ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಲಿಸಿಸ್ ಮತ್ತಷ್ಟು ಸಲೀಸು

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೂವತೈದು ವರ್ಷದ ಡಿ ಸೆಲ್ವ ಅವರದು ನೆಮ್ಮದಿಯ ಸಂಸಾರ. ತಮ್ಮ ಒತ್ತಡದ ಕೆಲಸದಲ್ಲೂ ಕುಟುಂಬದೊಂದಿಗೆ ಪ್ರೀತಿಯಿಂದ ಸಮಯ ಕಳೆಯುತ್ತಿದ್ದರು. ಹೀಗೆ ನಗುತ್ತಾ ಸಾಗುತ್ತಿದ್ದ ಅವರ ಜೀವನದಲ್ಲಿ ಆಘಾತಕಾರಿ ಘಟನೆಯೊಂದು ನಡೆಯಿತು. ಡಿ ಸೆಲ್ವ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಡಯಾಲಿಸಿಸ್ಸೇ ಗತಿ ಎಂದು ತಿಳಿದ ಅವರಿಗೆ ಸಹಜವಾಗಿಯೇ ಆಘಾತ ಉಂಟಾಗಿತ್ತು.

ಡಿ ಸೆಲ್ವ ಕೆಲಸ ಬಿಟ್ಟು ತನ್ನ ಉಳಿದ ಸಮಯವನ್ನು ಡಯಾಲಿಸಿಸ್‌ಗೆ ಮೀಸಲಿಡಲು ಮಾನಸಿಕವಾಗಿ ತಯಾರಾದರು. ಕೆಲವು ತಿಂಗಳ ನಂತರ ಡಿ ಸೆಲ್ವ `ನನ್ನ ನಿತ್ಯ ಜೀವನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಾನು ಡಯಾಲಿಸಿಸ್ ಮಾಡಿಸಿಕೊಳ್ಳುವುದರ ಜತೆಗೆ ಕೆಲಸವನ್ನೂ ಮಾಡುತ್ತೇನೆ ಎಂದಾಗ ಹೌದೆ ಎಂಬ ಸಂಶಯ ಮೂಡುವುದು ಸಹಜ.
ಆದರೆ ಇದು ಸತ್ಯ ಮತ್ತು ಸಾಧ್ಯ ಎಂಬ ಭರವಸೆ ನೀಡುತ್ತಾರೆ ಮಣಿಪಾಲ್ ಆಸ್ಪತ್ರೆಯ ಡಾ.ವಿಶ್ವನಾಥ್. 

ಡಯಾಲಿಸಿಸ್ ಎಂದರೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಆತಂಕ ಹಾಗೂ ಭೀತಿ. ಇಡೀ ದಿನ ಆಸ್ಪತ್ರೆಯಲ್ಲಿ ಕಳೆಯಬೇಕು. ನಂತರ ಎಂದಿನಂತೆ ಕೆಲಸ ಮಾಡಲಾಗುವುದಿಲ್ಲ. ಸಾಕಷ್ಟು ವಿಶ್ರಾಂತಿ ಬೇಕು ಎಂದೆಲ್ಲ ಯೋಚಿಸುತ್ತಾರೆ. ಇದು ಕೇವಲ ಆತಂಕ ಎನ್ನುವುದು ಡಾ.ವಿಶ್ವನಾಥ ಅವರ ಅಭಿಪ್ರಾಯ.

ಇಡೀ ದೇಹದ ರಕ್ತವನ್ನು ಶುದ್ಧಗೊಳಿಸುವ ಮೂತ್ರಕೋಶ ತನ್ನ ಕಾರ್ಯ ಸ್ಥಗಿತಗೊಳಿಸಿದರೆ ದೇಹದ ವ್ಯವಸ್ಥೆಯೇ ಏರುಪೇರಾಗುತ್ತದೆ. ಡಯಾಲಿಸಿಸ್ ಮೂತ್ರಕೋಶ ನಿರ್ವಹಿಸಲಾಗದ ಕೆಲಸವನ್ನು ಮಾಡುತ್ತದೆ. ದೇಹದ ರಕ್ತ ಶುದ್ಧಿಯ ನಂತರ ಎಂದಿನಂತೆ ಕೆಲಸಕ್ಕೆ ಹೋಗಬಹುದು ಎನ್ನುವುದು ಅವರ ವಿವರಣೆ.

ಇಷ್ಟಕ್ಕೂ ಮೂತ್ರಕೋಶದ ವೈಫಲ್ಯ ಇರುವವರಿಗೆ ಡಯಾಲಿಸಿಸ್ ಉತ್ತಮ ಪರಿಹಾರವಾಗಿದೆ. ಯಾರಿಗೆ ಎಷ್ಟು ಸಲ ಈ ಚಿಕಿತ್ಸೆಯ ಅಗತ್ಯವಿದೆ ಎನ್ನುವುದು ವೈದ್ಯರೇ ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಸ್ಥೂಲಕಾಯದವರಿಗೆ, ರಕ್ತದ ಏರೊತ್ತಡ ಸಮಸ್ಯೆ ಇರುವವರೆಗೆ ವಾರಕ್ಕೆ ಎರಡು ಮೂರು ಸಲವಾದರೂ ಅಗತ್ಯವಿರುತ್ತದೆ. ಕೆಲವರು ಒಮ್ಮೆ ಡಯಾಲಿಸಿಸ್ ಆದ ನಂತರ ದೇಹದಲ್ಲಿ ಚೇತನ ಕಂಡು ಬರುತ್ತದೆ. ನಂತರ ನಿಗದಿತ ಅವಧಿಯ ಬದಲು, ಏನಾದರೂ ಸಮಸ್ಯೆ ತಲೆದೋರುವವರೆಗೂ ಆಸ್ಪತ್ರೆಯತ್ತ ಮುಖ ಮಾಡುವುದಿಲ್ಲ. ಈ ಧೋರಣೆ ತಪ್ಪು. ವೈದ್ಯಕೀಯ ಸಲಹೆಯಂತೆ ಡೈಯಾಲಿಸಿಸ್‌ಗೆ ಒಳಪಡಲೇಬೇಕು ಎಂಬುದು ಡಾ.ವಿಶ್ವನಾಥ ನೀಡುವ ಸಲಹೆ.

ಪ್ರತಿ ಡಯಾಲಿಸಿಸ್‌ಗೆ 10ರಿಂದ 20 ಸಾವಿರದವರೆಗೆ ಖರ್ಚಾಗುತ್ತದೆ.  ನಿಮ್ಮ ಇಡೀ ದಿನ ವ್ಯರ್ಥವಾಗುವುದಿಲ್ಲ. ಎರಡು ಮೂರು ಗಂಟೆಯ ಅವಧಿಯೊಳಗೆ ಈ ಡಯಾಲಿಸಿಸ್ ಪ್ರಕ್ರಿಯೆ ಮುಗಿದು ಹೋಗುತ್ತದೆ. ಸೂಜಿ ಚುಚ್ಚಿಸಿಕೊಂಡು ಮನೆಗೆ ನಿರಾಳವಾಗಿ ಹೋಗುವಂತೆಯೇ ಈ ಚಿಕಿತ್ಸೆಯ ನಂತರವೂ ತಮ್ಮೆಲ್ಲ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಬಹುದು ಎನ್ನುತ್ತಾರೆ ಡಾ. ವಿಶ್ವನಾಥ್ ಅವರು.
ಆರೋಗ್ಯ ಹಾಳಾಗುವ ಮೊದಲು ಅದನ್ನು ಕಾಪಾಡಿಕೊಳ್ಳುವತ್ತ ಗಮನಹರಿಸುವುದು ಹೆಚ್ಚು ಸೂಕ್ತ. ಮೂತ್ರಕೋಶದ ಸಮಸ್ಯೆಗಳಿಗೆ ಪರಿಹಾರ ನೀರು ಕುಡಿದಷ್ಟೇ ಸಲೀಸು.

ಹೇರಳವಾಗಿ ಶುದ್ಧನೀರು ಕುಡಿಯಿರಿ. ಮದ್ಯಪಾನ, ಧೂಮಪಾನದಿಂದ ದೂರವಿರಿ. ನಿಗದಿತ ವ್ಯಾಯಾಮ ಹಾಗೂ ಪೌಷ್ಠಿಕ ಆಹಾರ ನಿಮ್ಮ ನಿತ್ಯ ಜೀವನದ ಭಾಗವಾಗಿದ್ದರೆ ಯಾವ ಚಿಕಿತ್ಸೆಗಳೂ ಬೇಡ. ದೇಹವೆಂಬ ಯಂತ್ರ ತನ್ನ ಕಾರ್ಯವನ್ನು ತಾನೇ ಸಮರ್ಪಕವಾಗಿ ನಿರ್ವಹಿಸುತ್ತದೆ ಎನ್ನುವುದು ಅವರ ಸಲಹೆ.  ಹೆಚ್ಚಿನ ಮಾಹಿತಿಗೆ ಕೋರಮಂಗಲದಲ್ಲಿ ಇರುವ ಇವರ ಎಂಸಿಸಿ ಡಯಾಲಿಸಿಸ್ ಕ್ಲಿನಿಕ್‌ಗೆ ಭೇಟಿ ನೀಡಬಹುದು. ಸಂಪರ್ಕಕ್ಕೆ: 39893979


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT