ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ತಂಡದಲ್ಲಿ ತುಂಬಾ ಸುಧಾರಣೆ ಆಗಿದೆ'

ಕೊಹ್ಲಿ ನಾಯಕತ್ವಕ್ಕೆ ಡಿವಿಲಿಯರ್ಸ್ ಮೆಚ್ಚುಗೆ
Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

strong>ಬೆಂಗಳೂರು: `ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈ ವರ್ಷ ತುಂಬಾ ಸುಧಾರಣೆ ಆಗಿದೆ. ಅದರಲ್ಲೂ ಬೌಲಿಂಗ್‌ನಲ್ಲಿ ತಂಡ ಶಕ್ತಿಯುತವಾಗಿದೆ. ಇದು ಬ್ಯಾಟ್ಸ್‌ಮನ್‌ಗಳ ವಿಶ್ವಾಸ ಹೆಚ್ಚಿಸಿದೆ. ಉಳಿದ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ನಾವು ಸ್ಥಿರ ಪ್ರದರ್ಶನ ತೋರುತ್ತಿದ್ದೇವೆ' ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಶನಿವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಎದುರು ಆಡಲಿರುವ ಚಾಲೆಂಜರ್ಸ್ ಆಟಗಾರರು ಗುರುವಾರ ಕಠಿಣ ತಾಲೀಮು ನಡೆಸಿದರು.

`ನಮ್ಮದು ಉತ್ತಮ ತಂಡ. ಆದರೆ ಟ್ರೋಫಿ ಗೆಲ್ಲಲು ನಮಗೆ ಸಾಧ್ಯವಾಗಿಲ್ಲ. ಈ ಕಾರಣ ಆರನೇ ಆವೃತ್ತಿಯ ಟೂರ್ನಿ ನಮ್ಮ ಪಾಲಿಗೆ ತುಂಬಾ ಮಹತ್ವದ್ದು. ಈ ಬಾರಿ ಉತ್ತಮ ಆರಂಭ ಲಭಿಸಿದೆ. ಹಿಂದೆಂದಿಗಿಂತಲೂ ಚೆನ್ನಾಗಿ ಆಡುತ್ತಿದ್ದೇವೆ. ಅದನ್ನು ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು' ಎಂದು ಡಿವಿಲಿಯರ್ಸ್ ನುಡಿದಿದ್ದಾರೆ.

ಈ ಟೂರ್ನಿಯಲ್ಲಿ ತಂಡ ಮುನ್ನಡೆಸುತ್ತಿರುವ ಅತಿ ಕಿರಿಯ ನಾಯಕ ಎನಿಸಿರುವ ವಿರಾಟ್ ಕೊಹ್ಲಿ ಬಗ್ಗೆ ದಕ್ಷಿಣ ಆಫ್ರಿಕಾದ ಡಿವಿಲಿಯರ್ಸ್ ಮೆಚ್ಚುಗೆ ಮಾತುಗಳನ್ನು ಹರಿಬಿಟ್ಟರು. `ಕೊಹ್ಲಿ ಅವರಿಗೆ ಇನ್ನೂ 24 ವರ್ಷ ವಯಸ್ಸು. ನಾಯಕತ್ವದ ಅನುಭವ ಕೂಡ ಇಲ್ಲ. ಆದರೆ ಉತ್ತಮ ರೀತಿಯಲ್ಲಿ ತಂಡ ಮುನ್ನಡೆಸುತ್ತಿದ್ದಾರೆ. ಬ್ಯಾಟಿಂಗ್‌ನಲ್ಲೂ ಅಮೋಘ ಪ್ರದರ್ಶನ ತೋರುತ್ತಿದ್ದಾರೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT