ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಆಹಾರ ಪದ್ಧತಿ ಆರೋಗ್ಯಕ್ಕೆ ಪೂರಕ

Last Updated 20 ಅಕ್ಟೋಬರ್ 2012, 19:20 IST
ಅಕ್ಷರ ಗಾತ್ರ

ಬೆಂಗಳೂರು:   `ದೇಶಿಯ ಆಹಾರ ಪದ್ದತಿಯು ಆರೋಗ್ಯ ಪಾಲನೆಗೆ ಸಹಕಾರಿಯಾಗಿದೆ~ ಎಂದು ಆಯುರ್ವೇದ ತಜ್ಞ ಡಾ.ಪಿ.ಸತ್ಯನಾರಾಯಣ ತಿಳಿಸಿದರು.

ಮಿಥಿಕ್ ಸೊಸೈಟಿಯು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಧರ್ಮ ಸೇವಾ ಧುರೀಣ ಕೆ.ಟಿ.ಅಪ್ಪಣ್ಣ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಹಾರ ಪದ್ಧತಿಗಳು ಮತ್ತು ಆರೋಗ್ಯ ಪಾಲನೆ ಕುರಿತು ಮಾತನಾಡಿದ ಅವರು, `ಪ್ರಾಚೀನ ಕಾಲದಿಂದಲೂ ದೇಶಿಯ ಮೂಲಿಕೆಗಳನ್ನು ಆಹಾರ ಪದ್ದತಿಯಲ್ಲಿ ಬಳಸುವ ಕ್ರಮ ಜಾರಿಯಲ್ಲಿದೆ. ಇದರಿಂದ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು~ ಎಂದರು.

`ಬೆಳ್ಳುಳ್ಳಿಯ ರಸದಿಂದ ಕಿವಿಗೆ ಬಿಟ್ಟುಕೊಂಡಾಗ ಕಿವಿ ನೋವು ವಾಸಿಯಾಗುವುದು. ದಾಸವಾಳವನ್ನು ತಲೆಗೆ ಹಾಕಿದಾಗ ತಂಪಾಗುವುದು. ಮೆಂತ್ಯ, ಜೀರಿಗೆ, ಕಾಳು ಮೆಣಸನ್ನು ರಸ ಮಾಡಿ ಅದನ್ನು ಬಳಸುವುದರಿಂದ ವಾತ ಸಂಬಂಧಿ ರೋಗಗಳು ಕಡಿಮೆಯಾಗುವುದು. ಇಂತಹ ಚಿಕಿತ್ಸೆಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದು~ ಎಂದರು. ಕಾರ್ಯಕ್ರಮದಲ್ಲಿ ದಿ.ಮಿಥಿಕ್ ಸೊಸೈಟಿ ಅಧ್ಯಕ್ಷ ಡಾ.ಎಂ.ಕೆ.ಎಲ್.ಎನ್. ಶಾಸ್ತ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT