ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ನೀತಿ ಸಹಕಾರಿ ಕ್ಷೇತ್ರಕ್ಕೆ ಮಾರಕ

Last Updated 3 ಅಕ್ಟೋಬರ್ 2011, 6:25 IST
ಅಕ್ಷರ ಗಾತ್ರ

ಹಾವೇರಿ: `ಕೇಂದ್ರ ಸರ್ಕಾರ ನೂತನ ವಾಗಿ ಜಾರಿಗೆ ತರುತ್ತಿರುವ ನೇರ ತೆರಿಗೆ ಪದ್ಧತಿಯು ಸೇವೆಯನ್ನೇ ಮುಖ್ಯಗುರಿ ಯಾಗಿಟ್ಟುಕೊಂಡು ಕಾರ್ಯ ನಿರ್ವಹಿ ಸುತ್ತಿರುವ ಸಹಕಾರಿ ಕ್ಷೇತ್ರಕ್ಕೆ ಮಾರಕ ವಾಗಿ ಪರಿಣಮಿಸಲಿದೆ~ ಎಂದು ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ಅಧ್ಯಕ್ಷ ರಾವ್‌ಸಾಹೇಬ ಪಾಟೀಲ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿವರೆಗೆ ಇದ್ದ ಆದಾಯ ತೆರಿಗೆಯ ಎಲ್ಲ ಕಾಯ್ದೆ ಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ವಿನಾಯ್ತಿ ನೀಡಲಾಗಿತ್ತು. ಆದರೆ, 2012 ರಲ್ಲಿ ಅನುಷ್ಠಾನಕ್ಕೆ ತರುತ್ತಿರುವ ತೆರಿಗೆ ಕಾಯ್ದೆಯಲ್ಲಿ ಸಹಕಾರಿ ಕ್ಷೇತ್ರ ಸೇರ್ಪಡೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಹಣಕಾಸಿನ ವ್ಯವಹಾರ ನಡೆಸುತ್ತಿರುವ ಎಲ್ಲ ಸಂಸ್ಥೆಗಳು ಸಂಘಗಳಾಗಿವೆ. ಆದರೆ, ರೂಢಿಯಲ್ಲಿ ಬ್ಯಾಂಕ್ ಎಂದು ಕರೆ ಯಲಾಗುತ್ತದೆ. ಅದೊಂದೆ ಕಾರಣಕ್ಕೆ ನೇರ ತೆರಿಗೆ ಪದ್ಧತಿಯಲ್ಲಿ ಸೇರಿಸುತ್ತಿ ರುವುದು ಅವೈಜ್ಞಾನಿಕವಾಗಿದೆ ಎಂದ ಅವರು, ಸಹಕಾರಿ ಸಂಸ್ಥೆಗಳನ್ನು ನೇರ ತೆರಿಗೆ ಪದ್ಧತಿಯಿಂದ ಹೊರಗಿಡದಿದ್ದರೆ, ಸರ್ಕಾರವೇ ಮುಂದೆ ನಿಂತು ವಾಮ ಮಾರ್ಗ ಅನುಸರಿಸುವಂತೆ ಮಾಡಿ ದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಈ ನೂತನ ತೆರಿಗೆ ಪದ್ಧತಿ ಕೇವಲ ಸಂಸ್ಥೆಗಳಿಗೆ ಅಷ್ಟೇ ಅಲ್ಲದೇ ಸಂಸ್ಥೆಯ ಸದಸ್ಯರನ್ನು ಸಹ ಆರ್ಥಿಕವಾಗಿ ದುರ್ಬಲರನ್ನಾಗಿ ಮಾಡಲಿದೆ. ಎಂದ ಅವರು, ನೇರ ತೆರಿಗೆ ಪದ್ಧತಿಯಿಂದ ಸಹಕಾರ ಕ್ಷೇತ್ರವನ್ನು ಕೈಬಿಡಬೇಕೆಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಸಮಾವೇಶ:
`ಸಹಕಾರ ಚಳುವಳಿ ಉಳಿವಿಗಾಗಿ ನೇರ ತೆರಿಗೆ ಪದ್ಧತಿ ಕೈಬಿಡಿ~ ಎನ್ನುವ ಘೋಷಣೆ ಯೊಂದಿಗೆ ಇದೇ ತಿಂಗಳು ಕೊನೆವಾರ ದಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ.

ರಾಜ್ಯದಲ್ಲಿರುವ ಐದು ಸಾವಿರ ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಕೇಂದ್ರ ಕೃಷಿ ಸಚಿವ ಶರದ್ ಪವಾರ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸದಾನಂದಗೌಡ, ಸಹಕಾರ ಸಚಿವ ಲಕ್ಷ್ಮಣ ಸವದಿ,  ರಾಜ್ಯ ಮಟ್ಟದ ತೆರಿಗೆ ಇಲಾಖೆ ಅಧಿ ಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹೊಸ ತೆರಿಗೆ ನೀತಿ ಜಾರಿಗೊಳ್ಳುವ ಮುನ್ನವೇ ಸಹಕಾರಿ ಸಂಸ್ಥೆಗಳಿಗೆ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ಪಾವತಿ ಸುವಂತೆ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗುರುನಾಥ ಜಾಂಪಿಕರ, ಧಾರವಾಡ ಹಾಲು ಒಕ್ಕೂ ಟದ ಅಧ್ಯಕ್ಷ ಬಸವರಾಜ ಅರಬ ಗೊಂಡ, ಸಹಕಾರಿ ಕ್ಷೇತ್ರದ ಮುಖಂಡ ರಾದ ಕೆ.ಎನ್.ಪಾಟೀಲ, ಎಂ.ಪಿ. ಕಲಾಲ, ನಾಗೇಂದ್ರ ಕಟಕೋಳ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT