ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಸಿಎಸ್: ರೂ 2,301 ಕೋಟಿ ನಿವ್ವಳ ಲಾಭ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದೇಶದ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್), ಸೆಪ್ಟೆಂಬರ್‌ಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ರೂ 2,301 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದ್ದು, ಶೇ 6ರಷ್ಟು ಏರಿಕೆ ದಾಖಲಿಸಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಸ್ಥೆಯ ನಿವ್ವಳ ಲಾಭ ರೂ 2,169 ಕೋಟಿಗಳಷ್ಟಿತ್ತು. ಸಂಸ್ಥೆಯ ಒಟ್ಟು ವರಮಾನವು ರೂ 9,286 ಕೋಟಿಗಳಿಂದ ರೂ 11,633 ಕೋಟಿಗಳಿಗೆ ಹೆಚ್ಚಳಗೊಂಡು ಶೇ 25ರಷ್ಟು ಏರಿಕೆ ದಾಖಲಿಸಿದೆ.
 
ಪ್ರತಿ ಷೇರಿಗೆ 3ರಂತೆ ಮಧ್ಯಂತರ ಲಾಭಾಂಶ ಘೋಷಿಸಲು ನಿರ್ದೇಶಕ ಮಂಡಳಿ ತೀರ್ಮಾನಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎನ್. ಚಂದ್ರಶೇಖರನ್ ಸೋಮವಾರ ಇಲ್ಲಿ ತಿಳಿಸಿದರು.
ದ್ವಿತೀಯ ತ್ರೈಮಾಸಿಕದಲ್ಲಿ ಸಂಸ್ಥೆ 12,580 ತಂತ್ರಜ್ಞರನ್ನು ಹೊಸದಾಗಿ ನೇಮಿಸಿಕೊಂಡಿದ್ದು, ಒಟ್ಟು ಸಿಬ್ಬಂದಿ ಸಂಖ್ಯೆ 2,14,770ಕ್ಕೆ ಏರಿಕೆಯಾಗಿದೆ. 35 ಹೊಸ ಗ್ರಾಹಕರನ್ನು  ಸೇರ್ಪಡೆ ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT