ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ನಾಳೆ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚೈತನ್ಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ: 11ನೇ ವರ್ಷದ ಪುರಂದರ-ತ್ಯಾಗರಾಜರ ಆರಾಧನಾ ಮಹೋತ್ಸವ. ಉದ್ಘಾಟನೆ: ಡಿ. ಶಶಿಕಲಾ ಹಾಗೂ ನರಹರಿ ದೀಕ್ಷಿತ್. ಬೆಳಿಗ್ಗೆ 9.30ಕ್ಕೆ ಹಿರಿಯ-ಕಿರಿಯ ಕಲಾವಿದರಿಂದ ಸಂಗೀತ ಸೇವೆ. ಮಧ್ಯಾಹ್ನ 12.15ಕ್ಕೆ  ಡಿ. ಶಶಿಕಲಾ ಅವರಿಂದ ಗಾಯನ. ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿ. ಸ್ಥಳ: ಅಯ್ಯಪ್ಪಸ್ವಾಮಿ ಸೇವಾ ಸಮಿತಿ 1ನೇ ಮಹಡಿ, 27ನೇ ಅಡ್ಡರಸ್ತೆ, 7ನೇ ಬಡಾವಣೆ, ಜಯನಗರ.

ಸಂವಾದ ಟ್ರಸ್ಟ್: ಫೆಬ್ರುವರಿ ತಿಂಗಳ ಕಾರ್ಯಕ್ರಮದಲ್ಲಿ ಡಾ.ಬಿ.ಎನ್. ಸುಮಿತ್ರಾಬಾಯಿ ಅವರಿಂದ `ಕನ್ನಡ ಸಾಹಿತ್ಯ ಪರಂಪರೆ ಮತ್ತು ಅಸ್ಮಿತೆ~ ರಾಜಕಾರಣ  ಉಪನ್ಯಾಸ. ಸ್ಥಳ: ಜಗದೀಶ ವಿಜ್ಞಾನ ಕೇಂದ್ರ, ಜಯನಗರ ನ್ಯಾಶನಲ್ ಕಾಲೇಜು ಆವರಣ. ಬೆಳಿಗ್ಗೆ 10.

ಹಂಸಧ್ವನಿ ಸಂಸ್ಥೆ: `ಕಲಾಮಂಟಪ~ ಯುವ ವಿಭಾಗದ ಉದ್ಘಾಟನೆ: ಇಸ್ಕಾನ್ ಕಲಾಕ್ಷೇತ್ರದ ಶ್ರೀತಿರು. ಭೈರವಿ ಹಾಗೂ ಅಠಾಣ ರಾಗಗಳಲ್ಲಿ ಮನೋಧರ್ಮ ಕುರಿತು ಡಾ.ಆರ್.ಕೆ.ಶ್ರೀಕಂಠನ್ ಅವರಿಂದ ಉಪನ್ಯಾಸ. ನಂ.17, ಕ್ರಿಯೇಟಿವ್ ಚಿತ್ರಕೂಟ್ ಅಪಾರ್ಟ್‌ಮೆಂಟ್, ತಲಕಾವೇರಿ ಲೇಔಟ್, ಅಮೃತಹಳ್ಳಿ. ಬೆಳಿಗ್ಗೆ 10.

ರಂಗಶಂಕರ: ಎಂ.ಎಸ್. ಸತ್ಯು ಅವರ ಜೀವನದ ಕುರಿತು ಮಸೂದ್ ಅಖ್ತರ್ ನಿರ್ಮಿಸಿರುವ `ಕಹಾಂ ಕಾಹಾಂ ಸೆ ಗುಜರೆ~ ಸಾಕ್ಷ್ಯಚಿತ್ರ ಪ್ರದರ್ಶನ.
ಸ್ಥಳ: ರಂಗಶಂಕರ ಬೆಳಿಗ್ಗೆ 10.30.

ಸೃಷ್ಟಿ ದೃಶ್ಯ ಮಾಧ್ಯಮ ತಾಂತ್ರಿಕ ತರಬೇತಿ ಸಂಸ್ಥೆ: `ಕೆ.ಬಿ ನುಡಿನಮನ~
ಸ್ಥಳ: ಸುಚಿತ್ರಾ ಫಿಲ್ಮ್ ಸೊಸೈಟಿ,  2ನೇ ಹಂತ, ಪೋಸ್ಟ್ ಆಫೀಸ್ ಸಮೀಪ, ಬಿ.ವಿ.ಕಾರಂತ ರಸ್ತೆ, ಬನಶಂಕರಿ. ಬೆಳಿಗ್ಗೆ 11.

ಕನ್ನಡ ಸಂಘ ಕಾಂತಾವರ: `ನುಡಿ ನಮನ: 50~ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮ. ವಾಮನ ನಂದಾವರ ಅವರಿಂದ `ದೇಸೀಯ ವೀರಪರಂಪರೆಯಲ್ಲಿ ಕೋಟಿ ಚೆನ್ನಯರ ಔನ್ನತ್ಯ~ ಕುರಿತು ಉಪನ್ಯಾಸ. ಸ್ಥಳ: ಕನ್ನಡಭವನದ ಪಂಪ ಮಹಾಕವಿ ಸಭಾಭವನ. ಸಂಜೆ 3.

ಪ್ರಸಾರ ಭಾರತಿ ಭಾರತೀಯ ಪ್ರಸಾರ ನಿಗಮ: `ಆಕಾಶವಾಣಿ ಹಬ್ಬ~ ಉದ್ಘಾಟನೆ: ಆರ್. ವಿಶ್ವೇಶ್ವರನ್. ಸಂಜೆ 6ಕ್ಕೆ ಪಂಚವೀಣಾವಾದನ, ಸಂಜೆ 7ಕ್ಕೆ ಶಾಸ್ತ್ರೀಯ ಸಂಗೀತ. ಅಧ್ಯಕ್ಷತೆ: ಚೇತನ್ ಎಸ್.ನಾಯಕ್.ಸ್ಥಳ: ಕುವೆಂಪು ಕಲಾಕ್ಷೇತ್ರ.
ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ ಮತ್ತು ಕನ್ನಡ ವಾರ್ತಾ ಇಲಾಖೆ: ಪ್ರಶಸ್ತಿ ಪುರಸ್ಕೃತ `ಕೊಟ್ರೇಶಿ-ಕನಸು~ ಚಿತ್ರ ಪ್ರದರ್ಶನ. ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್. ನಟ: ವಿಜಯ್ ರಾಘವೇಂದ್ರ.
ಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ ನಂ.151,7ನೇ ಕ್ರಾಸ್, ಟೀಚರ್ಸ್‌ ಕಾಲೊನಿ, 1ನೇ ಹಂತ ಹಂತ. ಮಧ್ಯಾಹ್ನ 3.30.

ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಭಜನೆ ಕಾರ್ಯಕ್ರಮ. ಸ್ಥಳ: ವೀರಾಂಜನೇಯಸ್ವಾಮಿ ದೇವಸ್ಥಾನ, ಮಹಾಲಕ್ಷ್ಮಿಪುರ. ಬೆಳಿಗ್ಗೆ 9.

ಯಕ್ಷ ಕುಟೀರ: ಸೃಷ್ಟಿ ಸಾಂಸ್ಕೃತಿಕ ಕಲಾ ಸಂಘದ ಕಲಾವಿದರಿಂದ `ವೀರಮಣಿ ಕಾಳಗ~ ಜೋಡಾಟ. ಸ್ಥಳ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಹಿಂಭಾಗ, ಜೆ.ಸಿ.ರಸ್ತೆ. ಸಂಜೆ 5.30.

ಕಲಾರಂಗಲೋಕ: ಡಾ.ಶಿವರಾಮ ಕಾರಂತರ ಗರ್ಭಗುಡಿ ನಾಟಕ ಪ್ರರ್ದಶನ.
ಸ್ಥಳ: ರವೀಂದ್ರ ಕಲಾಕ್ಷೇತ್ರ. ಸಂಜೆ 6.30.

ನಾಟಕದ ಬಗ್ಗೆ:  ನಾಟಕದ ಕಥಾವಸ್ತು ಗರ್ಭಗುಡಿ. ಶಿಲ್ಪಿಯೊಬ್ಬ ಸುಂದರವಾಗಿ ನಿರ್ಮಿಸಿದ ವಿಗ್ರಹವನ್ನು ಪೂಜಾರಿಗಳು ಹೇಗೆ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ, ಅದನ್ನು ಹೇಗೆ ವಿರೂಪಗೊಳಿಸುತ್ತಾರೆ ಎಂಬುದನ್ನು ಸೂಚ್ಯವಾಗಿ ನಾಟಕದಲ್ಲಿ ಹೇಳಲಾಗಿದೆ.

ಪ್ರಪಂಚ: 27ನೇ ವಾರ್ಷಿಕೋತ್ಸವ ಹಾಗೂ ತ್ಯಾಗರಾಜ, ಪುರಂದರದಾಸರ ಆರಾಧನಾ ಮಹೋತ್ಸವ. ಬೆಳಿಗ್ಗೆ 7.30ಕ್ಕೆ ಊಂಛ ವೃತ್ತಿ, ಪ್ರಪಂಚ ಶಿಷ್ಯವೃಂದದವರಿಂದ ಸಂಗೀತ ಸೇವೆ. 9ರಿಂದ ಆರಾಧನಾ ಸೇವೆ  ಎನ್.ರಮಣಿ ಅವರಿಂದ ವೇಣುವಾದನ. ಸಿ.ಎನ್.ಚಂದ್ರಶೇಖರ್ (ಪಿಟೀಲು), ಸಿ.ಚೆಲುವರಾಜ್ (ಮೃದಂಗ), ಓಂಕಾರ ರಾವ್ (ಘಟಂ). ಉದ್ಘಾಟನೆ: ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ. ಅಧ್ಯಕ್ಷತೆ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ. ಸ್ಮರಣ ಸಂಚಿಕೆ ಬಿಡುಗಡೆ: ಬೆಂಗಳೂರು ವಿವಿ ಕುಲಸಚಿವ ಟಿ.ಆರ್ .ಸುಬ್ರಹ್ಮಣ್ಯ. ಪಂಚರತ್ನ ಕೃತಿಗಳ ಸೀಡಿ ಬಿಡುಗಡೆ: ಎನ್.ರಮಣಿ. ಬೆಳಿಗ್ಗೆ 10.

ಸ್ಥಳ: ರಾಮ ಮಂದಿರ ಅಸೋಸಿಯೇಷನ್ ಸಭಾಂಗಣ, ಶ್ರೀರಾಮ ದೇವಸ್ಥಾನ, ಮಾಡೆಲ್ ಹೌಸ್ ಬ್ಲಾಕ್, ರಾಘವೇಂದ್ರ ಸ್ವಾಮಿ ಮಠ ಮತ್ತು ಕೆ.ಜಿ.ಶಾಮಣ್ಣ ಪಾರ್ಕ್ ಸಮೀಪ, ಬಸವನಗುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT