ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟ್ಟಿಂಗ್ ಯಂತ್ರಗಳ ಕಾರ್ಯಾಚರಣೆ

Last Updated 8 ಜುಲೈ 2013, 20:04 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಜಲಮಂಡಳಿಯ 12 ಜೆಟ್ಟಿಂಗ್ ಮತ್ತು 2 ಸಕ್ಕಿಂಗ್ ಯಂತ್ರಗಳು ಇದೇ ಬುಧವಾರ (ಜುಲೈ 10) ಈಶಾನ್ಯ-3ರ ಉಪ ವಿಭಾಗದ ಆರ್.ಟಿ.ನಗರ, ಸಂಜಯನಗರ, ನ್ಯೂ ಬಿಇಎಲ್ ರಸ್ತೆ, ಆನಂದನಗರ, ಗಂಗಾನಗರ ಮತ್ತು ನೈರುತ್ಯ-1ರ ಉಪ  ವಿಭಾಗದ ವಿವಿ ಪುರ, ಸುಧಾಮನಗರ-2, ಕೆಂಪೇಗೌಡ ನಗರ, ಚಾಮರಾಜಪೇಟೆ ಪ್ರದೇಶಗಳ ವ್ಯಾಪ್ತಿಯ ಒಳಚರಂಡಿ ಮಾರ್ಗಗಳ ನಿರ್ವಹಣಾ ಕಾರ್ಯಾಚರಣೆ ನಡೆಸಲಿವೆ.

ಈ ಪ್ರದೇಶಗಳ ಒಳಚರಂಡಿ ಮಾರ್ಗಗಳಲ್ಲಿ ಅಡಚಣೆಗಳಿದ್ದಲ್ಲಿ ಜೆಟ್ಟಿಂಗ್ ಯಂತ್ರಗಳ ಸೇವೆಗೆ ಈಶಾನ್ಯ-3ರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖರಪ್ಪ (98454 44025) ಮತ್ತು ನೈರುತ್ಯ -1ರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ (98454 44085) ಅವರನ್ನು ಸಂಪರ್ಕಿಸಬಹುದು ಎಂದು ಜಲಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT