ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜ್‌ಪಾಲ್‌ ಪುರುಷತ್ವ ಪರೀಕ್ಷೆ

Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಪಣಜಿ (ಪಿಟಿಐ): ಸಹೋದ್ಯೋಗಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ‘ತೆಹೆಲ್ಕಾ’ ಪತ್ರಿಕೆಯ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್‌ ಅವರನ್ನು ಸೋಮವಾರ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ಅವರು ದೃಢತ್ವ ಹೊಂದಿದ್ದಾರೆ ಎಂಬ ಫಲಿತಾಂಶ ದೊರಕಿದೆ.
ಅತ್ಯಾಚಾರ ಪ್ರಕರಣದ ಆರೋಪಿಯನ್ನು ಪುರುಷತ್ವ ಪರೀಕ್ಷೆಗೆ ಒಳಡಿಸು ವುದು ಕಡ್ಡಾಯವಾದ ಕಾರಣ 50 ವರ್ಷ ವಯಸ್ಸಿನ ತೇಜ್‌ಪಾಲ್‌ ಅವ ರನ್ನು ಗೋವಾ ವೈದ್ಯಕೀಯ ಕಾಲೇಜಿ ನಲ್ಲಿ ಈ ಪರೀಕ್ಷೆಗೆ ಗುರಿಪಡಿಸ ಲಾಯಿತು. ಕಾಲೇಜಿನ ವಿಧಿವಿಜ್ಞಾನ ವಿಭಾಗ ದಲ್ಲಿ ರಕ್ತ ಪರೀಕ್ಷೆ ಸೇರಿದಂತೆ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಲಾಯಿತು.

ಸೋಮವಾರ ಬೆಳಿಗ್ಗೆ ಐದು ತಾಸುಗಳ ಕಾಲ ಈ ಪರೀಕ್ಷೆಗೆ ಒಳಗಾದ ತೇಜ್‌ಪಾಲ್‌ ಅವರನ್ನು ಮತ್ತೆ ಮಧ್ಯಾಹ್ನ 3.15ರ ಹೊತ್ತಿಗೆ ಕೆಲವು ಪರೀಕ್ಷೆಗೆ ಒಳಪಡಿಸಲಾಯಿತು. ತನಿಖಾಧಿಕಾರಿಗಳ ಕೋರಿಕೆಯಂತೆ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಲಾಯಿತು ಎಂದ ವೈದ್ಯಕೀಯ ಕಾಲೇಜಿನ ಡೀನ್‌ ವಿ.ಎನ್‌. ಜಿಂದಾಲ್‌, ಪರೀಕ್ಷೆಗಳ ಫಲಿತಾಂಶದ ವಿವರ ನೀಡಲು ನಿರಾಕರಿಸಿದರು. ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾದ ‘ಪಂಚತಾರಾ’ ಹೋಟೆಲ್‌ಗೆ ತೇಜ್‌ಪಾಲ್‌ ಅವರನ್ನು ಪೊಲೀಸರು ಕರೆದೊಯ್ದಿದ್ದರು. 

ಫ್ಯಾನ್‌ಗೆ ಕೋರಿಕೆ: ಈ ಮಧ್ಯೆ, ತಮ್ಮನ್ನು ಇರಿಸಿರುವ ಲಾಕ್‌ಅಪ್‌ನಲ್ಲಿ ಫ್ಯಾನ್‌ ಒದಗಿಸಿಕೊಡಬೇಕು ಎಂಬ ತೇಜ್‌ಪಾಲ್‌ ಅವರ ಕೋರಿಕೆಯ ಬಗ್ಗೆ ಸೋಮವಾರ ವಿಚಾರಣೆ ನಡೆಸಿದ ಜೆಎಂಎಫ್‌ಸಿ ನ್ಯಾಯಾಲಯವು ಡಿ.4 ವರೆಗೆ ಆದೇಶ ಕಾಯ್ದಿರಿಸಿದೆ.

ಕಳ್ಳ ಬೇಟೆಗಾರರೊಂದಿಗೆ ತೇಜ್‌ಪಾಲ್‌: ಸಹೋದ್ಯೋಗಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಹೊತ್ತು ಪೊಲೀಸರ ವಶ ದಲ್ಲಿರುವ  ‘ತೆಹೆಲ್ಕಾ’ ಸಂಪಾದಕ ತರುಣ್‌ ತೇಜ್‌ ಪಾಲ್‌ ಅವರು ಎರಡನೇ ದಿನ ರಾತ್ರಿ ನಾಲ್ವರು ಕಳ್ಳ ಬೇಟೆಗಾರರೊಂದಿಗೆ  ಲಾಕ್‌ ಅಪ್‌ ಅನ್ನು ಹಂಚಿಕೊಂಡರು.

ಮಧು ಕಿಶ್ವರ್‌ ವಿರುದ್ಧ ಕ್ರಮಕ್ಕೆ ಮನವಿ (ನವದೆಹಲಿ ವರದಿ):  ತರುಣ್‌ ತೇಜ್‌ಪಾಲ್‌ ವಿರುದ್ಧ  ಅತ್ಯಾಚಾರ ಎಸ ಗಿರುವ ದೂರು ನೀಡಿರುವ ಪತ್ರಕರ್ತೆ ಯ ಹೆಸರು ಬಹಿರಂಗ ಮಾಡಿರುವ ಸಾಮಾಜಿಕ ಕಾರ್ಯಕರ್ತೆ ಮಧು ಕಿಶ್ವರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಗೋವಾ ಪೊಲೀಸರಿಗೆ ಪತ್ರ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT