಹಾನ್ ಪುರಷ ಪೈಗಂಬರ್. ಪ್ರತಿಯೊಬ್ಬರು ಬಡವರ ಬಗ್ಗೆ ಕಾಳಜಿ ಇಟ್ಟುಕೊಳ್ಳುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಪುರಸಭಾ ಸದಸ್ಯ ಬಿ.ಸಿ.ಮಂಜುನಾಥ್, ಬದ್ರಿಯಾ ಮಸೀದಿ ಖತೀಬ್ ಅಬುಬಕರ್ ಬದ್ರಿ, ಮಸೀದಿ ಅಧ್ಯಕ್ಷ ಅಬುಬಕರ್, ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯ ಬಿ.ಎ.ಜಮಾಲುದ್ದೀನ್, ಪ್ರಮುಖರಾದ ಸುಲೇಮಾನ್, ಮೊಯಿದ್ದೀನ್, ಜುಬೇರ್ ಆಹಮದ್ ಹಾಜರಿದ್ದರು.

ಅದ್ದೂರಿ ಮೆರವಣಿಗೆ: ಈದ್‌ಮಿಲಾದ್ ಮತ್ತು ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧ ವರು ಪಟ್ಟಣದ ಮುಖ್ಯರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಪಟ್ಟಣದ ಜಾಮೀಯ ಮಸೀದಿ ಬಳಿಯಿಂದ ಜೆ.ಪಿ. ನಗರದ ವರೆಗೆ ಸಾವಿರಾರರು ಮುಸ್ಲಿಂರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಮೆಕ್ಕಾ ಮದೀನಾ ಹಾಗೂ ವಿವಿಧ ಮಸೀದಿಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಅರಸೀಕೆರೆ ವರದಿ: ಎಲ್ಲ ಧರ್ಮಗಳ ಆಶಯ ಒಂದೇ ಆಗಿದ್ದು, ಆಚರಣೆ ಮಾತ್ರ ಭಿನ್ನ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ಡಾ.ರಾಜ್‌ಕುಮಾರ್ ವೃತದಲ್ಲಿ ತರಕಾರಿ ಮಾರುಕಟ್ಟೆ ವರ್ತಕರು ಹಾಗೂ ಮುಸ್ಲಿಂ ಸಮಾಜದವರು ಆಯೋಜಿಸಿದ್ದ ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಫೈಗಂಬರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂಸೆಗೆ ಮನುಷ್ಯನ ಸ್ವಾರ್ಥ, ದುರಾಸೆ ಕಾರಣ. ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ. ದಯವೇ ಧರ್ಮದ ಮೂಲ ಎಂಬುದನ್ನು ಮರೆಯಬಾರದು. ಧರ್ಮದ ಆಚರಣೆ ನಾಟಕವಲ್ಲ. ನಮ್ಮನ್ನು ಸರಿ ದಾರಿಯಲ್ಲಿ ಕರೆದೊಯ್ಯುವ ಮಾರ್ಗವಾಗಬೇಕು ಎಂದರು.

ಪುರಸಭಾ ಮಾಜಿ ಉಪಾಧ್ಯಕ್ಷ ಅಬ್ದುಲ್ ಜಮೀಲ್ ಮಾತನಾಡಿದರು. ಪುರಸಭಾ ಅಧ್ಯಕ್ಷ ಎಂ. ಶಮೀವುಲ್ಲಾ, ಜಾಮಿಯಾ ಮಸೀದಿ ಗುರು ಮುರಾದಲೀ, ಜಮಾತ್ ಮುಸ್ಲಿಂ ಕಮಿಟಿ ಅಧ್ಯಕ್ಷ ಖಲೀಂವುಲ್ಲಾ ಷರೀಫ್, ಜಮಾತ್ ಮುಸ್ಲಿಂ ಕಮಿಟಿ ಉಪ ಕಾರ್ಯದರ್ಶಿ ಅಫ್ರೀಜ್ ಪಾಷಾ, ಯೂನಸ್ ಖಾನ್, ಪುರಸಭಾ ಮಾಜಿ ಸದಸ್ಯ ಮೀರ್ ಮಹಮ್ಮದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT