ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥೋದ್ಭವ ಅನ್ನಸಂತರ್ಪಣೆ: ಮಂಡ್ಯಕ್ಕಿಲ್ಲ ಅವಕಾಶ

Last Updated 13 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಮಂಡ್ಯ: ಕಾವೇರಿಯ ಉಗಮಸ್ಥಾನ ಮಡಿಕೇರಿ ಜಿಲ್ಲೆಯ ತಲಕಾವೇರಿಯಲ್ಲಿ ಆಗುವ ಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಕಳೆದ 12 ವರ್ಷಗಳಿಂದ ಮಂಡ್ಯ ಜಿಲ್ಲೆಯ ಕಾವೇರಿ ತೀರ್ಥೋದ್ಭವ ಅನ್ನಸಂತರ್ಪಣಾ ಟ್ರಸ್ಟ್ ವತಿಯಿಂದ ಮಾಡುತ್ತಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಈಗ ಕಲ್ಲು ಬಿದ್ದಿದೆ.

ಅನ್ನಸಂತರ್ಪಣಾ ಟ್ರಸ್ಟ್ ವತಿಯಿಂದ ಭಗಂಡೇಶ್ವರ-ತಲಕಾವೇರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಪತ್ರ ಬರೆದು, ತೀರ್ಥೋದ್ಭವ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅನ್ನ ಸಂತರ್ಪಣೆ ಮಾಡಲು ಅನುಮತಿ ನೀಡಬೇಕು ಎಂದು ಪತ್ರ ಬರೆಯಲಾಗಿತ್ತು.

ವಿಧಾನಸಭೆ ಅಧ್ಯಕ್ಷ ಕೆ.ಜಿ. ಭೂಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಅಧ್ಯಕ್ಷತೆಯಲ್ಲಿ ಹಲವಾರು ಸಂಘ-ಸಂಸ್ಥೆಗಳ ವತಿಯಿಂದ ಅನ್ನಸಂತರ್ಪಣಾ ಮಾಡುವ ಬದಲಾಗಿ ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಒಂದೇ ಸೂರಿನಡಿ ದೇವಾಲಯದ ವ್ಯವಸ್ಥಾಪನಾ ಸಮಿತಿ ವತಿಯಿಂದಲೇ ಅನ್ನ ಸಂತರ್ಪಣಾ ಮಾಡಲು ನಿರ್ಧರಿಸಲಾಗಿದೆ.

ಟ್ರಸ್ಟ್ ವತಿಯಿಂದ ಅನ್ನ ಸಂತರ್ಪಣೆಗೆ ಅಗತ್ಯವಾದ ದವಸ-ಧಾನ್ಯಗಳನ್ನು ಒದಗಿಸಿದಲ್ಲಿ ಸ್ವೀಕರಿಸಲಾಗುವುದು. ಮಂಡ್ಯ ಜಿಲ್ಲೆಯ ಜನತೆ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡು ಕಾವೇರಿ ಕೃಪೆಗೆ ಪಾತ್ರರಾಗಬೇಕು ಎಂದು ವ್ಯವಸ್ಥಾಪನಾ ಸಮಿತಿ ಕೋರಿದೆ.

ಕೊಡಗು ಏಕೀಕರಣ ರಂಗ, ಚೆಟ್ಟಿಯಾರ್ ಕುಟುಂದವರು ಹಲವಾರು ವರ್ಷಗಳಿಂದ ಅನ್ನಸಂತರ್ಪಣಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದರು. ಕಾವೇರಿಯ ನೀರಿನ ಉಪಯೋಗ ಪಡೆಯುವ ನಾವೂ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಜಿಲ್ಲೆಯ ವತಿಯಿಂದ ಅನ್ನಸಂತರ್ಪಣಾ ಕಾರ್ಯ ನಡೆಸಿಕೊಂಡು ಬರಲಾಗುತ್ತಿತ್ತು. ಜಿಲ್ಲೆಯ ತಿಂಡಿಗಳಾದ ಸಿಹಿ ಪೊಂಗಲು, ಖಾರಾ ಪೊಂಗಲು, ಬಿಸಿಬೇಳೆ ಬಾತು, ಪುಳಿಯೋಗರೆ, ವೆಜಿಟೆಬಲ್ ಬಾತು, ವಾಂಗಿಬಾತು, ಮೊಸರನ್ನವನ್ನು ಭಕ್ತಾಧಿಗಳಿಗೆ ನೀಡಲಾಗುತ್ತಿತ್ತು.

ಅನ್ನಸಂತರ್ಪಣೆಗಾಗಿ ಹಾಕಲಾಗುತ್ತಿದ್ದ ತಾತ್ಕಾಲಿಕ ಟೆಂಟ್‌ಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ಕೊಡಗು ಜಿಲ್ಲಾಡಳಿತ ವ್ಯವಸ್ಥೆ ಮಾಡುತ್ತಿತ್ತು. ಈ ವ್ಯವಸ್ಥೆಗಳನ್ನು ಮಾಡುವುದು ಅನುಮಾನವಾಗಿರುವುದರಿಂದ ಈ ವರ್ಷ ಅನ್ನ ಸಂತರ್ಪಣಾ ಕಾರ್ಯಕ್ರಮವನ್ನು ಕೈಬಿಡಲಾಗಿದೆ. ತೀರ್ಥೊದ್ಭವ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಟ್ರಸ್ಟ್ ಅಧ್ಯಕ್ಷ ಎಂ.ಬಿ. ಶ್ರೀಕಾಂತ ಕೋರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT