ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂಲ್‌ರೂಮ್ಸ ಕೈಗಾರಿಕೆ ಶೇ 13ರಷ್ಟು ವೃದ್ಧಿ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: 12ನೇ ಪಂಚವಾರ್ಷಿಕ ಯೋಜನೆಗೆ ಪೂರಕ ವರದಿ ಸಿದ್ಧಪಡಿಸುವಲ್ಲಿ ಟೂಲ್ ಆಂಡ್ ಗೇಜ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ಟ್ಯಾಗ್ಮಾ) ಭಾರಿ ಕೈಗಾರಿಕೆ ಸಚಿವಾಲಯದ ಜತೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಘದ ಅಧ್ಯಕ್ಷ ಎಸ್. ಸಿ. ಕಲ್ಯಾಣಪುರ ಅವರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ)  ಶೇ 25ರಷ್ಟು ಕೊಡುಗೆ ಸಲ್ಲಿಸಲು ಹೆಚ್ಚು ಉದ್ಯೋಗ ಸೃಷ್ಟಿಸಲು ಮತ್ತು ತಯಾರಿಕೆ  ಪ್ರಮಾಣ ಹೆಚ್ಚಿಸಲೂ ಸಂಘ ಉದ್ದೇಶಿಸಿದೆ. ಕೈಗಾರಿಕಾ ಬಿಡಿಭಾಗ, ಯಂತ್ರೋಪಕರಣ ತಯಾರಿಕಾ (ಟೂಲ್‌ರೂಮ್ಸ) ಉದ್ದಿಮೆಯ ಇತ್ತೀಚಿನ ವರದಿಗಳ ಪ್ರಕಾರ, 2010-11ರಲ್ಲಿ ದೇಶಿ ಉದ್ಯಮದ ಒಟ್ಟಾರೆ ಮಾರುಕಟ್ಟೆ  ಮೌಲ್ಯವು ್ಙ 13,225 ಕೋಟಿಗಳಷ್ಟ್ದ್ದಿದು, ವಾರ್ಷಿಕ ಶೇ 13ರಷ್ಟು ವೃದ್ಧಿ ದಾಖಲಿಸುತ್ತಿದೆ ಎಂದು ನುಡಿದರು.

 ಡೈ ಮತ್ತು ಮೌಲ್ಡ್ ತಯಾರಕರ ಬೇಡಿಕೆ ಈಡೇರಿಸಲು ಚೆನ್ನೈನಲ್ಲಿ ಪ್ರಥಮ ಪ್ರಾದೇಶಿಕ ವಸ್ತು ಪ್ರದರ್ಶನ ಏರ್ಪಡಿಸಲೂ `ಟ್ಯಾಗ್ಮಾ~ ಮುಂದಾಗಿದೆ. ಮುಂದಿನ ವರ್ಷದ ಏಪ್ರಿಲ್ 19ರಿಂದ 22ರವರೆಗೆ ಮುಂಬೈನಲ್ಲಿ `ಡೈ ಆಂಡ್ ಮೌಲ್ಡ್ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT