ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂತ್‌ಪೇಸ್ಟ್ ವೈಶಿಷ್ಟ್ಯ ನೋಡಿ

Last Updated 22 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನಮ್ಮ ದಿನ ನಿತ್ಯದ ಬಳಕೆಯಲ್ಲಿ ಬಹಳಷ್ಟು ಬಗೆಯ ಟೂತ್‌ಪೇಸ್ಟ್‌ಗಳನ್ನು (ದಂತ ಮಂಜನ) ನಾವು ಮಾರುಕಟ್ಟೆಯಲ್ಲಿ ನೋಡಿರುತ್ತೇವೆ ಮತ್ತು ಬಳಸಿರುತ್ತೇವೆ. ಆದರೆ ಅವುಗಳ ವೈಶಿಷ್ಟ್ಯದ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಅವು ತಮ್ಮದೇ ಆದ ಪರಿಣಾಮಕಾರಿ ಮಿಶ್ರಣದಿಂದ (Active ingredients) ವಿಶಿಷ್ಟ ಗುಣಗಳನ್ನು ಪಡೆದುಕೊಂಡಿರುತ್ತವೆ. ಅಂತಹ  ಟೂತ್‌ಪೇಸ್ಟ್‌ಗಳ ಮಾಹಿತಿ ಇಲ್ಲಿದೆ:

ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್ 
(Fluoridated tooth paste)
ಇದು ಸಾಮಾನ್ಯವಾಗಿ ಎಲ್ಲರೂ ಬಳಸುವ ಟೂತ್  ಪೇಸ್ಟ್. ಇದರಲ್ಲಿರುವ ಸೋಡಿಯಂ ಫ್ಲೋರೈಡ್, ಸ್ಟಾನಸ್ ಫ್ಲೋರೈಡ್ ಅಥವಾ ಮೋನೋ ಫ್ಲೂರೋ ಫಾಸ್ಫೇಟ್ (Sodium Fluoride (Nap), Stannous fluoride (SnF2) or Mono Fluro phosphate (MFP2) ಮುಂತಾದ ಪರಿಣಾಮಕಾರಿ ಮಿಶ್ರಣಗಳು ಶಾಶ್ವತ ಹಲ್ಲುಗಳಿಗೆ ಎಷ್ಟು ಬೇಕೋ ಅಷ್ಟು ಫ್ಲೋರೈಡ್‌ನ್ನು ಹೊಂದಿರುತ್ತವೆ. ಈ ಟೂತ್‌ಪೇಸ್ಟ್ ಹಲ್ಲುಗಳನ್ನು ಬಲಶಾಲಿಗೊಳಿಸಿ ದಂತ ಕುಳಿ ಅಥವಾ ದಂತಕ್ಷಯ ಆಗದಂತೆ ತಡೆಯುತ್ತದೆ ಮತ್ತು ವಸಡಿನ ರೋಗವನ್ನು ನಿವಾರಿಸುತ್ತದೆ.

ಡೀಸೆನ್ಸಿಟೈಸಿಂಗ್ ಟೂತ್‌ಪೇಸ್ಟ್
ಹಲ್ಲುಗಳ ಸವೆತದಿಂದ ಹಲ್ಲುಗಳು `ಜುಂ' ಎನ್ನಲು ಶುರುವಾಗುತ್ತವೆ. ಈ ಟೂತ್‌ಪೇಸ್ಟ್‌ನಲ್ಲಿ ಇರುವ ಪೊಟ್ಯಾಷಿಯಂ ನೈಟ್ರೇಟ್‌ನಂತಹ ಮಿಶ್ರಣಗಳು ಹಲ್ಲುಗಳ ಪದರದ ಕೊಳವೆಗಳನ್ನು(micro tubules) ಮುಚ್ಚಿ `ಜುಂ' ಎನ್ನುವುದನ್ನು ಉಪಶಮನಗೊಳಿಸುತ್ತವೆ.

ದಂತ ವೈದ್ಯರು ಹಲ್ಲುಗಳ ಸವೆತವನ್ನು ಪರಿಗಣಿಸಿ ಈ ಟೂತ್‌ಪೇಸ್ಟ್‌ನ್ನು ಬರೆದುಕೊಡುತ್ತಾರೆ. ಇದು ಮಕ್ಕಳಿಗೆ ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ.

ಮಕ್ಕಳ ಟೂತ್‌ಪೇಸ್ಟ್
ಮಕ್ಕಳಿಗೆಂದೇ ಉಪಯೋಗಿಸುವ ಟೂತ್‌ಪೇಸ್ಟ್‌ನಲ್ಲಿ ಹಾಲು ಹಲ್ಲುಗಳಿಗೆ ಎಷ್ಟು ಬೇಕೋ ಅಷ್ಟು ಫ್ಲೋರೈಡ್ ಅಂಶ ಇರುತ್ತದೆ. ಇದು ಮಕ್ಕಳಿಗೆ ಇಷ್ಟವಾಗುವಂತಹ ಹಣ್ಣಿನ ಸುವಾಸನೆಯನ್ನು ಹೊಂದಿರುತ್ತದೆ.

ಹಲ್ಲು ಬೆಳ್ಳಗೆ ಮಾಡುವ ಪೇಸ್ಟ್
(Whitening toothpaste)
ಈ ಟೂತ್‌ಪೇಸ್ಟ್‌ನಲ್ಲಿ ಕೋರ್ಸ್ ಅಬ್ರೆಸಿವ್, ಹೈಡ್ರೋಜನ್ ಪರಾಕ್ಸೈಡ್ ಮತ್ತು ಕಾರ್ಬೋಮೈಡ್ ಪರಾಕ್ಸೈಡ್ ಮುಂತಾದ ಪರಿಣಾಮಕಾರಿ ಅಂಶಗಳು ಇರುತ್ತವೆ. ಇದನ್ನು ಉಪಯೋಗಿಸಿದಾಗ ನಡೆಯುವ ಯಾಂತ್ರಿಕ ಮತ್ತು ರಾಸಾಯನಿಕ ಕ್ರಿಯೆಯಿಂದ (ಛ್ಚಿಚ್ಞಜ್ಚಿಚ್ಝ - ಇಛಿಞಜ್ಚಿಚ್ಝ ಅ್ಚಠಿಜಿಟ್ಞ) ಹಲ್ಲುಗಳ ಮೇಲೆ ಇರುವ ಕಲೆ ಹೋಗಿ ಅವು ಸ್ವಚ್ಛವಾಗುತ್ತವೆ.

ನೈಸರ್ಗಿಕ ಅಥವಾ ವನಸ್ಪತಿ ಪೇಸ್ಟ್
(Herbal toothpaste)
ಈ ಟೂತ್‌ಪೇಸ್ಟ್‌ನಲ್ಲಿ ಕೃತಕ ಸುವಾಸನೆಗೆ ಬದಲಾಗಿ ನೈಸರ್ಗಿಕವಾಗಿ ಸಿಗುವ ಸುವಾಸನೆಯನ್ನು ಸೇರಿಸಿರುತ್ತಾರೆ. ಅಲ್ಲದೆ ನೈಸರ್ಗಿಕವಾಗಿ ಅಥವಾ ವನಸ್ಪತಿಯಾಗಿ ಸಿಗುವ ಅಡುಗೆ ಸೋಡ, ಸುಗಂಧ ದ್ರವ್ಯ, ಸಾರ ತೈಲ (ಸಸ್ಯಗಳಿಂದ ತಯಾರಿಸಿದ ಎಣ್ಣೆ), ಸ್ಟ್ರಾಬೆರ‌್ರಿಯಂತಹ ಗಿಡಮೂಲಿಕೆಯ  ಅಂಶಗಳನ್ನು ಸೇರಿಸಿರುತ್ತಾರೆ.

ದಂತಮಲ/ ಕಿಟ್ಟ ನಿಯಂತ್ರಣ ಪೇಸ್ಟ್
(Tarter control tooth paste / Antiplaque toothpaste)
ವಸಡಿನ ಕಾಯಿಲೆ ಬಹಳಷ್ಟು ಜನರಿಗೆ ಇದ್ದೇ ಇರುತ್ತದೆ. ಈ ಕಾಯಿಲೆಯನ್ನು ನಿಯಂತ್ರಿಸದಿದ್ದರೆ ಹಲ್ಲುಗಳ ರಕ್ತಸ್ರಾವ, ಹಲ್ಲು ಅಲುಗಾಡುವ ಸಮಸ್ಯೆ ಕಾಣಿಸಿಕೊಂಡು ಕೊನೆಗೆ ಹಲ್ಲುಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಈ ಬಗೆಯ ಟೂತ್‌ಪೇಸ್ಟ್‌ನಲ್ಲಿ ಇರುವ ಫ್ಲೋರೈಡ್, ಝಿಂಕ್ ಸಿಟ್ರೇಟ್ ಮುಂತಾದ ಪರಿಣಾಮಕಾರಿ ಅಂಶಗಳು ಹಲ್ಲುಗಳ ಮೇಲೆ ಕಟ್ಟುವ ದಂತಮಲ ಅಥವಾ ಕಿಟ್ಟವನ್ನು ಕಡಿವೆು ಮಾಡಿ ಬ್ಯಾಕ್ಟೀರಿಯಾಗಳಿಂದ ಆಗುವ ಹಾನಿಯನ್ನು ತಪ್ಪಿಸುತ್ತವೆ. ವಸಡು ಆರೋಗ್ಯ ಮತ್ತು ಬಲಿಶಾಲಿ ಆಗುವಂತೆ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT