ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ-20: ರಾಜಸ್ತಾನ ರಾಯಲ್ಸ್‌ಗೆ ಮಣಿದ ಡೆಕ್ಕನ್ ಚಾರ್ಜರ್ಸ್

Last Updated 9 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಜಾನ್ ಬೋಥಾ ಅವರ ಅಜೇಯ ಅರ್ಧಶತಕ ಹಾಗೂ ಸಿದ್ಧಾರ್ಥ್ ತ್ರಿವೇದಿ ಒಳಗೊಂಡಂತೆ ಎಲ್ಲ ಬೌಲರ್‌ಗಳ ಪ್ರಭಾವಿ ಪ್ರದರ್ಶನದ ನೆರವಿನಿಂದ ರಾಜಸ್ತಾನ ರಾಯಲ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಶೇನ್ ವಾರ್ನ್ ನೇತೃತ್ವದ ರಾಜಸ್ತಾನ ರಾಯಲ್ಸ್ ಎಂಟು ವಿಕೆಟ್‌ಗಳಿಂದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಮಣಿಸಿತು.

ಕುಮಾರ ಸಂಗಕ್ಕಾರ ನಾಯಕತ್ವದ ಡೆಕ್ಕನ್ ಚಾರ್ಜರ್ಸ್ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 137 ರನ್ ಪೇರಿಸಿತು. ಬೋಥಾ ಅವರ ಅಬ್ಬರದ ಬ್ಯಾಟಿಂಗ್ ಕಾರಣ ರಾಯಲ್ಸ್‌ಗೆ ಈ ಮೊತ್ತ ಸಣ್ಣದಾಗಿ ಕಂಡಿತು. 18.5 ಓವರ್‌ಗಳಲ್ಲಿ 2 ವಿಕೆಟ್‌ಗೆ 141 ರನ್ ಗಳಿಸಿ ಜಯ ಸಾಧಿಸಿತು. ದಕ್ಷಿಣ ಅಫ್ರಿಕಾದ ಬೋಥಾ 47 ಎಸೆತಗಳಲ್ಲಿ 67 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಹಾಗೂ ಎಂಟು ಬೌಂಡರಿ ಇದ್ದವು. ಅಮಿತ್ ಪೌಣಿಕರ್ (20) ಮತ್ತು ರಾಹುಲ್ ದ್ರಾವಿಡ್ (28) ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ನೀಡಿದರು.

ದ್ರಾವಿಡ್ ಮತ್ತು ಬೋಥಾ ಎರಡನೇ ವಿಕೆಟ್‌ಗೆ 52 ರನ್ ಸೇರಿಸಿದರು. ದ್ರಾವಿಡ್ ಔಟಾದ ಬಳಿಕ ಕ್ರೀಸ್‌ಗಿಳಿದ ರಾಸ್ ಟೇಲರ್ ಬೋಥಾಗೆ ಉತ್ತಮ ಸಾಥ್ ನೀಡಿದರು. ಇಬ್ಬರೂ ಮುರಿಯದ ಮೂರನೇ ವಿಕೆಟ್‌ಗೆ 58 ರನ್ ಸೇರಿಸಿ ತಂಡಕ್ಕೆ ಸುಲಭ ಗೆಲುವು ತಂದಿತ್ತರು. ಟೇಲರ್ 14 ಎಸೆತಗಳಿಂದ 21 (1 ಬೌಂ, 2 ಸಿಕ್ಸರ್) ರನ್ ಗಳಿಸಿದರು.

ರಾಯಲ್ಸ್ ಗೆಲುವಿಗೆ ಕೊನೆಯ ಮೂರು ಓವರ್‌ಗಳಲ್ಲಿ 30 ರನ್‌ಗಳು ಬೇಕಿದ್ದವು. ಟೇಲರ್ ಹಾಗೂ ಬೋಥಾ ಅಬ್ಬರಿಸಿದ ಕಾರಣ ಇನ್ನೂ ಏಳು ಎಸೆತಗಳು ಇರುವಂತೆಯೇ ತಂಡ ಗೆಲುವಿನ ಗಡಿ ದಾಟಿತು. ಇದಕ್ಕೂ ಮೊದಲು ಸಿದ್ಧಾರ್ಥ್ ತ್ರಿವೇದಿ (15ಕ್ಕೆ 3), ಅಮಿತ್ ಸಿಂಗ್ (35ಕ್ಕೆ 3) ಮತ್ತು ವಾರ್ನ್ (21ಕ್ಕೆ 2) ಅವರ ಪ್ರಭಾವಿ ಬೌಲಿಂಗ್ ಮುಂದೆ ಚಾರ್ಜರ್ಸ್ ತಂಡ ರನ್ ಗಳಿಸಲು ಪರದಾಟ ನಡೆಸಿತು.

ಶಿಖರ್ ಧವನ್ (24) ಮತ್ತು ಇಶಾಂಕ್ ಜಗ್ಗಿ (25) ಚಾರ್ಜರ್ಸ್ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಬಳಿಕ ಆಗಿಂದಾಗ್ಗೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕುಮಾರ ಸಂಗಕ್ಕಾರ ಖಾತೆ ತೆರೆಯಲು ವಿಫಲರಾದರು. ಡೇನಿಯಲ್ ಕ್ರಿಸ್ಟಿಯನ್ (26) ಮತ್ತು ರವಿ ತೇಜ (28) ಕೊನೆಯಲ್ಲಿ ಅಲ್ಪ ಹೋರಾಟ ನಡೆಸಿದರು.

ಸ್ಕೋರ್ ವಿವರ

ಡೆಕ್ಕನ್ ಚಾರ್ಜರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 137

ಶಿಖರ್ ಧವನ್ ಸಿ ರಾವತ್ ಬಿ ಅಮಿತ್ ಸಿಂಗ್  24
ಇಶಾಂಕ್ ಜಗ್ಗಿ ಸಿ ಬೋಥಾ ಬಿ ಶೇನ್ ವಾರ್ನ್  25
ಕುಮಾರ ಸಂಗಕ್ಕಾರ ಸಿ ಪೌಣಿಕರ್ ಬಿ ಸಿದ್ಧಾರ್ಥ್ ತ್ರಿವೇದಿ  00
ಭರತ್ ಚಿಪ್ಲಿ ಬಿ ಸಿದ್ಧಾರ್ಥ್ ತ್ರಿವೇದಿ  06
ಜೆಪಿ ಡುಮಿನಿ ಸಿ ಬೋಥಾ ಬಿ ಶೇನ್ ವಾರ್ನ್  14
ಡೇನಿಯಲ್ ಕ್ರಿಸ್ಟಿಯನ್ ಸಿ ರಹಾನೆ ಬಿ ಸಿದ್ಧಾರ್ಥ್ ತ್ರಿವೇದಿ  26
ರವಿ ತೇಜ ಸಿ ಮೆನೇರಿಯ ಬಿ ಅಮಿತ್ ಸಿಂಗ್  28
ಡೆಲ್ ಸ್ಟೇನ್ ಸಿ ಬೋಥಾ ಬಿ ಅಮಿತ್ ಸಿಂಗ್  07
ಅಮಿತ್ ಮಿಶ್ರಾ ಔಟಾಗದೆ  02
ಇಶಾಂತ್ ಶರ್ಮ ಔಟಾಗದೆ  01
ಇತರೆ (ವೈಡ್-1)  04
ವಿಕೆಟ್ ಪತನ: 1-40 (ಧವನ್), 2-40 (ಸಂಗಕ್ಕಾರ), 3-53 (ಚಿಪ್ಲಿ), 4-69 (ಜಗ್ಗಿ), 5-77 (ಡುಮಿನಿ), 6-114 (ಕ್ರಿಸ್ಟಿಯನ್), 7-130 (ರವಿ ತೇಜ), 8-134 (ಸ್ಟೇನ್)
ಬೌಲಿಂಗ್: ಜೇಕಬ್ ಓರಾಮ್ 2-0-13-0, ಅಮಿತ್ ಸಿಂಗ್ 4-0-35-3, ಜಾನ್ ಬೋಥಾ 4-0-31-0, ಸಿದ್ಧಾರ್ಥ್ ತ್ರಿವೇದಿ 4-0-15-3, ಶೇನ್ ವಾರ್ನ್ 4-0-21-2, ಅಶೋಕ್ ಮೆನೇರಿಯ 1-0-8-0, ಸ್ಟುವರ್ಟ್ ಬಿನ್ನಿ 1-0-14-0

ರಾಜಸ್ತಾನ ರಾಯಲ್ಸ್ 18.5 ಓವರ್‌ಗಳಲ್ಲಿ 2 ವಿಕೆಟ್‌ಗೆ 141


ಅಮಿತ್ ಪೌಣಿಕರ್ ಸಿ ಸಂಗಕ್ಕಾರ ಬಿ ಡೆಲ್ ಸ್ಟೇನ್ 20
ರಾಹುಲ್ ದ್ರಾವಿಡ್ ಬಿ ಡೆಲ್ ಸ್ಟೇನ್  28
ಜಾನ್ ಬೋಥಾ ಔಟಾಗದೆ  67
ರಾಸ್ ಟೇಲರ್ ಔಟಾಗದೆ  21
ಇತರೆ: (ಲೆಗ್ ಬೈ-2, ವೈಡ್-1, ನೋಬಾಲ್-2) 05
ವಿಕೆಟ್ ಪತನ: 1-31 (ಪೌಣಿಕರ್), 2-83 (ದ್ರಾವಿಡ್)
ಬೌಲಿಂಗ್: ಪ್ರಗ್ಯಾನ್ ಓಜಾ 3.5-0-44-0, ಡೆಲ್ ಸ್ಟೇನ್ 4-0-18-2, ಇಶಾಂತ್ ಶರ್ಮ 4-0-24-0, ಡೇನಿಯಲ್ ಕ್ರಿಸ್ಟಿಯನ್ 3-0-25-0, ಅಮಿತ್ ಮಿಶ್ರಾ 4-0-28-0
ಫಲಿತಾಂಶ: ರಾಜಸ್ತಾನ ರಾಯಲ್ಸ್‌ಗೆ 8 ವಿಕೆಟ್ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT