ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಸೋಮದೇವ್-ಟ್ರಿಟ್ ಜೋಡಿ ಶುಭಾರಂಭ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಭಾರತದ ಸೋಮದೇವ್ ದೇವವರ್ಮನ್ ಹಾಗೂ ಫಿಲಿಪ್‌ನ ಟ್ರಿಟ್ ಕಾನ್ರರ್ಡ್ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದರು.

ಮೊದಲ ಸುತ್ತಿನ ಪಂದ್ಯದಲ್ಲಿ ಈ ಜೋಡಿ 6-3, 6-4ರಲ್ಲಿ ರಷ್ಯಾದ ಇಗೋರ್ ಆ್ಯಂಡ್ರಿವ್ ಹಾಗೂ ಇಗೋರ್ ಕುನಿಸೈನ್ ಜೋಡಿಯನ್ನು ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿತು. ಒಟ್ಟು ಒಂದು ಗಂಟೆ ಏಳು ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ರಷ್ಯಾದ ಜೋಡಿ ಸೋಮ್ ಹಾಗೂ ಟ್ರಿಟ್‌ಗೆ ಭಾರಿ ಪ್ರತಿರೋಧ ತೋರಿಸಿತು.

ಸೋಮದೇವ್ ಹಾಗೂ ಹುಯೆ ಜೋಡಿ ಮುಂದಿನ ಸುತ್ತಿನಲ್ಲಿ ಅರ್ಜೆಂಟೀನಾದ 14 ಶ್ರೇಯಾಂಕದ ಜುವಾನ್ ಇಗ್ನೊಸಿಯೊ ಚೆಲಾ ಮತ್ತು ಇಡೊರ್ಡೊ ಚೇವಾಂಕ್ ಅವರ ಸವಾಲನ್ನು ಎದುರಿಸಲಿದ್ದಾರೆ.

ಸಾನಿಯಾ-ಭೂಪತಿ ಪರಾಭವ: ಕಳಪೆ ಪ್ರದರ್ಶನ ನೀಡಿದ ಭಾರತದ ಸಾನಿಯಾ ಮಿರ್ಜಾ ಹಾಗೂ ಮಹೇಶ್ ಭೂಪತಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರ ಬಿದ್ದರು.

ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿ 3-6, 6-7ರಲ್ಲಿ ಜೆಕ್ ಗಣರಾಜ್ಯದ ಲಿಸಿಯಾ ರೆಡಿಕಾ ಮತ್ತು ಫ್ರಂಟಿಸೆಕ್ ಕಾರ್ಮೆಕ್ ಎದುರು ಸೋಲು ಕಂಡಿತು. ಸಿಂಗಲ್ಸ್ ವಿಭಾಗದಲ್ಲಿ ಈಗಾಗಲೇ ಭಾರತದ ಸವಾಲು ಅಂತ್ಯ ಕಂಡಿದೆ. ಸೋಮದೇವ್ ಮೊದಲ ಸುತ್ತಿನಲ್ಲಿ ಆ್ಯಂಡಿ ಮರ‌್ರೆ ಎದುರು ಸೋಲು ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಮೂರನೇ ಸುತ್ತಿಗೆ ಜೊಕೊವಿಚ್: ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ್ತಿ ನೊವಾಕ್ ಚೊಕೊವಿಚ್ ಇದೇ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದರು. ಪ್ರಭಾವಿ ಪ್ರದರ್ಶನ ನೀಡಿದ ಈ ಆಟಗಾರ್ತಿ 90 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ 6-0, 6-0, 6-2ರಲ್ಲಿ ಅರ್ಜೆಂಟೀನಾದ ಕಾರ್ಲಸ್ ಬೆರ್ಲೊಕ್ ಎದುರು ಸುಲಭ ಗೆಲುವು ಪಡೆದರು.

ಪುರುಷರ ವಿಭಾಗದ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ರೋಜರ್ ಫೆಡರರ್ 6-3, 6-2, 6-2ರಲ್ಲಿ ದುಡಿ ಸೇಲಾ ಅವರನ್ನು ಮಣಿಸಿದರು. ಈ ಆಟಗಾರ ಮುಂದಿನ ಸುತ್ತಿನಲ್ಲಿ 27ನೇ ಶ್ರೇಯಾಂಕದ ಮರಿನ್ ಸಿಲಿಕ್ ಸವಾಲನ್ನು ಎದುರಿಸಲಿದ್ದಾರೆ.

ಸೆರೆನಾ ವಿಲಿಯಮ್ಸ ಸಿಂಗಲ್ಸ್ ವಿಭಾಗದಲ್ಲಿ 49 ನಿಮಿಷಗಳ ಕಾಲ ಹೋರಾಟ ನಡೆಸಿ 6-0, 6-1ರಲ್ಲಿ ಮೈಕೆಲಾ ಕ್ರಜಿಸಿಕ್ ಅವರನ್ನು ಮಣಿಸಿದರು. ಕಳೆದ ವರ್ಷ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಜಯಿಸಿದ್ದ ಏಳನೇ ಶ್ರೇಯಾಂಕದ ಸಹಿವೊನಿ 6-1, 6-1ರಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಮಿರ್ಜಿನಾ ಲುಸಿಕಾ ಅವರನ್ನು ಸೋಲಿಸಿದರು.

ಇತರ ಸಿಂಗಲ್ಸ್ ಪಂದ್ಯಗಳಲ್ಲಿ ಜೆಲೆನಾ 6-4, 6-4, 11ನೇ ಶ್ರೇಯಾಂಕದ ಸರ್ಬಿಯಾ ಆಟಗಾರ್ತಿ ಜಲೆನಾ ಒಕಿಸ್ ಮೇಲೂ ಗೆಲುವು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT