ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದ ಏರುಪೇರುಗಳ ಪತ್ತೆಗೆ ಹೊಸ ಸಾಧನ

Last Updated 17 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ

ದೇಹದ ಏರುಪೇರುಗಳ ಪತ್ತೆಗೆ ಹೊಸ ಸಾಧನ
ಲಂಡನ್ (ಪಿಟಿಐ):
ಮನುಷ್ಯನ ಶರೀರದಲ್ಲಾಗಿರುವ ಏರುಪೇರುಗಳೇನು ಮತ್ತು ಕಾಡುತ್ತಿರುವ ಬಾಧೆಗಳೇನು ಎಂಬುದನ್ನು ಕರಾರುವಕ್ಕಾಗಿ ಕೇವಲ 30 ಸೆಕೆಂಡುಗಳಲ್ಲಿ ಪತ್ತೆಹಚ್ಚುವಂತಹ ಸ್ಕ್ಯಾನರ್ ಒಂದನ್ನು ಜರ್ಮನ್ ವಿಜ್ಞಾನಿಗಳು ಇದೀಗ ಅಭಿವೃದ್ಧಿಪಡಿಸಿದ್ದಾರೆ.

ಈ ಯಂತ್ರವನ್ನು ಬರ್ಲಿನ್‌ನ ಚಾರೈಟ್ ವೈದ್ಯಕೀಯ ಶಾಲೆಯ ವಿಜ್ಞಾನಿಗಳ ತಂಡವು ಅಭಿವೃದ್ಧಿಪಡಿಸಿದೆ ಎಂದು  ಡೈಲಿ ಮೇಲ್ ವರದಿ ಮಾಡಿದೆ.

ಮಾನವ ಶರೀರವು ಧೂಮಪಾನದಿಂದ, ಅಮಲಿನಿಂದ ಅಥವಾ ಕಡಿಮೆ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಿ ತೊಂದರೆಗೊಳಗಾಗಿದ್ದರೆ ಹಾಗೂ ರಸಾಯನಿಕ ಏರುಪೇರುಗಳಿಂದ ಕಿರಿಕಿರಿ ಅನುಭವಿಸುತ್ತಿದ್ದರೆ ಅದನ್ನು ಈ ಯಂತ್ರವು ಕೂಡಲೇ ಪತ್ತೆಹಚ್ಚುತ್ತದೆ.

ಕೈಯಲ್ಲಿಯೇ ಹಿಡಿದುಕೊಳ್ಳಬಹುದಾದ ರೀತಿಯಲ್ಲಿರುವ ಇದು ಕಂಪ್ಯೂಟರ್‌ನ ಮೌಸ್ ತರಹದ ಪುಟ್ಟ ಸಾಧನವಾಗಿದೆ. ಈ ಸ್ಕ್ಯಾನರ್ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು ಇದರ ಬೆಲೆ 175 ಪೌಂಡುಗಳಷ್ಟಿರಲಿದೆ ಎಂದು ವಿಜ್ಞಾನಿಗಳು ಹೇಳಿರುವುದಾಗಿ ಡೈಲಿ ಮೇಲ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT