ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಜ್ಞರಿಂದ ತಪಾಸಣೆ ಮಾಡಿಸಿ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಿರೂಪಾಕ್ಷಪುರ (ಕೊಡಿಗೇಹಳ್ಳಿ) ಮಾರಮ್ಮನ ದೇವಸ್ಥಾನದ ಪಕ್ಕದಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಅಶ್ವತ್ಥ ವೃಕ್ಷವಿದೆ. ಇದರ ಕಾಂಡವೇನೋ ದೊಡ್ಡ ಗಾತ್ರದಲ್ಲಿದ್ದು, ಒಂದೊಂದು ರೆಂಬೆ ಕೊಂಬೆಗಳೂ ಒಂದೊಂದು ಮರದಂತಿವೆ. ಇವು ರಸ್ತೆಯ ನಾಲ್ಕೂ ಕಡೆಗೂ ಮುಗಿಲು ಮುಟ್ಟುವಂತೆ ಚಾಚಿಕೊಂಡಿವೆ. ಮರದ ಸುತ್ತಲೂ ಅಪಾರ್ಟ್‌ಮೆಂಟ್‌ಗಳಿದ್ದು, ರಸ್ತೆ ಸಂಚಾರದಿಂದ ಸದಾ ಗಿಜುಗುಟ್ಟುತ್ತಿರುತ್ತದೆ.

ವಯಸ್ಸಾದ ಬೃಹತ್‌ ರೆಂಬೆಗಳ ಕೆಳಗೆ ಶಾಲಾ ವಾಹನಗಳು, ಇತರೇ ವಾಹನಗಳು, ಜನರು ಸಂಚರಿಸುತ್ತಲೇ ಇರುತ್ತಾರೆ. ಹೀಗೆ ರಸ್ತೆಯ ಮೇಲೆ ಹರಡಿಕೊಂಡಿರುವ ರೆಂಬೆ ಸಮೂಹಗಳಿಂದ ಅಪಾಯವಿದೆಯೋ ಇಲ್ಲವೋ ಎಂಬುದನ್ನು ಬಿ.ಬಿ.ಎಂ.ಪಿ.ಯವರು ತಜ್ಞರಿಂದ  ಪರೀಕ್ಷಿಸಿ ಕ್ರಮ ತೆಗೆದುಕೊಂಡರೆ ಅನಾಹುತ ತಪ್ಪಿಸಿದಂತಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT