ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದೌರ್ಜನ್ಯ ತಡೆಗೆ ಕಠಿಣ ಕಾನೂನು ಅಗತ್ಯ'

Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

ನೆಲಮಂಗಲ: `ದೇಶದಾದ್ಯಂತ ಚತುಷ್ಪಥ ರಸ್ತೆ ನಿರ್ಮಾಣವಾಗಲು ಕಾರಣರಾದ ಹಾಗೂ ನದಿ ಜೋಡಣೆಯಂತಹ ಯೋಜನೆಯ ಕನಸುಕಂಡಿದ್ದ ವಾಜಪೇಯಿ ಅವರು ಪ್ರಧಾನಿಯಾಗಿ ಮುಂದುವರೆದಿದ್ದರೆ ದೇಶದ ಚಿತ್ರಣವೆ ಬದಲಾಗುತ್ತಿತ್ತು' ಎಂದು ಶಾಸಕ ಎಂ.ವಿ.ನಾಗರಾಜು ತಿಳಿಸಿದರು.

ಬಿಜೆಪಿಯ ನಗರ ಮಹಿಳಾ ಮೋರ್ಚಾ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ `ಜೀವನದಲ್ಲಿ ಜಾದೂ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ನಮ್ಮ ಪ್ರತಿನಿತ್ಯದ ಜೀವನದಲ್ಲಿ ಜಾದೂಗಳು ನಡೆಯುತ್ತಿರುತ್ತವೆ, ನಮ್ಮ ದೃಷ್ಟಿ ಬದಲಾದರೆ ಅವು ನಮಗೆ ತಿಳಿಯುತ್ತವೆ' ಎಂದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜಮ್ಮ ಪ್ರಕಾಶ್, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಒಂದಿಲ್ಲೊಂದು ದೌರ್ಜನ್ಯಗಳು ನಡೆಯುತ್ತಿವೆ.

ಅದನ್ನು ಮೆಟ್ಟಿ ನಿಲ್ಲಲು ಕಠಿಣ ಕಾನೂನು ಜಾರಿಯಾಗಬೇಕು. ಮಹಿಳೆಯರ ರಕ್ಷಣೆಗೆ ಇರುವ ಕಾನೂನನ್ನು ಮಹಿಳೆಯರು ದುರುಪಯೋಗಪಡಿಸಿಕೊಳ್ಳುವುದು ನಿಲ್ಲಬೇಕು ಎಂದರು.

ಜಾದೂಗಾರ ಕೌಶಿಕ್ ಅವರು ನಿತ್ಯ ಜೀವನದಲ್ಲಿ ನಡೆಯುವ ಜಾದೂಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಪಕ್ಷದ ತಾಲ್ಲೂಕು ಅಧ್ಯಕ್ಷ ಸುಬ್ಬರಾಮಯ್ಯ, ಜಿಲ್ಲಾ ಉಪಾಧ್ಯಕ್ಷೆ ಅನಿತಾ ರಾಮಣ್ಣ, ದಾಧಿಕಾರಿಗಳಾದ ಸೌಭಾಗ್ಯವತಿ, ತೇಜೋಲಕ್ಷ್ಮಮ್ಮ, ಹೊನ್ನಾದೇವಿ, ಮಾಲತಿ, ನೀಲಮ್ಮ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT