ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಳ ಅಭಿವೃದ್ಧಿಗೆ 400 ಕೋಟಿ ವೆಚ್ಚ

Last Updated 13 ಫೆಬ್ರುವರಿ 2012, 8:10 IST
ಅಕ್ಷರ ಗಾತ್ರ

ಬಂಟ್ವಾಳ: ಕಳೆದ ನಾಲ್ಕು ವರ್ಷದಲ್ಲಿ 5 ಸಾವಿರಕ್ಕೂ ಅಧಿಕ ದೇವಾಲಯಗಳು  ಅಭಿವೃದ್ಧಿಗೊಂಡಿದ್ದು, ದೇವಳ ಅಭಿವೃದ್ಧಿಗಾಗಿ ಈಗಾಗಲೇ ರೂ. 400 ಕೋಟಿ  ಅನುದಾನ ವಿನಿಯೋಗಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದರು.

ತಾಲ್ಲೂಕಿನ ಬಡಗಕಜೆಕಾರು ಗ್ರಾಮದ ಪ್ರಸಿದ್ಧ ಮಡವು ಶ್ರೀ ಬಾಲಸುಬ್ರಹ್ಮಣ್ಯ ದೇವಳದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಾತನಾಡಿ, ಸತ್ಕರ್ಮಗಳ ಮೂಲಕ ದೇವರ ಸಾಮೀಪ್ಯ ಪಡೆಯಲು ಸಾಧ್ಯ ಎಂಬುದನ್ನು ಅರಿತ ವಿದೇಶೀಯರೂ ಕೂಡಾ ಇಲ್ಲಿನ ಧ್ಯಾನ, ಯೋಗ ಮತ್ತಿತರ ಸಾತ್ವಿಕ ವಿಚಾರಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಬಿ.ರಮಾನಾಥ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಉದ್ಯಮಿ ಸುರೇಶ್ ಎಸ್.ಪೂಜಾರಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಕೇಮದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯ ಎಂ.ತುಂಗಪ್ಪ ಬಂಗೇರ, ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಮತ್ತಿತರರು ಇದ್ದರು. ಇದೇ ವೇಳೆ `ಸ್ಕಂದ~ ಸ್ಮರಣ ಸಂಚಿಕೆಯನ್ನು ಡಾ.ಹೆಗ್ಗಡೆ ಬಿಡುಗಡೆ ಮಾಡಿದರು. ಕಾರಿಂಜ ಕ್ಷೇತ್ರದ ಮಾಜಿ ಆಡಳಿತ ಧರ್ಮದರ್ಶಿ ಪಿ.ಜಿನರಾಜ ಅರಿಗ, ಶಿವಣ್ಣ ಶೆಟ್ಟಿ ಲಿಂಗಮಾರುಗುತ್ತು, ಲತಾ ತಾಳಿತ್ತಾಯ, ರವೀಂದ್ರ ಬಾಳಿಗ, ಪುಷ್ಪರಾಜ ಹೆಗ್ಡೆ ನವುಂಡ, ಆಡಳಿತ ಮೊಕ್ತೇಸರ ಮೋನಪ್ಪ ಪೂಜಾರಿ ಕಡೆಂತ್ಯಾರು, ಸಮಿತಿ ಅಧ್ಯಕ್ಷ ಎ.ಮೋನಪ್ಪ ಪೂಜಾರಿ ಐಂಬಲೋಡಿ, ಪ್ರಮುಖರಾದ ಕೆ.ಹರಿಶ್ಚಂದ್ರ ಪೂಜಾರಿ, ಕೆ.ಎ.ಸತೀಶ್ಚಂದ್ರ, ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್, ಡಾ.ದುಗ್ಗಪ್ಪ ಕಜೆಕಾರ್, ರೋಹಿನಾಥ್ ಪಾದೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT