ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಟ್ಟವಾಡಿಗೆ 60

Last Updated 15 ಜೂನ್ 2011, 19:30 IST
ಅಕ್ಷರ ಗಾತ್ರ

ರಂಗನಿರಂತರ : ಶುಕ್ರವಾರ `ರಂಗ ಹಿತ ಚಿಂತಕ ತೊನಂ-60~. ರಂಗಕರ್ಮಿ ತೊಟ್ಟವಾಡಿ ನಂಜುಂಡಸ್ವಾಮಿ ಅವರಿಗೆ 60 ತುಂಬಿದ ಪ್ರಯುಕ್ತ ಅಭಿನಂದನಾ ಸಮಾರಂಭ. ಉಪಸ್ಥಿತಿ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.

ಅತಿಥಿಗಳು. ಡಾ.ಸಿ.ಎನ್. ಮಂಜುನಾಥ್, ಗುಡಿಹಳ್ಳಿ ನಾಗರಾಜ, ಕೇಶವರೆಡ್ಡಿ ಹಂದ್ರಾಳ, ಡಾ.ಡಿ.ಕೆ. ಚೌಟ. ನಂತರ ರಾಜಗುರು, ರಾಮಚಂದ್ರ ಹಡಪದ್ ಮತ್ತು ಸಿ.ಎನ್. ನರಸಿಂಹ ಮೂರ್ತಿ ಅವರಿಂದ ರಂಗಗೀತೆಗಳು.

ಬೆಂಗಳೂರಿನ ಹವ್ಯಾಸಿ ರಂಗ ಕಲಾವಿದರ ಹಿತಚಿಂತಕ, ರಂಗ ಸಂಘಟಕ, ನಾಟಕಕಾರರಾಗಿ, ಹಿರಿಯ ಹಾಗೂ ಕ್ರಿಯಾಶೀಲ ರಂಗಕರ್ಮಿಗಳನ್ನು ಪುರಸ್ಕರಿಸುತ್ತ ರಂಗಪರಿಚಾರಿಕೆಯನ್ನು ಕಾಯಕ ಮಾಡಿಕೊಂಡಿರುವ ತೊಟ್ಟವಾಡಿ ನಂಜುಂಡಸ್ವಾಮಿ ಅವರು ರಂಗವಲಯದಲ್ಲಿ ತೊನಂ ಎಂದೇ ಚಿರಪರಿಚಿತರು.

ಜನಿಸಿದ್ದು ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲ್ಲೂಕು ಬಳಿಯ ತೊಟ್ಟವಾಡಿ. ಬಡತನ ಹಿನ್ನೆಲೆಯಿಂದ ಬಂದರೂ ಹೃದಯ ಶ್ರೀಮಂತಿಕೆ ಅಪಾರ. ಯಾರಾದರೂ ರಂಗಭೂಮಿ ಕಲಾವಿದರು ಅನಾರೋಗ್ಯದಿಂದ ಬಳಲುತ್ತ್ದ್ದಿದಾರೆ ಎಂದು ಗೊತ್ತಾದರೆ ತೊನಂ ಅಲ್ಲಿ ಹಾಜರ್.

ತಾವೇ ಕಟ್ಟಿದ ರಂಗ ಚೇತನ ಸಂಸ್ಥೆಯ ಮೂಲಕ ರಂಗ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಳವರ್ಗದ ವಚನಕಾರರ ಬಗ್ಗೆ ನಾಟಕಗಳನ್ನು ಬರೆದಿದ್ದಾರೆ. ಅನೇಕ ಕಥೆಗಳನ್ನು ನಾಟಕವಾಗಿ ರೂಪಾಂತರಿಸಿದ್ದಾರೆ. ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT