ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್ನಿಕಲ್ ರೈಟಿಂಗ್

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಐಟಿ ವಲಯದಲ್ಲಿ ಟೆಕ್ನಿಕಲ್ ರೈಟರ್‌ಗಳಿಗೆ ಎಲ್ಲಿಲ್ಲದ ಬೇಡಿಕೆ. ಈ ಕೌಶಲ್ಯ ಇರುವ ಎಂಜಿನಿಯರ್ ಹಾಗೂ ಪದವೀಧರರನ್ನು ಉತ್ತಮ ಕಂಪೆನಿಗಳು ಅಧಿಕ ಸಂಬಳಕ್ಕೆ ಆಯ್ಕೆ ಮಾಡಿಕೊಳ್ಳುತ್ತವೆ.
 
ಟೆಕ್ನಿಕಲ್ ರೈಟಿಂಗ್‌ನಲ್ಲಿ ಆಸಕ್ತಿ ಇರುವ ಎಂಜಿನಿಯರ್‌ಗಳ ಆಸೆ ಪೂರೈಸಿ ಅವರಿಗೆ ಮಾರ್ಗದರ್ಶನ ನೀಡುವ ಸಲುವಾಗಿ `ಟ್ವಿನ್~ (ಟೆಕ್ನಿಕಲ್ ರೈಟರ್ಸ್‌ ಆಫ್ ಇಂಡಿಯಾ) ಫೆ.22ರಿಂದ 25ರ ವರೆಗೆ ಟಿ.ಸಿ.ವರ್ಲ್ಡ್ ಇಂಡಿಯಾ ಸಮ್ಮೇಳನ ಆಯೋಜಿಸಿದೆ. ಈ ಸಮ್ಮೇಳನದಲ್ಲಿ ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿ, ನ್ಯೂಜಿಲೆಂಡ್ ಹಾಗೂ ಅಮೆರಿಕಾದ ಪ್ರತಿನಿಧಿಗಳು, ಟೆಕ್ನಿಕಲ್ ರೈಟರ್ಸ್‌ ಹಾಗೂ ಭಾಷಾಂತರಕಾರರು ಭಾಗವಹಿಸುತ್ತಾರೆ.

ಒರ‌್ಯಾಕಲ್, ಸ್ಯಾಪ್, ಟಿಬ್ಕೊ, ಅಡೋಬ್ ಮೊದಲಾದ ಕಂಪೆನಿಗಳು ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಲಿವೆ. ಇಲ್ಲಿ ಟೆಕ್ನಿಕಲ್ ರೈಟಿಂಗ್ ವಲಯದಲ್ಲಿ ಇರುವ ಅಪರಿಮಿತ ಅವಕಾಶಗಳು ಹಾಗೂ ಹುದ್ದೆ ಬಗ್ಗೆ ತಿಳಿಸಿಕೊಡಲಾಗುತ್ತದೆ. ಸ್ಥಳ: ಹೋಟೆಲ್ ತಾಜ್ ವಿವಂತಾ, ಎಂ.ಜಿ.ರಸ್ತೆ. ಮಾಹಿತಿಗೆ: 91-99001 97740.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT