ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.11 ರಿಂದ ಬ್ರಷ್‌ಸ್ಟ್ರೋಕ್ಸ್

ಕ–ಕಲಾಪ
Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಅನುಭವಿ ಕಲಾವಿದರೊಂದಿಗೆ ಉದಯೋನ್ಮುಖ ಕಲಾವಿದರು ಭಾಷೆ, ಸಂಸ್ಕೃತಿ, ರಾಜ್ಯಗಳ ಎಲ್ಲೆ ಮೀರಿದ ಕಲಾ ಪ್ರಪಂಚವೊಂದು ಚಿತ್ರಕಲಾ ಪರಿಷತ್‌ನಲ್ಲಿ ಡಿ.11ರಂದು ಅನಾವರಣಗೊಳ್ಳಲಿದೆ. ವಂಗಬಂಧು ಕಲಾವಿದರು ಹಾಗೂ ಕನ್ನಡದ ಕಲಾವಿದರ ಕಲಾಕೃತಿಗಳ ಸಮ್ಮಿಲನವಿದು. colourentice.com ಎಂಬ ಸಂಘಟನೆಯು ಇಂಥ ಪ್ರಯತ್ನವನ್ನು ಕಳೆದ ಎಂಟು ವರ್ಷಗಳಿಂದ ಸತತವಾಗಿ ಮಾಡುತ್ತಿದೆ. ಬೆಂಗಳೂರಿಗೆ ತನ್ನ ಕಲಾಯಾನವನ್ನು ತಂದಿರುವುದು ಇದೇ ಮೊದಲು.
 
ಡಿಸೆಂಬರ್ ೧೭ರವರೆಗೂ ನಡೆಯಲಿರುವ ಈ ಕಲಾಕೃತಿ ಪ್ರದರ್ಶನದಲ್ಲಿ ಕರ್ನಾಟಕ ಹಾಗೂ ಬಂಗಾಳದ ಪ್ರಸಿದ್ಧ ಸಮಕಾಲೀನ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಇವರು ರಚಿಸಿರುವ ಪ್ರತಿಯೊಂದು ಕಲಾಕೃತಿ ಭಿನ್ನ ವಸ್ತುವನ್ನೊಳಗೊಂಡ, ವಿಭಿನ್ನ ಶೈಲಿಯ, ಕಲಾಕೃತಿಯಿಂದ ಕಲಾಕೃತಿಗೆ ಭಿನ್ನವಾದ ಬಣ್ಣ, ರಚನೆ ಇತ್ಯಾದಿಯಿಂದ ಕಲಾಸಕ್ತರಿಗೆ ಹೊಸ ಅನುಭೂತಿ ನೀಡಲಿದೆ.
ಕಲರ್‌ಎಂಟೈಸ್.ಕಾಂ ಜತೆಗೆ ಹೆಬ್ರಾನ್ ಪ್ರಾಪರ್ಟೀಸ್ ಹಾಗೂ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಕೂಡ ಪ್ರದರ್ಶನ ಆಯೋಜನೆಯಲ್ಲಿ ಕೈಜೋಡಿಸಿವೆ.

ಕರ್ನಾಟಕದ ಗಣೇಶ್ ದೊಡ್ಡಮಾಣಿ, ಡಾ. ಅರ್ಚನಾ ಗುಪ್ತಾ, ದಿಲೀಪ್ ಕಾಳೆ, ಜಗನ್ನಾಥ್, ಶೇಖರ್ ಬಳ್ಳಾರಿ ಅವರೊಂದಿಗೆ ಹಾಸನದ ಜಯದೇವಣ್ಣ ಅವರ ಆಕ್ರಿಲಿಕ್ ಕಲಾಕೃತಿಯಲ್ಲಿ ರಚಿತಗೊಂಡ ಕುಟುಂಬ, ಬೆಂಗಳೂರಿನ ಮಿಲಿಂದ್ ನಾಯಕ್ ಅವರ ಕುಂಚದಲ್ಲಿ ಅರಳಿದ ಕಮಲದ ಕೊಳದ ತೈಲ ಕಲಾಕೃತಿಗಳು ಪ್ರದರ್ಶನದ ಕೆಲವು ಪ್ರಮುಖ ಕಲಾಕೃತಿಗಳು. ಕೊಲ್ಕತ್ತದ ಸುಬ್ರತೋ ಘೋಷ್ ಅವರ ಕೃಷ್ಣನ ಮನಮೋಹಕ ಕಲಾಕೃತಿ, ರಾಜಿಬ್ ಸುರ್ ರಾಯ್ ಅವರ ಭಾವನೆಗಳ ಪ್ರತೀಕದಂತಿರುವ ‘ಎಮೋಷನ್’, ಸೈಲೆನ್ ಘೋಷ್ ಅವರ ರಾಧೆಯ ಕಂಚಿನ ಪ್ರತಿಮೆ ಪ್ರದರ್ಶನಗೊಳ್ಳುತ್ತಿವೆ. ಇವರೊಂದಿಗೆ ಧರೇನ್ ಸಾಸ್ಮಾಲ್, ಅಂಜನ್ ಭಟ್ಟಾಚಾರ್ಯ, ಅರುಣ್ ಕುಮಾರ್ ಸಮದ್ದೆರ್, ದಿಜ್ವೆನ್ ಗುಪ್ತಾ ಅವರೊಂದಿಗೆ ಹಿರಿಯ ಅನುಭವಿ ಕಲಾವಿದರಾದ ಶ್ರೀಕಾಂತ್ ಕೊಹ್ಲೆ, ಪ್ರಶಾಂತ್ ನಾಯಕ್, ಸಾಧು ಅಲಿಯೂರ್ ಮುಂತಾದವರು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಲರ್‌ಎಂಟೈಸ್.ಕಾಂ ಆಯೋಜಿಸುತ್ತಿರುವ ಈ ಕಲಾಕೃತಿ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವ ಕಲಾವಿದರಲ್ಲಿ ಕೆಲವರು ಬ್ಯಾಂಕ್ ಉದ್ಯೋಗಿಗಳಾದರೆ, ಇನ್ನು ಕೆಲವರು ಮಾರ್ಕೆಟಿಂಗ್ ವೃತ್ತಿಯಲ್ಲಿರುವವರು. 

ಭಾರತೀಯ ಜನಪದ ಕಲೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಅದರ ಉತ್ತೇಜನದಲ್ಲೇ ತಮ್ಮ ಆಸಕ್ತಿಯನ್ನು ಕೇಂದ್ರೀಕರಿಸಿದ್ದಾರೆ. ಆ ಮೂಲಕ ಇನ್ನೂ ಬೆಳಕಿಗೆ ಬರಬೇಕಾದ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಇಂಥದ್ದೊಂದು ಪ್ರದರ್ಶನವನ್ನು ಅಯೋಜಿಸುತ್ತಾ ಬಂದಿದ್ದಾರೆ. ಈ ಪ್ರದರ್ಶನದ ನಂತರ ದೇಶದ ಇತರ ನಗರಗಳಲ್ಲೂ ಪ್ರದರ್ಶನ ಕಾಣಲಿವೆ.

ಡಿಸೆಂಬರ್ ೧೧ರಂದು  ನಟಿಯರಾದ ಜಯಮಾಲಾ, ಭಾವನಾ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಹಾಗೂ ಡಾ. ವಿಜಯ್ ಹಗರ್‌ಗುಂಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸ್ಥಳ: ಗ್ಯಾಲರಿ ೧, ೨, ೩ ಹಾಗೂ ಲಾಬಿ ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಸಂಜೆ ೫.೩೦.

ಹೆಚ್ಚಿನ ಮಾಹಿತಿಗೆ:- ಚಂದ್ರ ಶೇಖರ್ ಗೌಡ್ ಎಚ್– 9972004455

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT