ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಪಟಾಕಿ ಒಮ್ಮೆ ಆಲೋಚಿಸಿ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪಟಾಕಿ ಹೊತ್ತಿಸುವ ಮುನ್ನ ಒಮ್ಮೆ ಆಲೋಚಿಸಿ. ಶೇ 40 ರಿಂದ 60 ರಷ್ಟು ಪ್ರಕರಣಗಳಲ್ಲಿ ಪಟಾಕಿ ನೋಡುತ್ತಿರುವವರು ಮತ್ತು ಸುಮ್ಮನೆ ನಿಂತಿರುವವರು ಗಾಯಗೊಳ್ಳುತ್ತಾರೆ. ಶೇ 30ರಷ್ಟು ಪ್ರಕರಣಗಳಲ್ಲಿ ಎರಡೂ ಕಣ್ಣುಗಳು ಗಾಯಗೊಳ್ಳುತ್ತವೆ. 5 ರಿಂದ 12 ವರ್ಷಗಳ ಹುಡುಗರು ಗಾಯಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಬಾಂಬ್ ಮತ್ತು ರಾಕೆಟ್‌ಗಳು ಶೇ 60ರಷ್ಟು ಗಾಯಗಳಿಗೆ ಕಾರಣವಾಗುತ್ತವೆ. ಪಟಾಕಿಯಿಂದ ಉಂಟಾಗುವ ಪರಿಸರ ಮಾಲಿನ್ಯ ಆಸ್ತಮಾ ಇರುವವರಿಗೆ ತೊಂದರೆ ಉಂಟು ಮಾಡುತ್ತದೆ.

ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಬೆಳಕಿನ ಹಬ್ಬ ಕತ್ತಲನ್ನು ತರುತ್ತದೆ. ಆದ್ದರಿಂದ ಅನಾಹುತಕ್ಕೆ ಈಡಾಗಿ ಚಿಕಿತ್ಸೆ ಪಡೆಯುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದೇ ಉತ್ತಮ.
ಗಾಯಗೊಂಡ ಸಂದರ್ಭದಲ್ಲಿ

* ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ

* ನಿಮ್ಮ ಕಣ್ಣ ರೆಪ್ಪೆಗಳನ್ನು ತೆರೆದು ಗಾಯವಾಗಿದೆಯೇ ಎಂದು ನೋಡಿ.

* ಗಾಯವಾಗಿದ್ದರೆ ಕಣ್ಣಿಗೆ ಏನನ್ನೂ ಹಾಕದೆ ಹತ್ತಿರದ ತಜ್ಞವೈದ್ಯರಲ್ಲಿ ಕರೆತನ್ನಿರಿ.
* ಕಣ್ಣಿನ ಒಳಗಡೆ ಗಾಯವಿಲ್ಲದಿದ್ದರೆ ಸುಟ್ಟ ಜಾಗಕ್ಕೆ ತಣ್ಣನೆಯ ನೀರನ್ನು ಹಾಕಿ ಮತ್ತು ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಕೆಲವು ಅಂಕಿ ಅಂಶಗಳು

* ಶೇ 40ರಷ್ಟು ಪಟಾಕಿ ಸಂಬಂಧಿತ ಗಾಯಗಳು ನೋಡುತ್ತಿರುವವರಿಗೇ ಆಗುತ್ತವೆ.

* ಪಟಾಕಿ ಗಾಯಗಳು ಪ್ರತಿ ಐದರಲ್ಲಿ ನಾಲ್ಕು ಗಂಡಸರಿಗೇ ಆಗುತ್ತವೆ.

* 22-44 ವಯಸ್ಸಿನ ಪುರುಷರು ಮತ್ತು 12 ರಿಂದ 14 ವಯಸ್ಸಿನ ಮಕ್ಕಳು ಹೆಚ್ಚಾಗಿ ಪಟಾಕಿಯ ಹಾನಿಗೆ ಒಳಗಾಗುತ್ತಾರೆ.

* ಬಾಟಲಿಯಿಂದ ಹಾರಿಸುವ ಪಟಾಕಿಗಳು ಗಂಟೆಗೆ 200 ಮೈಲಿ ವೇಗದಲ್ಲಿ ಸಂಚರಿಸುತ್ತವೆ ಮತ್ತು ಮಾರ್ಗಮಧ್ಯೆ ಸಿಡಿಯುತ್ತವೆ. ಯಾವುದೇ ದಿಕ್ಕಿಗೂ ಸಂಚರಿಸುತ್ತವೆ. ಆದ್ದರಿಂದ ಅತ್ಯಂತ ಅಪಾಯಕಾರಿ.

* ಸುರುಸುರು ಬತ್ತಿಗಳು ಗಾಯ ಉಂಟು ಮಾಡುವ ಪ್ರಮುಖ ಕಾರಣ. ಹೂಬತ್ತಿಗಳು ಅತ್ಯಂತ ಹೆಚ್ಚು ಉಷ್ಣತೆಯಲ್ಲಿ ಉರಿಯುತ್ತವೆ. ಈ ಉಷ್ಣತೆ (1,800 ಫ್ಯಾರನ್‌ಹೀಟ್) ಚಿನ್ನವನ್ನು ಕರಗಿಸುತ್ತದೆ. ಬಹಳಷ್ಟು ಪಟಾಕಿಗಳಲ್ಲಿ ಗನ್‌ಪೌಡರ್ ಇರುತ್ತದೆ. ಇದು ಅನಿರೀಕ್ಷಿತ ಸ್ಫೋಟಕ್ಕೆ ಕಾರಣವಾಗುತ್ತದೆ. ಅತ್ಯಂತ ಎಚ್ಚರಿಕೆಯಿಂದ ಪಟಾಕಿ ಹಚ್ಚುತ್ತಿದ್ದರೂ ಗಾಯಗಳು ಆಗಬಹುದು.

* ಬಾಟಲಿ ಮೂಲಕ ಸಿಡಿಸುವ ರಾಕೆಟ್ ಪಟಾಕಿ ಅತ್ಯಂತ ಹೆಚ್ಚು ಅಪಾಯಕಾರಿ. ಎಲ್ಲ ಪಟಾಕಿಗಳಿಗೆ ಹೋಲಿಸಿದರೆ ಇವುಗಳಿಂದ ಉಂಟಾಗುವ ಹಾನಿ ಬಹಳ ದೊಡ್ಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT