ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು-ಫೆಬ್ರುವರಿ 16, ಗುರುವಾರ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಫೆಬ್ರುವರಿ 16, ಗುರುವಾರ
ಅಖಿಲ ಕರ್ನಾಟಕ ಮಕ್ಕಳ ಕೂಟ:  ಆರ್.ಕಲ್ಯಾಣಮ್ಮ ಮಕ್ಕಳ ಆಟದ ಮೈದಾನ, ಕೋಟೆ. ವೆಬ್‌ಸೈಟ್ ಬಿಡುಗಡೆ ಕಾರ್ಯಕ್ರಮ ಉದ್ಘಾಟನೆ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಬಿ.ಜಿ.ರಂಗನಾಥ, ಅಧ್ಯಕ್ಷತೆ- ಕೂಟದ ಅಧ್ಯಕ್ಷ ಟಿ.ವಿ.ಮಾರುತಿ, ಅತಿಥಿ- ಬಿಬಿಎಂಪಿ ಸದಸ್ಯ ಬಿ.ವಿ.ಗಣೇಶ್, ಸಂಜೆ 5.30.

ಸಾಹಿತ್ಯ ಅಕಾಡೆಮಿ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಾಹಿತಿ ಎಲ್.ಬಸವರಾಜು ಅವರಿಗೆ ಶ್ರದ್ಧಾಂಜಲಿ, ಶ್ರದ್ಧಾಂಜಲಿ ಅರ್ಪಿಸುವವರು- ಸಾಹಿತಿಗಳಾದ ಜಿ.ಎಸ್.ಸಿದ್ಧಲಿಂಗಯ್ಯ, ಎಂ.ಎಚ್.ಕೃಷ್ಣಯ್ಯ, ಕೆ.ಮರುಳಸಿದ್ದಪ್ಪ, ಜಿ.ಕೆ.ಗೋವಿಂದ ರಾವ್, ನಲ್ಲೂರು ಪ್ರಸಾದ್, ಎಸ್.ಜಿ.ಸಿದ್ದರಾಮಯ್ಯ, ಶಿವರಾಮಯ್ಯ, ಬಸವರಾಜ ಕಲ್ಗುಡಿ, ಕೆ.ವೈ.ನಾರಾಯಣಸ್ವಾಮಿ, ಎನ್.ಬಿ.ಚಂದ್ರಮೋಹನ್, ಎಂ.ಭೈರೇಗೌಡ, ರಾಮಲಿಂಗಪ್ಪ ಟಿ.ಬೇಗೂರು. ಸಂಜೆ 5.

ಶ್ರೀ ಸಾಯಿ ಮಹಿಳಾ ಕಾಲೇಜು: ಶ್ರೀ ವೈ.ರಾಮಚಂದ್ರ ಸಭಾಂಗಣ, ಶ್ರೀ ಸಾಯಿ ಮಂದಿರ ರಸ್ತೆ, 3ನೇ ಅಡ್ಡರಸ್ತೆ, `ಡಿ~ ಬ್ಲಾಕ್, 2ನೇ ಹಂತ, ರಾಜಾಜಿನಗರ, `ಮಹಿಳೆ ಮತ್ತು ಪೊಲೀಸ್~ ವಿಷಯ ಕುರಿತ ದತ್ತಿ ಉಪನ್ಯಾಸ. ಅತಿಥಿಗಳು- ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ, ಸಂಸ್ಥೆಯ ಮುಖ್ಯಸ್ಥ ಆರ್.ಆನಂದ, ಬೆಳಿಗ್ಗೆ 11.

ಶ್ರೀ ಹಿಮವತ್ ಕೇದಾರ ಜನಕಲ್ಯಾಣ ಪ್ರತಿಷ್ಠಾನ: ಶ್ರೀ ಶರಣ ಸೇವಾ ಸಮಾಜ, 1ನೇ `ಆರ್~ ಬ್ಲಾಕ್, ಇಸ್ಕಾನ್ ದೇವಸ್ಥಾನದ ಹತ್ತಿರ, ರಾಜಾಜಿನಗರ, ಸಂಗೀತಯುಕ್ತ ಇಷ್ಟಲಿಂಗ ಮಹಾಶಿವಪೂಜೆ. ಶ್ರೀಮದ್ ಹಿಮವತ್ ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ 1008 ಜಗದ್ಗುರು ರಾವಲ್ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರಿಂದ ಗಣ್ಯರಿಗೆ ಗುರುರಕ್ಷೆ (ಬೆಳಿಗ್ಗೆ 8ಕ್ಕೆ) ಸಂಗೀತ, ವೇದಘೋಷ ಹಾಗೂ ಪ್ರಾರ್ಥನೆ. ಸಾನಿಧ್ಯ- ಕೇದಾರನಾಥ ಪೀಠದ ಸ್ವಾಮೀಜಿ ಕೇದಾರನಾಥ ರಾವಲ್ ಜಗದ್ಗುರು, ಅಧ್ಯಕ್ಷತೆ- ನ್ಯಾಯಮೂರ್ತಿ ಬಿ.ವಿ.ಪಿಂಟೋ, ಅತಿಥಿಗಳು- ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸಂಜೆ 6.

ಶ್ರೀ ಸಿದ್ಧಾಶ್ರಮ: 17ನೇ ಅಡ್ಡ ರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರ, ರಂಗನಾಥಪುರ, ಶ್ರೀ ರಾಮ ಚೈತನ್ಯ ಅನಾಥಾಲಯ ಹಾಗೂ ವೃದ್ಧಾಶ್ರಮ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಮತ್ತು ಶ್ರೀ ಕೋಟಿ ರಾಮನಾಮ ಬ್ಯಾಂಕಿನ ಉದ್ಘಾಟನೆ. ಅತಿಥಿಗಳು- ಮಾಜಿ ಶಾಸಕ ಎಂ.ಆರ್.ಸೀತಾರಾಂ, ಸಿದ್ಧಾಶ್ರಮದ ಕಾರ್ಯದರ್ಶಿ ಗೋಪಾಲರಾವ್, ಉಪಾಧ್ಯಕ್ಷ ಶ್ರೀನಿವಾಸರಾವ್, ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ನಾಗೇಶ್, ಮಧ್ಯಾಹ್ನ 12.05.

ರೇವಾ ಶಿಕ್ಷಣ ಸಂಸ್ಥೆ: ಕಟ್ಟಿಗೆಹಳ್ಳಿ, ಯಲಹಂಕ, `ಜಾಗತಿಕ ವ್ಯಾಪಾರ ಚಟುವಟಿಕೆಗಳಿಗೆ ಪೂರಕ ಕಸುವಿನ ಬೆಸುಗೆ~ ವಿಷಯ ಕುರಿತ ವಿಚಾರ ಸಂಕಿರಣ. ಉದ್ಘಾಟನೆ- ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಅಧ್ಯಕ್ಷತೆ- ಸಂಸ್ಥೆಯ ಮುಖ್ಯಸ್ಥ ಪಿ.ಶ್ಯಾಮ ರಾಜು, ಅತಿಥಿಗಳು- ಟಿಇಆರ್‌ಐನ ಪ್ರಾದೇಶಿಕ ನಿರ್ದೇಶಕ ಪ್ರಣಬ್ ದಾಸ್ ಗುಪ್ತ. ಬೆಳಿಗ್ಗೆ 10.

ಸಾಂಸ್ಕೃತಿಕ ಕಾರ್ಯಕ್ರಮ
ಸುಚೇತನಾ ಕಲಾವಿದರು:  ವಿನಾಯಕ, ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ, ಆರ್.ಟಿ.ಒ ರಸ್ತೆಯ ವಾರಿಯರ್ ಬೇಕರಿ ಎದುರು, ರಾಜಾಜಿನಗರ 2ನೇ ಬ್ಲಾಕ್. 45ನೇ ವಾರ್ಷಿಕೋತ್ಸವ ಸಮಾರಂಭ, ಅದ್ವೈತ ಬ್ರಹ್ಮ ಶಂಕರಾಚಾರ್ಯ ಉಪನ್ಯಾಸ. ಉಪನ್ಯಾಸ: ಅಮರನಾಥ್. ಗಾಯನ: ವಾಣಿ ಪುರಾಣಿಕ್. ಸಂಜೆ 6.

ಸುಂದರ ಸಾಹಿತ್ಯ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. `ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿಗಳಲ್ಲಿ ಧರ್ಮ ಮತ್ತು ಸಂಸ್ಕೃತಿ~ ಪುಸ್ತಕ ಲೋಕಾರ್ಪಣೆ ಸಮಾರಂಭ ಮತ್ತು ನಾಗರಾಜರಾವ್ ಹವಾಲ್ದಾರ್ ಅವರಿಂದ ಹಿಂದುಸ್ತಾನಿ ಗಾಯನ.ಅತಿಥಿಗಳು: ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ಪ್ರೊ.ಎಸ್.ರಾಮಸ್ವಾಮಿ, ಎಚ್.ಎಸ್.ವೆಂಕಟೇಶಮೂರ್ತಿ, ಜಿ.ಬಿ.ಹರೀಶ್, ಎನ್.ಎಸ್.ಶ್ರೀಧರ ಮೂರ್ತಿ. ಸಂಜೆ 5.30.

ರಾಮಕೃಷ್ಣ ವಿವೇಕಾನಂದ  ಸಾಧನಾ ಕೇಂದ್ರ: ನಂ.42/1, ವಿವೇಕಾನಂದ ಮಾರ್ಗ, ಗೋಕುಲ ಬಡಾವಣೆ, ದೇವಸಂದ್ರ, ಕೆ.ಆರ್.ಪುರಂ.  ಚಂದ್ರೇಶಾನಂದಜಿ ಅವರಿಂದ ರಾಮನಾಮ ಸಂಕೀರ್ತನೆ ಮತ್ತು ಭಜನೆ. ಸಂಜೆ 5.30.

ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು:  ಕಿತ್ತೂರು ಚನ್ನಮ್ಮ ಸಭಾಂಗಣ. ಶೇಷಾದ್ರಿ ರಸ್ತೆ. `ಕಲಾಸ್ಫೂರ್ತಿ~ ರಾಜ್ಯ ಮಟ್ಟದ ಜಾನಪದ, ಶಾಸ್ತ್ರೀಯ ಸಂಗೀತ-ನೃತ್ಯ ಅಂತರ ಕಾಲೇಜು ಸ್ಪರ್ಧೆಯ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭ. ಅತಿಥಿಗಳು: ಕನ್ನಡ ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಕರ್ನಾಟಕ ಶಾಸ್ತ್ರೀಯ ಸಂಗೀತ ಖ್ಯಾತ ಗಾಯಕ ಆರ್.ಕೆ.ಪದ್ಮನಾಭ. ಮಧ್ಯಾಹ್ನ 4.

ಬೆಂಗಳೂರು ಲಲಿತಕಲಾ ಪರಿಷತ್:  ಡಾ.ಎಚ್.ಎನ್.ಕಲಾಕ್ಷೇತ್ರ, ದೀಪಾ ಭಟ್ ಅವರಿಂದ ಭರತನಾಟ್ಯ. ಸಂಜೆ 6.30.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು: ಜೆ.ಎಸ್.ಎಸ್ ಕಾಲೇಜು ಸಭಾಂಗಣ, 38ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, 8ನೇ ವಿಭಾಗ, ಜಯನಗರ. ಚೈತನ್ಯ ಸಂಜೆ-401ರಲ್ಲಿ ಕನ್ನಡದ ಪ್ರಾಚೀನತೆ ಕುರಿತು ಉಪನ್ಯಾಸ. ಉಪನ್ಯಾಸ: ಸಾಹಿತಿ ಮತ್ತು ಕನ್ನಡ ಚಳವಳಿಗಾರ ಮಧು ಬಿಲ್ಲನಕೋಟೆ, ಅಧ್ಯಕ್ಷತೆ: ಬೆಂಗಳೂರು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದಿಬ್ಬೂರು ಸಿದ್ಧಲಿಂಗಪ್ಪ, ಅತಿಥಿಗಳು: ನಿವೃತ್ತ ಎಂಜಿನಿಯರ್ ಬಿ.ಎ.ನಂಜುಂಡಸ್ವಾಮಿ. ಸಂಜೆ 6.

ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವಲ್ಡ್ ಕಲ್ಚರ್: ನಂ.6, ಬಿ.ಪಿ.ವಾಡಿಯಾ ರಸ್ತೆ, ವಾಡಿಯಾ ಸಭಾಂಗಣ. ಶಿವಮೊಗ್ಗ ಸುಬ್ಬಣ್ಣ ಅವರಿಂದ ಸುಗಮ ಸಂಗೀತ ಗಾಯನ. ಸಂಜೆ 6.15.

ಗುರು ಶನೇಶ್ವರ ಸ್ವಾಮಿ ದೇವಾಲಯ: 40 ಅಡಿ ರಸ್ತೆ, ಆವಲಹಳ್ಳಿ, ಮುನೇಶ್ವರ ಬ್ಲಾಕ್. 24ನೇ ಮಹಾಶಿವರಾತ್ರಿ ವಾರ್ಷಿಕೋತ್ಸವ ಪ್ರಯುಕ್ತ ಗಣಪತಿ ಹೋಮ ಮತ್ತು ಶನೇಶ್ವರ ಸ್ವಾಮಿ ಹೋಮ. ಬೆಳಿಗ್ಗೆ 6ಕ್ಕೆ.

ಸಾಯಿಲಕ್ಷ್ಮಿ ಡ್ಯಾನ್ಸ್ ಅಂಡ್ ಆರ್ಫನೇಜ್ ಫೌಂಡೇಶನ್: ಕೆ.ಎಚ್.ಕಲಾಸೌಧ, ರಾಮಾಂಜನೇಯ ದೇವಸ್ಥಾನದ ರಸ್ತೆ, ಹನುಮಂತನಗರ. ಪ್ರಾರಂಭೋತ್ಸವ ಸಮಾರಂಭ. ಅತಿಥಿಗಳು: ಹಿರಿಯ ಚಲನಚಿತ್ರ ನಿರ್ದೇಶಕರಾದ ದೊರೈ ಭಗವಾನ್, ಶಾಸಕ ನೆ.ಲ.ನರೇಂದ್ರಬಾಬು, ಸಾಹಿತಿ ದೊಡ್ಡರಂಗೇ ಗೌಡ, ನಟ ದೀಪಕ್, ನಟಿ ದೀಪಾ ಸನ್ನಿಧಿ. ಸಂಜೆ 6.

ಕಾರಂಜಿ ಶ್ರೀರಾಮ ಸೇವಾ ಸಮಿತಿ ಟ್ರಸ್ಟ್: ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ. ಪುರಂದರ ಹಾಗೂ ತ್ಯಾಗರಾಜರ ಆರಾಧನಾ ಮಹೋತ್ಸವದಲ್ಲಿ ನಾದ ಸೇವೆ ಮತ್ತು ಅಶ್ವಥ್ ಹರಿದಾಸ್ ತಂಡದಿಂದ ಭರತನಾಟ್ಯ. ಸಂಜೆ 5.30.

ಭಾರತೀಯ ವಿದ್ಯಾ ಭವನ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾ ಭವನ, ರೇಸ್ ಕೋರ್ಸ್ ರಸ್ತೆ. `ದಿ ಓಪನ್ ಫ್ರೇಮ್~ ಕಲಾವಿದ ಎಸ್.ಜಿ.ವಾಸುದೇವ್ ಅವರ ಸಾಕ್ಷ್ಯಚಿತ್ರ ಪ್ರದರ್ಶನ. ನಿರ್ದೇಶನ- ಚೇತನ ಸಹಾ, ಛಾಯಾಗ್ರಹಣ: ನವರೋಜ್, ಸಂಶೋಧನೆ ಮತ್ತು ಸಂದರ್ಶನ: ಲತಾ ಮಣಿ, ಸಂಗೀತ: ಪ್ರಸನ್ನ. ಸಂಜೆ 6.

ಜೆಲಸ್ 21: ಜೆಲಸ್ 21 ಶೋ ರೂಂ, ಸಿಎಂಎಚ್ ರಸ್ತೆ, ಇಂದಿರಾ ನಗರ. ಮ್ಯಾಜಿಕ್ ಜೀನ್ಸ್ ಫ್ಯಾಷನ್ ಶೋ. ಸಂಜೆ 4.

ಬ್ರಹ್ಮ ಕುಮಾರಿ: ಸುಮಂಗಲಿ ಸೇವಾ ಆಶ್ರಮ ಮೈದಾನ. ಮಹಾ ಶಿವರಾತ್ರಿ ಮಹೋತ್ಸವ. ಅತಿಥಿಗಳು: ಬೇಲಿಮಠ ಸಂಸ್ಥಾನದ ಶಿವರುದ್ರ ಮಹಾ ಸ್ವಾಮಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಮಾಜಿ ಸಚಿವರಾದ ಮುಮ್ತಾಜ್ ಅಲಿ ಖಾನ್, ರಾಣಿ ಸತೀಶ್, ಚಿತ್ರ ಕಲಾವಿದ ಬಿ.ಕೆ.ಎಸ್.ವರ್ಮಾ, ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್ ಅಧ್ಯಕ್ಷ ಗುರುರಾಜ ಕರ್ಜಗಿ. ಸಂಜೆ 5.30.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಯವನಿಕಾ ಸಭಾಂಗಣ, ನೃಪತುಂಗ ರಸ್ತೆ. ವೈಶಾಲಿ ಅವರಿಂದ ಭರತನಾಟ್ಯ. ಸಂಜೆ 6.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT