ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಂಟಂ ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

Last Updated 22 ಸೆಪ್ಟೆಂಬರ್ 2011, 9:20 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರದ ರಸ್ತೆಗಳಲ್ಲಿ ಸಂಚಾರಿ ನಿಮಯಗಳನ್ನು ಉಲ್ಲಂಘಿಸಿ ಯಾವುದೇ ಅಡೆತಡೆ ಇಲ್ಲದೇ ಎಲ್ಲಂದರಲ್ಲಿ ತಿರುಗಾಡುತ್ತಿದ್ದ ಟಂಟಂಗಳು ಎರಡು ದಿನಗಳಿಂದ ಸ್ತಬ್ಧವಾಗಿವೆ.  ಕಳೆದ ಎರಡು ದಿನಗಳಿಂದ ನಗರಕ್ಕೆ ಆಗಮಿಸಿರುವ ಬೆಳಗಾವಿ ವಿಭಾಗದ ಆರ್‌ಟಿಓ ಸ್ಕ್ವಾಡ್,  ವಾಹನಗಳ ಪರವಾನಗಿ ಮತ್ತು ಸಂಬಂಧ ಪಟ್ಟ ದಾಖಲೆಗಳನ್ನು ತಪಾಸಣೆ ಮಾಡುತ್ತಿರುವುದ ಪರಿಣಾಮ ಟಂಟಂ ಸಂಚಾರವನ್ನು ಸ್ಥಗಿತಗೊಳಿಸಿವೆ.

ಆರ್.ಟಿ.ಓ ಸ್ಕ್ವಾಡ್ ಆಗಮನದಿಂದ ಭಯಭೀತರಾಗಿರುವ ಚಾಲಕರು ಸೂಕ್ತ ಪರವಾನಗಿ ಇಲ್ಲದೇ ಟಂಟಂಗಳನ್ನು ಮನೆಯಲ್ಲಿ ನಿಲ್ಲಿಸಿದ್ದಾರೆ.  ಹಳೆಯ ಮಾರುಕಟ್ಟೆ ಹಾಗೂ ಬಸವೇಶ್ವರ ಸರ್ಕಲ್ ಬಳಿ 20ಕ್ಕೂ ಹೆಚ್ಚು ಟಂಟಂಗಳು ನಿಲ್ಲುತ್ತಿದ್ದವು ಆದರೆ ಈಗ ಟಂಟಂಗಳು ಬೆರಳಣಿಕೆಯಷ್ಟು ಕಾಣುತ್ತವೆ.

ಕಳೆದ ಎರುಡು ದಿನಗಳಿಂದ ನಗರದಲ್ಲಿ ಟಂಟಂ ಸಂಚಾರ ಬಹುತೇಖ ಸ್ತಬ್ಧವಾಗಿದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಟಂಟಂಗಳು ನಗರದಲ್ಲಿ ಪ್ರತಿದಿನ ಸಂಚಾರ ಮಾಡುತ್ತವೇ ಇದಲ್ಲದೇ ಬಾಗಲಕೋಟೆ ಸುತ್ತಮುತ್ತಿಲಿನ ಗ್ರಾಮಗಳಿಂದ ಪ್ರಯಾಣಿಕರನ್ನು ಹಾಗೂ ವ್ಯಾಪಾರಸ್ಥರ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುವ ಗೂಡ್ಸ್ ಟಂಟಂಗಳು  ಸಹ ನಗರದಲ್ಲಿ ಕಾಣುತ್ತಿಲ್ಲ.

ಪ್ರತಿದಿನ ಬೆಳೆಗ್ಗೆ 6 ರಿಂದ ರಾತ್ರಿ 10 ಗಂಟೆಯವರಿಗೆ ನವನಗರ, ಆಶ್ರಯ ಕಾಲೋನಿ, ಸರ್ಕಾರಿ ಆಸ್ಪತ್ರೆ ಸೇರಿದಂತೆ ನವನಗರದ ವಿವಿಧ ಸೆಕ್ಟರ್‌ಗಳು, ವಿದ್ಯಾಗಿರಿ, ಎಂಜಿನಿಯರಿಂಗ್ ಕಾಲೇಜ್ ಕ್ರಾಸ್, ಎಪಿಎಂಸಿ ಕ್ರಾಸ್ ಮತ್ತು ಗದ್ದನಕೇರಿ ಕ್ರಾಸ್‌ಗಳಿಗೆ ಟಂಟಂಗಳು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತವೆ. ಆದರೆ ಆರ್.ಟಿ.ಓ ಸ್ಕ್ವಾಡ್ ಜಿಲ್ಲೆಗೆ ಆಗಮಿಸಿದ್ದರಿಂದ ಚಾಲಕರ ತಮ್ಮ ವಾಹನಗಳನ್ನು ಮನೆಯ ಮುಂದೆ ನಿಲ್ಲಿಸಿದ್ದಾರೆ.

ಬಹುತೇಕ ಟಂಟಂಗಳು ಮತ್ತು ಕೆಲವು ಖಾಸಗಿ ವಾಹನಗಳು ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ಕಂಡುಬಂದಿತು.ರೇಲ್ವೆ ಸ್ಟೇಷನ್, ಬಸವೇಶ್ವರ ಸರ್ಕಲ್, ಎಪಿಎಂಸಿ ಕ್ರಾಸ್, ಹಳೆ ಮಾರುಕಟ್ಟೆ ಬಳಿ ಟಂಟಂಗಳು ಇಲ್ಲದ್ದರಿಂದ ಪ್ರಯಾಣಿಕರು ಬಸ್‌ಗಳ ಮೊರೆಹೋದರು. 

ಪ್ರತಿದಿನ ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ಟಂಟಂಗಳಲ್ಲೇ ಪ್ರಯಾಣ ಮಾಡುತ್ತಾರೆ. ಆದರೆ ಈಗ ಎರಡು ದಿನಗಳಿಂದ ಬಸ್‌ನಲ್ಲಿ ಪ್ರಯಾಣಿಕರು ತಳ್ಳಾಡಿಕೊಂಡು ಪ್ರಯಾಣಿಸುತ್ತಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT