ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ-20 ಕ್ರಿಕೆಟ್‌ನಿಂದಲೂ ದೂರ

Last Updated 30 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ವೆಲಿಂಗ್ಟನ್: ವಿಶ್ವಕಪ್ ಟೂರ್ನಿಯ ಪ್ರಥಮ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಪರಾಭವಗೊಂಡಿರುವ ನ್ಯೂಜಿಲೆಂಡ್ ತಂಡದ ಡೇನಿಯಲ್ ವೆಟೋರಿ ನಾಯಕತ್ವ ಪಟ್ಟದಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ. ‘ಟೆಸ್ಟ್, ಏಕದಿನ ಮತ್ತು ಟ್ವೆಂಟಿ-20 ಕ್ರಿಕೆಟ್‌ಗಳಿಂದ ನಾಯಕತ್ವ ಪಟ್ಟ ಬಿಡುತ್ತೇನೆ. ಇನ್ನು ಮುಂದೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಆಡುವುದಿಲ್ಲ ಮತ್ತು ಏಕದಿನ ಪಂದ್ಯಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತೇನೆ’ ಎಂದು ಹೇಳಿದ್ದಾರೆ.  

‘ಇನ್ನೂ ಆರು ತಿಂಗಳವರೆಗೆ ನ್ಯೂಜಿಲೆಂಡ್ ತಂಡ ಯಾವುದೇ ಏಕದಿನ ಸರಣಿ ಆಡುತ್ತಿಲ್ಲ. ಆದ್ದರಿಂದ ನನ್ನ ಭವಿಷ್ಯದ ಬಗ್ಗೆ ವಿಚಾರ ಮಾಡಲು ನನಗಿನ್ನೂ ಸಾಕಷ್ಟು ಸಮಯವಿದೆ. ಈ ಬಗ್ಗೆ ನನ್ನ ಕುಟುಂಬದೊಂದಿಗೆ ಸಮಾಲೋಚನೆ ನಡೆಸುತ್ತೇನೆ’ ಎಂದು ಎಡಗೈ ಸ್ಪಿನ್ನರ್ ವೆಟೋರಿ ತಿಳಿಸಿದ್ದಾರೆ.

ಶ್ರೀಲಂಕಾದಿಂದ ತಂಡವು ತವರಿಗೆ ಮರಳುವ ಮುನ್ನವೇ ವೆಟೋರಿ ನಾಯಕತ್ವ ಬಿಡುವ ಬಗ್ಗೆ ಘೋಷಿಸಿದ್ದರು. ಅವರು ನಾಯಕತ್ವ ವಹಿಸಿದ್ದ 82 ಪಂದ್ಯಗಳಲ್ಲಿ ಕಿವಿಸ್ 41 ಗೆದ್ದು, 33ರಲ್ಲಿ ಸೋತಿತ್ತು. 32 ಟೆಸ್ಟ್‌ಗಳಲ್ಲಿ ಆರು ಜಯ, 16 ಸೋಲು ಮತ್ತು 10 ಡ್ರಾ ಪಂದ್ಯಗಳು ಇವೆ. 28 ಟ್ವೆಂಟಿ-20 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು. ಉಪನಾಯಕ ರಾಸ್ ಟೇಲರ್ ತಂಡದ ನಾಯಕರಾಗುವ ನಿರೀಕ್ಷೆ ಇದ್ದು, ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ ಇನ್ನೂ ಪ್ರಕಟಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT