ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಸ್ಟ್‌ನಿಂದ ಇನ್ನಾ ಗ್ರಾಮ ದತ್ತು

Last Updated 20 ಫೆಬ್ರುವರಿ 2012, 9:30 IST
ಅಕ್ಷರ ಗಾತ್ರ

ಇನ್ನಾ (ಪಡುಬಿದ್ರಿ): `ತೀರಾ ಗ್ರಾಮೀಣ ಪ್ರದೇಶವಾದ ಇನ್ನಾ ಗ್ರಾಮವನ್ನು ಇಲ್ಲಿನ ಭಾರ್ಗವ ಟ್ರಸ್ಟ್ ವತಿಯಿಂದ ದತ್ತು ಪಡೆದು ಸಮಗ್ರ ಅಭಿವೃದ್ಧಿ ಪಡಿಸಲು ಟ್ರಸ್ಟ್ ನಿರ್ಧರಿಸಿದೆ~ ಎಂದು ಟ್ರಸ್ಟ್ ಸಂಸ್ಥಾಪಕ ಪಿ.ರಾಮದಾಸ ಮಡ್ಮಣ್ಣಾಯ ಹೇಳಿದ್ದರು.

ಇನ್ನಾ ಮುದ್ದಾಣು ಮಹಾಲಿಂಗೇಶ್ವರ ದೇವಳದಲ್ಲಿ ಭಾರ್ಗವ ಟ್ರಸ್ಟ್ ಮತ್ತು ಬೆಂಗಳೂರು ಲೋಕಕಲ್ಯಾಣ ಪ್ರತಿಷ್ಠಾನ ಆಶ್ರಯದಲ್ಲಿ ಶನಿವಾರ ನಡೆದ ವಿವಿಧ ಫಲಾನುಭವಿಗಳಿಗೆ ರೂ. 2.85 ಲಕ್ಷ ಸಹಾಯಧನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಇನ್ನಾ -ಮಡ್ಣಣ್ ರಸ್ತೆಗೆ ಟ್ರಸ್ಟ್ ವತಿಯಿಂದ ಪದ್ಮಶಾಲಿ ಸಮಾಜದ ಎರ್ಮಾಳು ಟ್ರಸ್ಟ್ ವತಿಯಿಂದ ರೂ. 50ಲಕ್ಷ ಭರಿಸಿ ಅಭಿವೃದ್ಧಿ ಪಡಿಸಲಾಗುತ್ತದೆ. ಹಸಿರು ವಾತಾವರಣಕ್ಕೆ ಹೆಚ್ಚು ಒತ್ತು ನೀಡಿ ಅಭಿವೃದ್ಧಿ ಪಡಿಸಲಾಗುವುದು. ಇನ್ನಾ ಗ್ರಾಮಸ್ಥರು ಸಹಕಾರ ನೀಡಬೇಕು~ ಎಂದರು,

ಸಹಾಯಧನ: ಲೋಕಕಲ್ಯಾಣ ಪ್ರತಿಷ್ಠಾನ ವತಿಯಿಂದ ಪ್ರಜ್ಞಾ ಪ್ರಭಾಕರ ಶೆಟ್ಟಿ (ಉನ್ನತ ಶಿಕ್ಷಣ), ದಿನೇಶ್ ಕೋಡಿಮಾರ್ (ವೈದ್ಯಕೀಯ) , ಅವಿನಾಶ್ ಭಟ್ (ಉನ್ನತ ಶಿಕ್ಷಣ), ಜಲಜ ಪೂಜಾರ‌್ತಿ ಕುಚ್ಚಿಗುಡ್ಡೆ (ವೈದ್ಯಕೀಯ) ತಲಾ ರೂ. 25 ಸಾವಿರ ರೂ, ಹಾಗೂ ಮನೆ ಕಟ್ಟಲು, ಉಷಾ ವಿಶ್ವನಾಥ್, ರಮಾ ರಮೇಶ್, ಕಸ್ತೂರಿ ಆರ್.ಆಚಾರ್ಯ, ಸರಿತಾ ಬಿ.ಪೂಜಾರಿ, ಗಿರಿಜಾ ಪೂಜಾರಿ ಮಡ್ಮಣ್, ಇಂದಿರಾ ಕುರ್ಕಿಲಬೆಟ್ಟು, ಗೋಪಾಲ ಆಚಾರ್ಯ, ಹರಿಣಾಕ್ಷಿ ಪೂಜಾರ‌್ತಿ, ಪುಷ್ಪಾ ಮೂಲ್ಯ ಮಠದಕೆರೆ, ಶಾಂತಾ ವ್ಯಾಸರಾಯ, ಚಂದ್ರವತಿ ಎಮ್.ಸಫಲಿಗ, ಲೀಲಾ ಸಫಲಿಗರಿಗೆ ತಲಾ 10ಸಾವಿರ ರೂ. ನೀಡಲಾಯಿತು.

ಭಾರ್ಗವ ಟ್ರಸ್ಟ್‌ವತಿಯಿಂದ ಇನ್ನಾ ಬಬ್ಬುಸ್ವಾಮಿ ದೈವಸ್ಥಾನದ ಅಭಿವೃದ್ಧಿಗೆ ರೂ. 50ಸಾವಿರ, ಪದ್ಮಶಾಲಿ ಸಮಾಜದ ಎರ್ಮಾಳು ವೀರಭದ್ರ ದೈವಸ್ಥಾನಕ್ಕೆ ರೂ. 15ಸಾವಿರ ರೂ. ಸಹಾಯ ಧನ ನೀಡಲಾಯಿತು.
ಬೆಂಗಳೂರು ಲೋಕಕಲ್ಯಾಣ ಪ್ರತಿಷ್ಠಾನದ ಟ್ರಸ್ಟಿ ಪಿ.ಎನ್.ನಾಗರಾಜ್ ರಾವ್, ಉದ್ಯಮಿ ಶ್ರೀನಿವಾಸ ಅಸ್ರಣ್ಣ ಬೆಂಗಳೂರು, ಹೇಮಲತಾ ಅಸ್ರಣ್ಣ, ಭಾರ್ಗವ ಟ್ರಸ್ಟ್ ಅಧ್ಯಕ್ಷ ಕೆ.ಪಿ.ಆಚಾರ್ಯ, ಕಾರ್ಯದರ್ಶಿ ವಿಶ್ವನಾಥ ಭಟ್, ದೇವಳದ ಅರ್ಚಕ ರಾಜಾಭಟ್, ವೈ.ಎಸ್.ಸುದರ್ಶನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT