ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದಾರ್ಢ್ಯ: ಮನೋಜ್ ಕರ್ನಾಟಕ ಕುಮಾರ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮನೋಜ್ ಕುಮಾರ್ ಕರ್ನಾಟಕ ಅಮೆಚೂರ್ ದೇಹದಾರ್ಢ್ಯ ಸಂಸ್ಥೆ ಆಶ್ರಯದಲ್ಲಿ ನಡೆದ 59ನೇ ರಾಜ್ಯ ಅಮೆಚೂರ್ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನ ಸೂಪರ್ ಟಾಲ್ ವಿಭಾಗದಲ್ಲಿ `ಕರ್ನಾಟಕ ಕುಮಾರ~ ಗೌರವ ಪಡೆದರು.

ಫೆಬ್ರುವರಿ 11 ಹಾಗೂ 12ರಂದು ಉದ್ಯಾನಗರಿಯಲ್ಲಿ ಈ ಸ್ಪರ್ಧೆಗಳು ನಡೆದವು. ಮನೋಜ್‌ಗೆ 50,000 ರೂಪಾಯಿ ಬಹುಮಾನ ಸಹ ಲಭಿಸಿತು. ಇದರ ಜೊತೆಗೆ `ಕರ್ನಾಟಕ ಶ್ರೇಷ್ಠ~ ಪ್ರಶಸ್ತಿಯನ್ನೂ ಗೆದ್ದುಕೊಂಡರು. ಸತತ ಎರಡನೇ ಸಲ ಈ ಗೌರವ ಮನೋಜ್ ಪಾಲಾಯಿತು.

ರಾಕ್ಸ್ ಮಲ್ಟಿ ಜಿಮ್‌ನ ಜಿ. ಬಾಲಕೃಷ್ಣ `ಕರ್ನಾಟಕ ಕಿಶೋರ~ ಪಟ್ಟವನ್ನು ತಮ್ಮದಾಗಿಸಿಕೊಂಡರು. ಇರಾನ್ ವರ್ಲ್ಡ್‌ನ ಬಿ. ಶ್ರೀನಿವಾಸ `ಕರ್ನಾಟಕ ಕೇಸರಿ~ ಹಾಗೂ ಇಂಪ್ಯಾಕ್ಟ್ ಫಿಟ್‌ನೆಸ್ ಕೇಂದ್ರದ ಹೇಮಂತ್ ಕುಮಾರ್ `ಕರ್ನಾಟಕ ಶ್ರೀ~ ಪ್ರಶಸ್ತಿ ಜಯಿಸಿದರು.

ಫಲಿತಾಂಶ ಇಂತಿವೆ:
 ಕರ್ನಾಟಕ ಶ್ರೀ: ಶಾರ್ಟ್ ವಿಭಾಗ: ಕೆ.ಜಿ. ಸೋಮಶೇಖರ್ (ಮೆಗಾ ಮ್ಯೂಸಿಕಲ್)-1, ಸಿ.ಬಿ. ಮಲಿಕ್ (ರಾಕ್ಸ್ ಮಲ್ಟಿ)-2, ಆಜಾದ್ ಪಾಶಾ (ಅಪೂರ್ವ ಫಿಟ್‌ನೆಸ್)-3. ಮಿಡಿಯಮ್: ಹೇಮಂತ್ ಕುಮಾರ್ (ಇಂಪ್ಯಾಕ್ಟ್ ಫಿಟ್‌ನೆಸ್)-1, ಮುಜಾಹಿದ್ (ಆರ್‌ಬಿಎಂ ಜಿಮ್)-2, ಫಯಾಜ್‌ಖಾನ್ (ಗೋಲ್ಡನ್)-3. ಟಾಲ್: ಸರವಣ್ (ಕೆ. ಫಿಟ್‌ನೆಸ್)-1, ಶೋಧನ್ ರೈ (ಫಿಟ್‌ನೆಸ್ ವರ್ಲ್ಡ್)-2, ಪ್ರಕಾಶ್‌ರಾಜ್ (ಆಸ್ಕರ್ ಜಿಮ್)-3. ಸೂಪರ್ ಟಾಲ್: ಶಂಕರ್ (ಹರ್ಕ್ಯುಲೆಸ್ ಮಲ್ಟಿ ಜಿಮ್)-1, ಆರ್. ನಾಗರಾಜ್ (ಕೆಪಿಟಿಸಿಎಲ್)-2, ಪ್ರೇಮ್‌ಕುಮಾರ್ (ರಾಬಸ್ಟ್ ಮಸ್‌ಲ್)-3.

ಕರ್ನಾಟಕ ಕುಮಾರ: ಶಾರ್ಟ್: ಖಾದರ್ (ಎಂಬಿಎಬಿಬಿ)-1, ಕನಕರಾಜು (ಬಾಡಿ ಟೋನಿ)-2. ಮಿಡಿಯಮ್: ರಾಘವೇಂದ್ರ ಶೆಟ್ಟಿ (ಮ್ಯೂಸಿಕಲ್ ಪ್ಲಾ)-1, ನಜೀಮ್ (ರಾಂಬೊ ಜಿಮ್)-2, ಎಂ. ಮಧು (ವಿಜೋರ್ ಫಿಟ್‌ನೆಸ್)-3. ಟಾಲ್: ಪಿ. ಮುರಳಿ (ರಾಕ್ಸ್ ಮಲ್ಟಿ)-1, ಶ್ಯಾಮ್‌ಸುಂದರ್ (ಬಿಎಂಜೆ ಫಿಟ್‌ನೆಸ್)-2, ಎಂ. ಮುರಳಿ (ಯುನಿವರ್ಸೆಲ್ ಜಿಮ್)-3. ಸೂಪರ್ ಟಾಲ್: ಮನೋಜ್ ಕುಮಾರ್ (ಹೆಡ್ಸ್ ಜಿಮ್)-1, ಅಲ್ವನ್ ಪಾಲ್ (ಮಂಗಳೂರು)-2, ಸೈಯದ್ ಸಿದ್ಧಕಿ (ಹಲ್ಕ್ ಫಿಟ್‌ನೆಸ್)-3.

ಕರ್ನಾಟಕ ಕಿಶೋರ: ಶಾರ್ಟ್: ಸಂಜಯ್ (ಶಶಾಂಕ್ ಜಿಮ್)-1, ಪ್ರವೀಣ್ (ಮಸ್‌ಲ್ ಪ್ಲಾನೆಟ್)-2, ಎಸ್. ಚಂದ್ರಕಾಂತ್ (ಮಾಡರ್ನ್)-3. ಮಿಡಿಯಮ್: ದಯಾನಂದ (ಫಿಟ್‌ನೆಸ್ ವರ್ಲ್ಡ್)-1, ಉಮೇಶ್ (ಫಿಟ್‌ನೆಸ್ ಇನ್)-2, ರೇಣುಕಾ ಪ್ರಸಾದ್ (ಅರ್ನಾಲ್ಡ್ ಜಿಮ್)-3. ಟಾಲ್: ಧನಂಜಯ (ಪಂಪಿಂಗ್ ಐರನ್)-1, ತನ್ವೀರ್ (ಮಸ್‌ಲ್ ಗ್ರೋ)-2, ಕಿರಣ್ ಕುಮಾರ್  (ಹೆಡ್ಸ್ ಜಿಮ್)-3. ಸೂಪರ್ ಟಾಲ್: ಜಿ. ಬಾಲಕೃಷ್ಣ (ರಾಕ್ಸ್ ಮಲ್ಟಿ ಜಿಮ್)-1, ಎ. ದೀಪಕ್ (ಇವೊಲ್ವೆ)-2, ರೆಹಮತುಲ್ಲಾ (ಗೋಲ್ಡನ್ ಜಿಮ್)-3.

ಕರ್ನಾಟಕ ಉದಯ: ಶಾರ್ಟ್: ಕಾರ್ತಿಕ್ (ಕ್ವೆಸ್ಟ್)-1, ಸುರೇಶ್ (ಮಸ್‌ಲ್ ಪ್ಲಾನೆಟ್)-2, ಜೀವನ್ ಶೆಟ್ಟಿ (ಸನ್‌ಫಿಟ್ ಜಿಮ್)-3. ಮಿಡಿಯಮ್: ನವೀನ್ ಕುಮಾರ್ (ರಾಂಬೊ ಜಿಮ್)-1, ಜಿಲಾನಿ (ಐರನ್ ಅಸಿಲಮ್)-2, ಎಚ್.ಕೆ. ಹೊನ್ನೂರಸ್ವಾಮಿ (ಬಾಡಿ ಕ್ರಾಫ್ಟ್)-3. ಟಾಲ್: ರಾಜಮುರುಗನ್ (ವೈಬಿಎಸ್ ಜಿಮ್)-1, ಜಯಪ್ರಕಾಶ್ (ಶಶಾಂಕ್ ಜಿಮ್)-2, ಅಲೀಮ್ (ಇವೋಲ್ವ್)-3. ಸೂಪರ್ ಟಾಲ್: ಲಿಟೋ ಜಾನ್ (ಕ್ಲಾಸಿಕ್ ಬಾಯ್ಸ) -1, ಟಿ. ಸಂತೋಷ (ಐರನ್ ಅಸಿಲಮ್)-2, ತನ್ವೀರ್-3.

ಕರ್ನಾಟಕ ಕೇಸರಿ: ಗುಂಪು-1: ಬಿ. ಶ್ರೀನಿವಾಸ (ಐರನ್ ವರ್ಲ್ಡ್)-1, ಟಿ.ಬಿ. ಮಂಜುನಾಥ (ಹರ್ಕ್ಯುಲೆಸ್)-2, ಪೊನ್ನಪ್ಪ (ಮ್ಯಾಕ್ಸ್ ಜಿಮ್)-3. ಗುಂಪು-2: ಶ್ರೀರಾಮಪ್ಪ (ಮ್ಯಾಕ್ಸ್ ಜಿಮ್)-1, ಡಿ. ಗೋಕರ್ಣ (ಮಾಚೊ ಮಲ್ಟಿ)-2, ವಿ.ಕೆ. ವಿಜಯ್ ಕುಮಾರ್ (ಸಾಗರ್ ಜಿಮ್)-3.

ಕರ್ನಾಟಕ ಶ್ರೀ ಇಂಡಸ್ಟ್ರೀಸ್: ಶಾರ್ಟ್: ಸೋಮಶೇಖರ (ಆರ್.ಡಿ. ಇಂಡಸ್ಟ್ರಿಯಲ್)-1, ಜೀವಬ್ ಶೆಟ್ಟಿ (ಐಬಿಎಂ)-2, ಯತೀಶ್ (ಹಾಸನ್ ಪ್ಲೇವುಡ್)-3. ಮಿಡಿಯಮ್: ದಯಾನಂದ (ಕ್ಲೈಮಾಕ್ಸ್)-1, ಎಂ. ಮಧು (ಶಂಕರ ಎಲೆಕ್ಟ್ರಿಕಲ್)-2, ಎ.ಎಂ. ಸಾಗರ್ (ಸಾಯಿ ಎಂಟರ್ ಪ್ರೈಸಸ್)-3. ಟಾಲ್: ರಾಜಾ ಮುರುಗನ್ (ಜನ್ ಇಂಡಸ್ಟ್ರಿಯಲ್)-1, ಶ್ಯಾಮಸುಂದರ್ (ಬಿಎಂಜೆ)-2, ತಾಂಡವೇಶ್ವರ (ಹಾಸನ್ ಪ್ಲೇವುಡ್)-3. ಸೂಪರ್ ಟಾಲ್: ಶಂಕರ್ (ವಿನಾಯಕ)-1, ಲಿಟೋ ಜಾನ್ (ಸುನಿಧಿ)-2, ಶೇಖರ್ (ಎಸ್‌ವಿಎಂ ಇಂಡಸ್ಟ್ರೀಸ್)-3.

ಕರ್ನಾಟಕ ನವಚೇತನ: ಬಿ.ಎನ್. ಶ್ರೀನಿವಾಸ (ರಿವೀವ್ ಫಿಟ್‌ನೆಸ್)-1, ರಾಘವೇಂದ್ರ (ಫಿಟ್‌ನೆಸ್ ಇನ್)-2, ಶಿವಾನಂದ ಎಸ್. ಗೌಡ (ಕೆಪಿಟಿಸಿಎಲ್)-3, ಮುತ್ತುರಾಜ್ (ಐರನ್ ಅಸಿಲಮ್)-4, ವಿ. ದಿವಾಕರ್ (ಕೆ.ಆರ್. ಪುರಂ)-5.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT