ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು/ ಫೆ. 3. ಗುರುವಾರ

Last Updated 2 ಫೆಬ್ರುವರಿ 2011, 19:45 IST
ಅಕ್ಷರ ಗಾತ್ರ

ಬಿಬಿಎಂಪಿ: ಸರ್ಕಾರಿ ಪ್ರೌಢಶಾಲೆಯ ಆವರಣ, ಟಿ.ದಾಸರಹಳ್ಳಿ, ಜಾಲಹಳ್ಳಿ ಅಯ್ಯಪ್ಪ ದೇವಸ್ಥಾನದ ಹತ್ತಿರ. ನೂತನವಾಗಿ ನಿರ್ಮಿಸಿರುವ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ. ಉದ್ಘಾಟನೆ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್.ಅಶೋಕ, ಸಂಸದ ಡಿ.ಬಿ.ಚಂದ್ರೇಗೌಡ, ಮೇಯರ್ ಎಸ್.ಕೆ.ನಟರಾಜ್, ಉಪಮೇಯರ್ ಎನ್.ದಯಾನಂದ್. ಬೆಳಿಗ್ಗೆ 10.30.

ಬೆಂಗಳೂರು ವಿಶ್ವವಿದ್ಯಾಲಯ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು. ಜಾಗತೀಕರಣ ಮತ್ತು ಉನ್ನತ ಶಿಕ್ಷಣ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ. ಉದ್ಘಾಟನೆ- ಸಚಿವ ಡಾ. ವಿ.ಎಸ್.ಆಚಾರ್ಯ. ಅತಿಥಿಗಳು- ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಡಾ. ಎನ್.ಪ್ರಭುದೇವ್, ಸಿಬಿಎಂ ನ ವಿಭಾಗೀಯ ನಿರ್ದೇಶಕಿ ಬಿ.ಗುಣವತಿ ಫರ್ನಾಂಡೀಸ್, ವಿ.ವಿ ಸಿಂಡಿಕೇಟ್ ಸದಸ್ಯ ಪ್ರೊ. ಕೆ.ವಿ.ಆಚಾರ್ಯ. ಬೆಳಿಗ್ಗೆ 10.30.

ರಿಯಾಲಿಟಿ ಪ್ಲಸ್: ಐಟಿಸಿ ವಿಂಡ್ಸರ್ ಮ್ಯಾನರ್ ಹೋಟೆಲ್. ರಿಯಲ್ ಎಸ್ಟೇಟ್ ಸಮ್ಮೇಳನ. 2011ರ ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿ- ಸಚಿವ ಆರ್.ಅಶೋಕ. ಸಂಜೆ 5.30.
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ. ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ. ಗಾಂಧಿ ಶಿಲ್ಪ ಬಜಾರ್‌ನ ಉದ್ಘಾಟನಾ ಸಮಾರಂಭ. ಉದ್ಘಾಟನೆ- ಸಚಿವ ಸಿ.ಎಚ್.ವಿಜಯ ಶಂಕರ್. ಅಧ್ಯಕ್ಷತೆ- ಶಾಸಕ ಆರ್.ರೋಷನ್ ಬೇಗ್. ಅತಿಥಿಗಳು- ಸಂಸದ ಪಿ.ಸಿ.ಮೋಹನ್, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ನಿರ್ದೇಶಕ ಎಸ್.ಕೆ.ರವಿಕುಮಾರ್, ಪಾಲಿಕೆ ಸದಸ್ಯ ಕಟ್ಟಾ ಜಗದೀಶ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆಡಳಿತಾಧಿಕಾರಿ ಶಂಕರ ಲಿಂಗೇಗೌಡ. ಸಂಜೆ 4.

ಸಚಿನ್ ಪಬ್ಲಿಕೇಷನ್ಸ್: ಗ್ರಂಥಾಲಯ ಸಭಾಂಗಣ, ನಗರ ಕೇಂದ್ರ ಗ್ರಂಥಾಲಯ, ಪಶ್ಚಿಮ ವಲಯ, ಹಂಪಿನಗರ. ಸತೀಶ ಕುಮಾರ ಎಸ್.ಹೊಸಮನಿ ಅವರ ‘ಗ್ರಂಥಾಲಯ ಸಂದರ್ಭ ಸೇವೆ ಮತ್ತು ಕರ್ನಾಟಕ ಪಬ್ಲಿಕ್ ಲೈಬ್ರರಿ- ಗುಲ್ಬರ್ಗ ನಗರ ಕೇಂದ್ರ ಗ್ರಂಥಾಲಯದ ಒಂದು ಅಧ್ಯಯನ’ ಪುಸ್ತಕಗಳ ಬಿಡುಗಡೆ ಸಮಾರಂಭ. ಸಾನಿಧ್ಯ- ಚಂದ್ರಶೇಖರ ಸ್ವಾಮೀಜಿ. ಪುಸ್ತಕಗಳ ಬಿಡುಗಡೆ- ಸಚಿವ ರೇವುನಾಯಕ ಬೆಳಮಗಿ. ಅಧ್ಯಕ್ಷತೆ- ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಎಸ್.ಬಿ.ಹೊಂಡದಕೇರಿ. ಅತಿಥಿಗಳು- ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿ.ಜಿ.ತಳವಾರ, ತುಮಕೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಡಿ.ಶಿವಲಿಂಗಯ್ಯ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ ಪಿ.ವೈ.ರಾಜೇಂದ್ರ ಕುಮಾರ್. ಬೆಳಿಗ್ಗೆ 11.

ಕನ್ನಡ ವಿಶ್ವವಿದ್ಯಾಲಯ: ಸೆನೆಟ್ ಹಾಲ್, ಸೆಂಟ್ರಲ್ ಕಾಲೇಜು. ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಸಂಪುಟಗಳ ಬಿಡುಗಡೆ ಸಮಾರಂಭ. ಬಿಡುಗಡೆ- ಕವಿ ಡಾ. ಚಂದ್ರಶೇಖರ ಕಂಬಾರ. ಅತಿಥಿಗಳು- ಬೆಂಗಳೂರು ವಿ.ವಿ ಕುಲಪತಿ ಡಾ. ಎನ್.ಪ್ರಭುದೇವ್, ಕುವೆಂಪು ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮುಖ್ಯಸ್ಥ ಡಾ. ರಾಜಾರಾಮ ಹೆಗಡೆ, ಅಧ್ಯಕ್ಷತೆ- ಹಂಪಿ ಕನ್ನಡ ವಿವಿ ಕುಲಪತಿ ಡಾ.ಎ.ಮುರಿಗೆಪ್ಪ. ಸಂಜೆ 6.30.

ಸತ್ಯತೀರ್ಥ ಪ್ರತಿಷ್ಠಾನ: ಪೂರ್ಣಪ್ರಮತಿ ಆವರಣ, ಗಿರಿನಗರ. ಪೂರ್ಣಪ್ರಮತಿ ಸಮನ್ವಯ ಕಲಿಕಾ ಕೇಂದ್ರದ ಉತ್ಸವ-2011. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು. ಉದ್ಘಾಟನೆ- ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ. ಅತಿಥಿಗಳು- ಗಾಯಕ ಆರ್.ಕೆ. ಶ್ರೀಕಂಠನ್, ಪಾಲಿಕೆ ಸದಸ್ಯೆ ಲಲಿತಾ, ಭಾರತೀಯ ವಿಜ್ಞಾನ ಸಂಸ್ಥೆಯ ಗಣಿತ ವಿಭಾಗದ ಪ್ರೊ. ಸಿ.ಆರ್.ಪ್ರಾಣೇಶಾಚಾರ್ಯ. ಬೆಳಿಗ್ಗೆ 9.30.

ಕನ್ನಡ ಸಾಹಿತ್ಯ ಪರಿಷತ್ತು: ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿ .77 ನೇ ಅಖಿಲ ಕನ್ನಡ ಸಾತ್ಯ ಸಮ್ಮೇಳನ ಅಂಗವಾಗಿ ಮಾಧ್ಯಮ ಕೇಂದ್ರದ ಉದ್ಫಾಟನೆ. ಉದ್ಘಾಟನೆ ಪತ್ರಕರ್ತ- ಎಸ್.ವಿ.ಜಯಶೀಲ ರಾವ್. ಬೆಳಿಗ್ಗೆ 11.30.

ಜೀವ ವಿಮಾ ಕನ್ನಡ ಬಳಗ: ಎ.ಡಿ.ಎ ರಂಗಮಂದಿರ, ಜೆ.ಸಿ.ರಸ್ತೆ. ಕನ್ನಡ ಬಳಗದ ರಜತೋತ್ಸವ ಮತ್ತು 2010ರ ರಾಜ್ಯೋತ್ಸವ ಸಮಾರಂಭ. ಅತಿಥಿಗಳು- ಚಲನಚಿತ್ರ ನಟ ಯಶ್, ಶಾಸಕ ನೆ.ಲ.ನರೇಂದ್ರಬಾಬು, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಮಹೇಶ್ ಜೋಷಿ, ಜೀವ ವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿಗಳಾದ ಸತ್ಪಾಲ್, ಎಸ್.ಚಕ್ರವರ್ತಿ. ಅಧ್ಯಕ್ಷತೆ- ಬಳಗದ ಅಧ್ಯಕ್ಷ ಶಿವಕುಮಾರ್. ಸಂಜೆ 5.30.

ಗ್ರೀನ್‌ವುಡ್ ಹೈ ಇಂಟರ್‌ನ್ಯಾಷನಲ್ ಸ್ಕೂಲ್: ವೈಟ್‌ಫೀಲ್ಡ್. ಪದವಿ ಪ್ರದಾನ ಸಮಾರಂಭ. ಅತಿಥಿ- ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ. ಸಂಜೆ 6.
ಅಂತರರಾಷ್ಟ್ರೀಯ ತಂತ್ರಜ್ಞಾನ ಕಾನೂನು ಸಂಘ (ಐಟೆಕ್ ಲಾ): ತಾಜ್‌ವೆಸ್ಟ್‌ಎಂಡ್ ಹೋಟೆಲ್, ರೇಸ್‌ಕೋರ್ಸ್ ರಸ್ತೆ. ವಕೀಲರ 7ನೇ ಅಂತರರಾಷ್ಟ್ರೀಯ ಏಷ್ಯನ್ ಸಮ್ಮೇಳನ. ಅತಿಥಿ- ಎನ್.ಸಂತೋಷ್ ಹೆಗ್ಡೆ. ಬೆಳಿಗ್ಗೆ 9.

ಶ್ರೀಕೃಷ್ಣ ಪದವಿ ಪೂರ್ವ ಮತ್ತು ಪದವಿ ಕಾಲೇಜು: ಐಟಿಐ ಲೇಔಟ್, ಬನಶಂಕರಿ 3ನೇ ಹಂತ. ವಾರ್ಷಿಕ ದಿನಾಚರಣೆ ಸಮಾರಂಭ. ಅತಿಥಿಗಳು- ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಪಾಲಿಕೆ ಸದಸ್ಯ ವೆಂಕಟೇಶ್, ಕಾಲೇಜಿನ ವ್ಯವಸ್ಥಾಪಕ ಅಧ್ಯಕ್ಷ ಡಾ. ಎಂ.ರುಕ್ಮಾಂಗದ ನಾಯ್ಡು. ಸಂಜೆ 4.30.

ಆಚಾರ್ಯ ಪಾಠಶಾಲಾ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು: ಎನ್.ಆರ್.ಕಾಲೋನಿ. ಕಾಲೇಜು ದಿನಾಚರಣೆ. ಅತಿಥಿಗಳು- ನಟ ಚಿ.ಗುರುದತ್, ಶಾರದಾ ಚಿ.ಉದಯ್‌ಶಂಕರ್, ಭಾರತೀಯ ಈಜು ಪ್ರತಿಷ್ಠಾನದ ರಾಷ್ಟ್ರೀಯ ಕೋಚ್ ಎಸ್.ಪ್ರದೀಪ್ ಕುಮಾರ್, ಎಪಿಎಸ್ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಟಿ.ವಿ.ಮಾರುತಿ. ಜಂಟಿ ಕಾರ್ಯದರ್ಶಿ ಸಿ.ನಾಗರಾಜ್. ಬೆಳಿಗ್ಗೆ 10.30.

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್: ಹೋಟೆಲ್ ಲಲಿತ್ ಅಶೋಕ್, ಕುಮಾರಕೃಪಾ ರಸ್ತೆ. ‘ಕಿಜಾಶಿ’ ಎಂಬ ನೂತನ ಕಾರು ಬಿಡುಗಡೆ ಸಮಾರಂಭ. ಅತಿಥಿ- ವ್ಯವಸ್ಥಾಪಕ ಕಾರ್ಯನಿರ್ವಾಹಕ ಅಧಿಕಾರಿ ಐ.ವಿ.ರಾವ್. ಬೆಳಿಗ್ಗೆ 11.45.

ವಿ.ವಿ.ಎನ್. ಪದವಿ ಕಾಲೇಜು: ವಾಣಿ ವಿಲಾಸ ರಸ್ತೆ, ವಿಶ್ವೇಶ್ವರಪುರ. 2010-11ನೇ ಸಾಲಿನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭ. ಅತಿಥಿಗಳು- ಚಲನಚಿತ್ರ ಸಾಹಿತಿ ಯೋಗರಾಜ್ ಭಟ್, ನಟಿ ಪೂಜಾಗಾಂಧಿ, ನಟ ಯಶ್, ಗಾಯಕಿ ಹೇಮಾ ಪ್ರಸಾದ್. ಅಧ್ಯಕ್ಷತೆ- ವಾಸವಿ ವಿದ್ಯಾನಿಕೇತನ್ ಟ್ರಸ್ಟ್‌ನ ಅಧ್ಯಕ್ಷ ತಲ್ಲಂ ವೆಂಕಟೇಶ್. ಸಂಜೆ 4.

ವಸಂತರತ್ನ ಪೌಂಢೇಶನ್ ಫಾರ್ ಆರ್ಟ್: ಆರ್ಮಿ ಪಬ್ಲಿಕ್ ಶಾಲೆ, ಕಾಮರಾಜ ರಸ್ತೆ. ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ. ಅತಿಥಿ- ಸಿನರ್ಜಿ ಪ್ರಾಪರ್ಟಿ ಡೆವಲಪ್‌ಮೆಂಟ್ ಸರ್ವೀಸ್ ಲಿಮಿಟೆಡ್‌ನ ಅಧ್ಯಕ್ಷ ಸಾಂಕಿ ಪ್ರಸಾದ್. ಬೆಳಿಗ್ಗೆ 11.

ಜೈನ್ ವಿಶ್ವವಿದ್ಯಾಲಯ: ನಿಮ್ಹಾನ್ಸ್ ಸಮ್ಮೇಳನ ಸಭಾಂಗಣ. ಹೊಸೂರು ರಸ್ತೆ. ಸಿಎಂಎಸ್ ಸಾಂಸ್ಕೃತಿಕ ಹಬ್ಬ ‘ಲಾಸ್ಯ’ ಪಾಶ್ಚಾತ್ಯ ಸಂಗೀತ. ಬೆಳಿಗ್ಗೆ 8.

ರಂಗದರ್ಶಿ

ಭಾಗವತರು ಸಾಂಸ್ಕೃತಿಕ ಸಂಘಟನೆ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ದಶಮಾನೋತ್ಸವ ನಿಮಿತ್ತ ರಂಗ ಸಿದ್ಧಿ ಸಂಪದ. ಸಮುದಾಯ ತಂಡದಿಂದ ‘ರಾಜಾ ರಾಣಿ- ಮಂತ್ರಿ ತಂತ್ರಿ’ ನಾಟಕ ಪ್ರದರ್ಶನ. ಅತಿಥಿ- ಡಾ. ವೇಮಗಲ್ ನಾರಾಯಣಸ್ವಾಮಿ. ಸಂಜೆ 7.

ಧಾರ್ಮಿಕ ಕಾರ್ಯಕ್ರಮಗಳು
ಗಣಪತಿ ದೇವಸ್ಥಾನ ಮತ್ತು ವಿದ್ಯಾಸಂಸ್ಥೆ: ಬಿಇಎಂಎಲ್ ಬಡಾವಣೆ, ಬಸವೇಶ್ವರ ನಗರ. ವಿಮಾನ ಗೋಪುರ ಕುಂಭಾಭಿಷೇಕ. ಸಾನಿಧ್ಯ- ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ. ಅತಿಥಿಗಳು- ಸಚಿವ ಎಸ್.ಸುರೇಶ್ ಕುಮಾರ್, ಜೆ.ಪಿ.ನಾರಾಯಣಸ್ವಾಮಿ, ಕೆ.ರಂಗಣ್ಣ, ಜೆ.ಮುನ್ನಾಗಪ್ಪ. ಸಂಜೆ 6.

ಅಖಿಲ ಭಾರತ ಹರಿದಾಸ ಸಮ್ಮೇಳನ ಟ್ರಸ್ಟ್: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ. ಹರಿದಾಸ ಸಾಹಿತ್ಯೋತ್ಸವ. ಚತುರ್ವೇದಿ ವೇದವ್ಯಾಸಾಚಾರ್ಯ ಅವರಿಂದ ‘ಸೃಷ್ಟಿ ಪ್ರಕರಣ ಸುಳಾದಿಗಳು’ ಉಪನ್ಯಾಸ. ಶ್ರೀಹರಿಹರನ್ ಮತ್ತು ಅಶೋಕ್ ಅವರಿಂದ ಹರಿದಾಸವಾಣಿ. ಸಂಜೆ 5.30.

ಶ್ರೀರಾಮ ಲಲಿತ ಕಲಾ ಮಂದಿರ: ಗಾಯನ ಸಮಾಜ, ಕೆ.ಆರ್.ರಸ್ತೆ. ವಸಂತ ಸಂಗೀತೋತ್ಸವ. ರಂಜನಿ ಮತ್ತು ಗಾಯತ್ರಿ ಅವರಿಂದ ಯುಗಳ ಗಾಯನ. ಪಿಟೀಲು- ಬಿ.ಯು.ಗಣೇಶ್ ಪ್ರಸಾದ್, ಮೃದಂಗ- ಎಚ್.ಎಸ್.ಸುಧೀಂದ್ರ, ಘಟ- ಎಸ್.ಎನ್.ನಾರಾಯಣಮೂರ್ತಿ. ಸಂಜೆ 5.45.

ತಿರುಪತಿ ತಿರುಮಲ ದೇವಸ್ಥಾನ ಹಿಂದೂ ಧರ್ಮ ಪ್ರಚಾರಕ ಟ್ರಸ್ಟ್: ಸುಮಂಗಲಿ ಸೇವಾಶ್ರಮ, ಚೋಳನಾಯಕನಹಳ್ಳಿ. ಸುಶೀಲಮ್ಮ ಅವರಿಂದ ಉಪನ್ಯಾಸ. ನಂತರ ಭಜನೆ. ಸಂಜೆ 6.

ರಾಘವೇಂದ್ರ ಸೇವಾ ಸಮಿತಿ: 6ನೇ ಕ್ರಾಸ್, ಸುಧೀಂದ್ರ ನಗರ, ಮಲ್ಲೇಶ್ವರ. ಪುರಂದರದಾಸರ ಪುಣ್ಯದಿನ. ಕಲ್ಲಾಪುರ ಪವಮಾನಾಚಾರ್ಯ ಅವರಿಂದ ‘ಸುಂದರ ಕಾಂಡ’ ಪ್ರವಚನ. ಸಂಜೆ 6.30.

ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಮಾರುತಿ ಕುಟೀರ, 9ನೇ ಬ್ಲಾಕ್, ಜಯನಗರ. ಡಾ. ಕೃಷ್ಣಮೂರ್ತಿ ಬಾಯರಿ- ಶ್ರೀ ಮಾರ್ಕಂಡೇಯ ಪುರಾಣ ಪ್ರವಚನ. ಸಂಜೆ 6.30.

ಗುರುರಾಜ ಸೇವಾ ಸಮಿತಿ: ನಂ.5, 2ನೇ ಮುಖ್ಯ ರಸ್ತೆ, 8ನೇ ‘ಎ’ ಅಡ್ಡರಸ್ತೆ, ಯಲಹಂಕ ಉಪನಗರ. ಸರ್ವಮೂಲ ಗ್ರಂಥಗಳ ಪ್ರವಚನ. ಸುವಿದ್ಯೇಂದ್ರ ತೀರ್ಥರಿಂದ ಉದ್ಘಾಟನೆ ಮತ್ತು ‘ಗೀತಾಭಾಷ್ಯ’ ಪ್ರವಚನ. ಸಂಜೆ 6.30.

ಸದ್ವಿಚಾರ ಸೇವಾ ಟ್ರಸ್ಟ್: ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ. ವೆಂಕಟೇಶಾಚಾರ್ಯ ಅವರಿಂದ ಮಹಾಭಾರತ ಪ್ರವಚನ ಮಾಲಿಕೆ. ಸಂಜೆ 6.30.

ಶ್ರೀ ತ್ಯಾಗರಾಜಸ್ವಾಮಿ ಭಜನ ಸಭಾ ಹಾಗೂ ಆರ್ಯವೈಶ್ಯ ಸಂಘ: ಕನ್ನಿಕಾ ಪರಮೇಶ್ವರಿ ದೇವಸ್ಥಾನ, 8ನೇ ಅಡ್ಡರಸ್ತೆ. ಮಲ್ಲೇಶ್ವರ. 46ನೇ ನಾದಜ್ಯೋತಿ ಸಂಗೀತೋತ್ಸವ. ಸಿಲುಕುಂದ ಸಹೋದರರಾದ ಸಿ.ಎನ್.ಚಂದ್ರಶೇಖರ್ ಮತ್ತು ತ್ಯಾಗರಾಜ್ ಅವರಿಂದ ಯುಗಳ ಪಿಟೀಲು. ಮೃದಂಗ- ಎ.ರೇಣುಕ ಪ್ರಸಾದ್, ತಬಲಾ- ಉದಯರಾಜ ಕರ್ಪೂರ. ಸಂಜೆ 6.45.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT