ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಮೂರನೇ ಸುತ್ತಿಗೆ ನಡಾಲ್

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಡಿಪಿಎ): ಸ್ಪೇನ್‌ನ ಅಗ್ರ ಶ್ರೇಯಾಂಕದ ಆಟಗಾರ ರಫೆಲ್ ನಡಾಲ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ನಡಾಲ್ 6-2, 6-1ರಲ್ಲಿ ಅಮೆರಿಕದ ರ್ಯಾನ್ ಸ್ವೀಟಿಂಗ್ ವಿರುದ್ಧ ಸುಲಭ ಗೆಲುವು ಪಡೆದರು. 90 ನಿಮಿಷಗಳವರೆಗೆ ನಡೆದ ಈ ಪಂದ್ಯದಲ್ಲಿ ನಡಾಲ್‌ಗೆ ಎದುರಾಳಿ ಆಟಗಾರನಿಂದ ಯಾವುದೇ ಪ್ರಬಲ ಪೈಪೋಟಿ ಬರಲಿಲ್ಲ.

ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ ನಾಲ್ಕನೇ ಶ್ರೇಯಾಂಕದ ಸ್ವೀಡನ್‌ನ ರಾಬಿನ್ ಸೊಡೆರ್‌ಲಿಂಗ್ 6-3, 7-6, 6-1ರಲ್ಲಿ ಲಕ್ಸೆಂಬರ್ಗ್‌ನ ಗಿಲ್ಲಿಸ್ ಮುಲ್ಲರ್ ಮೇಲೂ, ಫ್ರಾನ್ಸ್‌ನ ಜೊ ವಿಲ್ಫ್ರೆಡ್ ಸೊಂಗಾ 6-3, 7-6, 7-6ರಲ್ಲಿ ಇಟಲಿಯ ಆ್ಯಂಡ್ರೆಸ್ ಸೆಪ್ಪಿ ವಿರುದ್ಧವೂ, ಕ್ರೊಯೇಷಿಯದ ಮರಿನ್ ಸಿಲಿಕ್ 6-3, 7-6, 6-1ರಲ್ಲಿ ಕೊಲೊಂಬಿಯಾದ ಸಾಂಟಿಯಾಗೊ ಗಿರಾಲ್ಡೊ ಮೇಲೂ, ಅಮೆರಿಕದ ಜಾನ್ ಇಸ್ನೆರ್ 4-6, 6-4, 6-2, 6-1ರಲ್ಲಿ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ವಿರುದ್ಧವೂ, ಇಂಗ್ಲೆಂಡ್‌ನ ಆ್ಯಂಡಿ ಮರ್ರೆ 6-1, 6-3, 6-3ರಲ್ಲಿ ಉಕ್ರೇನ್‌ನ ಇಲ್ಯಾ ಮಾರ್ಚೆಂಕೊ ಮೇಲೂ ಗೆಲುವು ಪಡೆದರು.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಆಟಗಾರ್ತಿ ರಷ್ಯಾದ ವೆರಾ ಜೊನಾರೇವಾ 2-6, 6-3, 6-1ರಲ್ಲಿ ಸೆರ್ಬಿಯಾದ ಬೋಜನಾ ಜೊವನೊವ್‌ಸ್ಕಿ ವಿರುದ್ಧ ಗೆಲುವು ಪಡೆದು ಮೂರನೇ ಸುತ್ತಿಗೆ ಪ್ರವೇಶ ಪಡೆದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ 6-1, 6-3ರಲ್ಲಿ ಸ್ಪೇನ್‌ನ ಕಾರ್ಲಾ ಸೊರೇಜ್ ನವಾರೊ ಮೇಲೂ, ಸರ್ಬಿಯಾದ ಯೆನೆಲಾ ಜಾಂಕೊವಿಕ್ 7-6, 6-3ರಲ್ಲಿ ಚೀನಾದ ಶುಯ್ ಪೆಂಗ್ ವಿರುದ್ಧವೂ, ರಷ್ಯಾದ ನಾಡಿಯಾ ಪೆಟ್ರೋವಾ 6-4, 6-1ರಲ್ಲಿ ಆಸ್ಟ್ರೇಲಿಯಾದ ಅಲಿಸಿಯಾ ಮೊಲಿಕ್ ಮೇಲೂ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT