ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಗದ್ದಲ:ನಡೆಯದ ಕಲಾಪ.

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಎಂಟನೇ ದಿನವಾದ ಸೋಮವಾರವೂ ತೆಲಂಗಾಣ ವಿವಾದದ ವಿಷಯದಿಂದಾಗಿ ಆಂಧ್ರ ಪ್ರದೇಶ ವಿಧಾನಸಭೆಯನ್ನು  ಕಲಾಪ ನಡೆಸದೇ ಮುಂದೂಡಲಾಯಿತು.
ಎರಡು ಬಾರಿ ಮುಂದೂಡಿದ್ದರೂ ವಿಧಾನಸಭೆಯಲ್ಲಿ ಶಿಸ್ತು ಉಂಟಾಗದ್ದರಿಂದ ಅನಿವಾರ್ಯವಾಗಿ ಉಪಸಭಾಧ್ಯಕ್ಷ ನಾದೆಂಡ್ಲ ಮನೋಹರ್ ಸಭೆಯನ್ನು ಮುಂದೂಡಿದರು.

ಈ ಪ್ರಾಂತ್ಯದ ತೆಲಗು ದೇಶಂ ಶಾಸಕರು ವಿಧಾನಸಭಾಧ್ಯಕ್ಷರ ಮುಂಭಾಗದ ಬಾವಿಗೆ ನುಗ್ಗಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಮಸೂದೆಯನ್ನು ತಕ್ಷಣ ಮಂಡಿಸುವಂತೆ ಆಗ್ರಹಿಸಿದಾಗ ಕೋಲಾಹಲ ಉಂಟಾಯಿತು. ಕಾಂಗ್ರೆಸ್  (ತೆಲಂಗಾಣಕ್ಕೆ ಸೇರಿದ ) ಶಾಸಕರೂ  ಇವರೊಂದಿಗೆ ಸೇರಿ  ಘೋಷಣೆಗಳನ್ನು ಕೂಗಿದರು. ಸಿಪಿಐ ಶಾಸಕರೂ ಸಹಿತ ಇದರ ಬಗ್ಗೆ ಧ್ವನಿ ಎತ್ತಿದ್ದು ಕಲಾಪಕ್ಕೆ ಅಡ್ಡಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT