ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರ ಶಸ್ತ್ರಾಸ್ತ್ರ ಮೂಲ ಪತ್ತೆ: ವಿಸ್ತೃತ ತನಿಖೆಗೆ ಕ್ರಮ

Last Updated 28 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಕ್ಸಲರಿಗೆ ಸರಬರಾಜಾಗುತ್ತಿರುವ ಶಸ್ತ್ರಾಸ್ತ್ರಗಳು ಹಾಗೂ ಹಣದ ಮಾರ್ಗವನ್ನು ಪತ್ತೆ ಹಚ್ಚುವಲ್ಲಿ ವಿಸ್ತೃತ ತನಿಖೆ ನಡೆಸುವ ಗುರುತರ ಜವಾಬ್ದಾರಿಯನ್ನು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿದೆ.

ಈಗಾಗಲೇ ತೀವ್ರವಾಗಿ ಕಾಡುತ್ತಿರುವ ಹತ್ತು ರಾಜ್ಯಗಳನ್ನೂ ಮೀರಿ ನಕ್ಸಲ್ ಸಮಸ್ಯೆ ಪಂಜಾಬ್, ಈಶಾನ್ಯ ಪ್ರಾಂತ್ಯ ಹಾಗೂ ದಕ್ಷಿಣದ ಕೆಲವು ರಾಜ್ಯಗಳಿಗೂ ಹರಡುತ್ತಿರುವ ಬಗ್ಗೆ ಆಳವಾದ ತನಿಖೆ ನಡೆಸುವ ಸಲುವಾಗಿ ಎಲ್ಲಾ ರಾಜ್ಯಗಳೂ ತಮ್ಮಲ್ಲಿನ ನಕ್ಸಲ್ ಸಂಬಂಧಿ ಸೂಕ್ಷ್ಮ ಪ್ರಕರಣಗಳನ್ನು ಎನ್‌ಐಎಗೆ ವರ್ಗಾಯಿಸಲಿವೆ.
ಮುಂಬೈ ದಾಳಿಯ ಬಳಿಕ ಭಯೋತ್ಪಾದನಾ ಪ್ರಕರಣಗಳ ತನಿಖೆಗಾಗಿ ಎನ್‌ಐಎಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ.

ಮಣಿಪುರದ ನಿಷೇಧಿತ ಉಗ್ರಗಾಮಿ ಗುಂಪು ಮಾವೊವಾದಿಗಳೊಂದಿಗೆ ಸಂಪರ್ಕ ಹೊಂದಿರುವುದನ್ನು ಬಹಿರಂಗಪಡಿಸಲು ಎನ್‌ಐಎ ಕಳೆದ ವಾರ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿತ್ತು. ಜೊತೆಗೆ ಅಪಹರಣ, ವಸೂಲಿ  ಹಾಗೂ ಉದ್ದಿಮೆಗಳು ನೀಡುವ ಹಣವನ್ನು ಹೊರತುಪಡಿಸಿ ಇನ್ನುಳಿದ ಮಾರ್ಗಗಳನ್ನು ಪತ್ತೆಹಚ್ಚುವ ಸಲುವಾಗಿ ಹಲವು ಪ್ರಕರಣಗಳನ್ನು ಕಲೆಹಾಕಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಆದರೆ ಎಷ್ಟರಮಟ್ಟಿಗೆ ಹಣ ಸರಬರಾಜಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಈ ನಿಟ್ಟಿನಲ್ಲಿ ಯಾವುದೇ ಗಂಭೀರ ಪ್ರಯತ್ನ ನಡೆಯದೇ ಇರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರಗಳಿಗಾಗಲೀ ಅಥವಾ ಕೇಂದ್ರ ಸರ್ಕಾರಕ್ಕಾಗಲೀ ನಿಖರ ಅಂಕಿಅಂಶ ದೊರೆತಿಲ್ಲ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT