ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ಕೊಲೆ: ನಾಲ್ವರಿಗೆ ಮರಣದಂಡನೆ ಶಿಕ್ಷೆ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೊಂದೆಡಗಿ ಗ್ರಾಮದಲ್ಲಿ ನಡೆದ ತ್ರಿವಳಿ ಕೊಲೆ ಹಾಗೂ ದರೋಡೆ ಪ್ರಕರಣದ ನಾಲ್ವರಿಗೆ ಇಲ್ಲಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮರಣದಂಡನೆವಿಧಿಸಿದೆ. 

 ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ಬಸವರಾಜ ಪಲ್ಲೆಪ್ಪ ಚಿಗರಿಕಾರ (48), ಪಲ್ಲಾ ಶಂಕ್ರೆಪ್ಪ ಚಿಗರಿಕಾರ (25), ಯಂಕಪ್ಪ ಹುಲ್ಲೆಪ್ಪ ಚಿಗರಿಕಾರ (53), ರಮೇಶ (22) ಅವರಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಅವರು ಮರಣದಂಡನೆ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.

ಪ್ರಕರಣದ ವಿವರ: ಸೈದಾಪುರ ಠಾಣೆ ವ್ಯಾಪ್ತಿಯ ಬಸವರಾಜಪ್ಪ ಗೌಡರ ಹೊಲದಲ್ಲಿ ಕೂಲಿ ಕೆಲಸಕ್ಕಾಗಿ ಬಂದಿದ್ದ ಆಂಧ್ರಪ್ರದೇಶ ಮೂಲದ ಸೂರ್ಯಕಾಂತಮ್ಮ ಹಾಗೂ ಇಬ್ಬರು ಮಕ್ಕಳಾದ ಶ್ರೀನಿವಾಸ (22) ಶಿವರಡ್ಡಿ (25) ಶೆಡ್‌ನಲ್ಲಿ ವಾಸವಾಗಿದ್ದರು. 2009 ಫೆಬ್ರುವರಿ 14ರಂದು ರಾತ್ರಿ ಶೆಡ್ ಮುಂದೆ ಮಲಗಿದ್ದ ಬಸವನಗೌಡ ಎಂಬುವವರನ್ನು ನಾಲ್ಕೂ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಲೆಗೈದರು.

ನಂತರ ಶೆಡ್‌ನಲ್ಲಿ ಮಲಗಿದ್ದ ಸೂರ್ಯಕಾಂತಮ್ಮನ ಎದುರಿನಲ್ಲಿಯೇ ಶ್ರೀನಿವಾಸ, ಶಿವರಡ್ಡಿಯನ್ನು ಇರಿದು ಹತ್ಯೆ ಮಾಡಿದ್ದರು. ಸೂರ್ಯಕಾಂತಮ್ಮನ ಕಿವಿಯೋಲೆ ಓಲೆ, ದುಡ್ಡು ಕಸಿದಿದ್ದರು. ಕೊಲೆಯಾದ ಮಕ್ಕಳ ದೇಹಗಳನ್ನು ಹತ್ತಿ ಗಾದಿಯ ಬಟ್ಟೆಯಲ್ಲಿ ಸುತ್ತಿ ತಾಯಿಯ ಸಮ್ಮುಖದಲ್ಲೇ ಸುಟ್ಟು ಹಾಕಿದ್ದರು.

ಪಕ್ಕದ  ಹೊಲದಲ್ಲಿದ್ದ ಶ್ರೀನಿವಾಸ, ಗಲಾಟೆಯ ಶಬ್ದ ಕೇಳಿ ಸ್ಥಳಕ್ಕೆ ಬಂದು ನೋಡಿ ನಂತರ ಸೈದಾಪುರ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಸರ್ಕಲ್ ಇನ್‌ಸ್ಪೆಕ್ಟರ್ ಎನ್. ಲೋಕೇಶ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಆರ್.ನಾಡಗೌಡರ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT